

ಜಿಂದಗಿ ನಾ ಮಿಲೇಗಿ ದುಬಾರಾ ಸಿನಿಮಾದಲ್ಲಿ ಹೃತಿಕ್ ರೋಷನ್, ಫರ್ಹಾನ್ ಅಖ್ತರ್ ಮತ್ತು ಅಭಯ್ ಡಿಯೋಲ್ ಮುಖ್ಯಭೂಮಿಕೆ ನಿಭಾಯಿಸಿದ್ದರು. ಹೀಗಿರುವಾಗಲೇ ಅವಾರ್ಡ್ ಕಾರ್ಯಕ್ರಮದಲ್ಲಿ ಅಭಯ್ಗೆ ಮತ್ತು ಫರ್ಹಾನ್ಗೆ ಪೋಷಕ ನಟರು ಎಂದು ಕರೆಯಲಾಗಿತ್ತು. ಅದೇ ರೀತಿ ಮುಖ್ಯಭೂಮಿಕೆ ಪಟ್ಟ ಹೃತಿಕ್ ಮತ್ತು ಕತ್ರಿನಾಗೆ ನೀಡಲಾಗಿತ್ತು. ಬಾಲಿವುಡ್ನಲ್ಲಿ ಇದೆಲ್ಲ ಒಂದು ದೊಡ್ಡ ಲಾಬಿ. ಈ ತಾರತಮ್ಯದ ಬಗ್ಗೆ ಇತ್ತೀಚೆಗಷ್ಟೇ ಅಭಯ್ ಬಹಿರಂಗವಾಗಿ ಮಾತನಾಡಿದ್ದರು. ಇದೀಗ ಅದೇ ಅಭಯ್ ಮಾತಿಗೆ ಫರ್ಹಾನ್ ಚಾಟಿ ಬೀಸಿದ್ದಾರೆ.
ಇದನ್ನೂ ಓದಿ: ಪ್ರೊಡಕ್ಷನ್ ಹೌಸ್ ಶುರು ಮಾಡಿದ ಸೋನಲ್
‘ಸಿನಿಮಾ ಕ್ಷೇತ್ರದಲ್ಲಿ ಎಲ್ಲರೂ ಅವರವರ ಅಸ್ತತ್ವ ಕಾಯ್ದುಕೊಳ್ಳುವಿಕೆಗಾಗಿ ರೇಸ್ನಲ್ಲಿ ಹೋರಾಡುತ್ತಿರುತ್ತಾರೆ. ಆದರೆ, ಅದು ಎಲ್ಲರಿಗೂ ದಕ್ಕುವುದಿಲ್ಲ. ಹಾಗಾಗಿ ನಮ್ಮತನದ ಮೇಲೆ ನಾವು ನಂಬಿಕೆ ಇಡಬೇಕು. ಶಿಸ್ತುಬದ್ಧವಾಗಿ ಕಟ್ಟುನಿಟ್ಟಿನ ಕೆಲಸದ ಮೂಲಕ ನಮ್ಮತನವನ್ನು ತೋರಿಸಬೇಕು. ಈ ಸಿನಿಮಾ ಬಂದ ಮೇಲೆ ಎಷ್ಟು ಮ್ಯಾಗಜೀನ್ಗಳಿಗೆ ನೀನು ಕವರ್ ಪೇಜ್ನಲ್ಲಿ ಕಾಣಿಸಿಕೊಂಡಿದ್ದೀಯಾ, ಪತ್ರಿಕೆ ಮುಖಪುಟದಲ್ಲಿ ಬಂದಿದ್ದೀಯಾ?’ ಎಂದಿದ್ದಾರೆ.
‘ನನಗನಿಸಿದ ಮಟ್ಟಿಗೆ ನೀನು ತಪ್ಪಾದ ವೃತ್ತಿಯನ್ನು ಆಯ್ದುಕೊಂಡಿದ್ದೀಯಾ. ನೀನು ಇಲ್ಲಿರಬಾರದಿತ್ತು. ನೀನು ಇಲ್ಲಿ ನಟ, ನಿರ್ದೇಶಕ, ಸಿಂಗರ್, ಸಂಗೀತ ನಿರ್ದೇಶಕ ಆಗಲು ಬಂದಿದ್ದೀಯಾ ಅಥವಾ ರಿಯಾಲಿಟಿ ಸ್ಟಾರ್ ಆಗುವ ಉದ್ದೇಶವಾ?’ ಹೀಗೆ ಅಭಯ್ಗೆ ಒಂದಷ್ಟು ಕಿವಿ ಮಾತು ಹೇಳಿದ್ದಾರೆ.
ಅಂದಹಾಗೆ, ಅಭಯ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡ ಒಂದಷ್ಟು ಸಾಲುಗಳು ಇಲ್ಲಿವೆ. ‘ಬಹುತೇಕ ಎಲ್ಲಾ ಪ್ರಶಸ್ತಿ ಕಾರ್ಯಕ್ರಮಗಳು ನನ್ನನ್ನು ಮತ್ತು ಫರ್ಹಾನ್ ಅವರನ್ನು ಮುಖ್ಯ ಪಾತ್ರಗಳಿಂದ ಕೆಳಗಿಳಿಸಿವೆ. ನಮ್ಮಿಬ್ಬರನ್ನು ‘ಪೋಷಕ ನಟರು’ ಎಂದು ನಾಮಕರಣ ಮಾಡಿವೆ. ಹೃತಿಕ್ ಮತ್ತು ಕತ್ರಿನಾ ಅವರನ್ನು ‘ಪ್ರಮುಖ ಪಾತ್ರದಲ್ಲಿ ನಟರು’ ಎಂದು ನಾಮಿನೇಟ್ ಮಾಡಲಾಯಿತು. ಹಾಗಾದರೆ, ಚಿತ್ರದಲ್ಲಿ ಆತನ ಸ್ನೇಹಿತರಾದ ಮಾತ್ರಕ್ಕೆ ನಾವೇಕೆ ಪೋಷಕ ನಟರಾಗಬೇಕು? ಇದೆಲ್ಲದರ ಹಿಂದೆ ದೊಡ್ಡ ಲಾಬಿ ನಡೆಯುತ್ತಿದೆ’ ಎಂದು ಸುದೀರ್ಘ ಪತ್ರವೊಂದನ್ನು ಬರೆದುಕೊಂಡಿದ್ದರು. (ಏಜೆನ್ಸೀಸ್)