ನವದೆಹಲಿ: ಇಂದು ಸಮಾಜದಲ್ಲಿ ನಡೆಯುತ್ತಿರುವ ಅಪರಾಧಗಳಿಗೆ ವಿವಾಹೇತರ ಸಂಬಂಧವು ಕೂಡ ಒಂದು ಪ್ರಮುಖ ಕಾರಣವಾಗಿದೆ. ಮದುವೆಯಾಗಿದ್ದರೂ ಬೇರೊಬ್ಬರ ಮೋಹಕ್ಕೆ ಬಿದ್ದು ಸಂಗಾತಿಗೆ ಮೋಸ ಮಾಡುತ್ತಿದ್ದಾರೆ. ಅಲ್ಲದೆ ತಮ್ಮ ಸುಂದರ ಸಂಸಾರವನ್ನು ಸಹ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೇವಲ ಸಾಮಾನ್ಯ ಜನರು ಮಾತ್ರವಲ್ಲ, ಇತರರಿಗೆ ಬುದ್ಧಿ ಹೇಳುವಂತಹ ಗೌರವಾನ್ವಿತ ಹುದ್ದೆಯಲ್ಲಿರುವ ಪೋಲೀಸರಲ್ಲೂ ಕೆಲವರು ಇಂತಹ ದುಷ್ಟ ಕೆಲಸ ಮಾಡಿ ಸಿಕ್ಕಿಬೀಳುತ್ತಿದ್ದಾರೆ.
ಹೌದು, ಇತ್ತೀಚೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಬೇರೊಬ್ಬ ಮಹಿಳೆಯೊಂದಿಗೆ ಇದ್ದಂತಹ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದರಿಂದ ಆಕ್ರೋಶಗೊಂಡ ಪತ್ನಿ ಇಬ್ಬರನ್ನೂ ಬೀದಿಗೆಳೆದು ತರಾಟೆಗೆ ತೆಗೆದುಕೊಳ್ಳುವ ಮೂಲಕ ಭಾರಿ ಹೈಡ್ರಾಮವನ್ನೇ ಸೃಷ್ಟಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮುಜಾಫರ್ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರುಷ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಆಗ್ರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಬ್ ಇನ್ಸ್‌ಪೆಕ್ಟರ್ ನಡುವೆ ವಿವಾಹೇತರ ಸಂಬಂಧ ಇತ್ತು. ಇಬ್ಬರು ಸರ್ಕಾರಿ ಕ್ವಾರ್ಟರ್ಸ್ನಲ್ಲಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿ, ಮಗ ಮತ್ತು ಕುಟುಂಬದ ಸದಸ್ಯರು ಇಬ್ಬರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳಿಕ ಇಬ್ಬರನ್ನು ಮನೆಯಿಂದ ಹೊರಗೆ ಎಳೆದುತಂದು ಸಾರ್ವಜನಿಕರ ಮುಂದೆ ಥಳಿಸಿದ್ದಾರೆ. ಸ್ಥಳದಲ್ಲಿ ಭಾರಿ ಹೈಡ್ರಾಮವೇ ಜರುಗಿತು.
ಮಾಧ್ಯಮ ವರದಿಗಳ ಪ್ರಕಾರ, ಆಗ್ರಾ ಕಮಿಷನರೇಟ್‌ನ ನಗರ ವಲಯದಲ್ಲಿ ನಿಯೋಜಿತರಾಗಿರುವ ಮಹಿಳಾ ಇನ್ಸ್‌ಪೆಕ್ಟರ್ ಶೈಲಿ ರಾಣಾ ಅವರು ಮುಜಾಫರ್‌ನಗರ ಜಿಲ್ಲೆಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜತೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ. ಈ ಘಟನೆಯು ಆಗ್ರಾ ಪೊಲೀಸರಿಗೆ ಭಾರಿ ಮುಜುಗರವನ್ನು ಉಂಟುಮಾಡಿದೆ. ಏಕೆಂದರೆ ವಿಡಿಯೋವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇದ್ದು, ಅನೇಕರು ಪೊಲೀಸ್ ಅಧಿಕಾರಿಗಳ ನಡೆಯನ್ನು ಖಂಡಿಸುತ್ತಿದ್ದಾರೆ.
ಈ ಘಟನೆಯ ಬಗ್ಗೆ ಉನ್ನತ ಪೊಲೀಸ್ ಅಧಿಕಾರಿಗಳು ಯಾರೂ ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರಿ ಕ್ವಾರ್ಟರ್ಸ್ ಮುಂದೆಯೇ ಇಂಥದ್ದೊಂದು ಹೈಡ್ರಾಮ ನಡೆದಿದ್ದು, ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕಿದೆ. ಇನ್ನು ಈ ಘಟನೆ ವೃತ್ತಿಪರ ನಡವಳಿಕೆ ಮತ್ತು ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಕಾನೂನು ಜಾರಿ ಸಂಸ್ಥೆಗಳು ಎದುರಿಸುತ್ತಿರುವ ಸಂಕೀರ್ಣತೆಗಳು ಮತ್ತು ಸವಾಲುಗಳನ್ನು ಎತ್ತಿ ತೋರಿಸಿದೆ. (ಏಜೆನ್ಸೀಸ್)
उत्तर प्रदेश : आगरा में महिला इंस्पेक्टर के कमरे पर पुरुष इंस्पेक्टर साहब "रंगे हाथों" धर लिए गए। दोनों की खूब पिटाई हुई। महिला इंस्पेक्टर आगरा और पुरुष इंस्पेक्टर मुजफ्फरनगर में पोस्टेड हैं। पुरुष इंस्पेक्टर साहब के नोएडा में भी खूब चर्चे रहे हैं।pic.twitter.com/miDKmQqya9
— Sachin Gupta (@SachinGuptaUP) August 3, 2024
ಲಂಕಾ ಕೊಟ್ಟ ಶಾಕ್ನಿಂದ ತಲೆಕೆಳಗಾಯಿತು ಗಂಭೀರ್ ಲೆಕ್ಕಾಚಾರ! ಒತ್ತಡಕ್ಕೆ ಸಿಲುಕಿದ ಗೌತಿ
ಈ ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಅನುಸೂಯಾ! ತಾನಾಗೇ ಟ್ರೋಲಿಗರ ಬಲೆಗೆ ಬಿದ್ದ ತೆಲುಗು ಬ್ಯೂಟಿ