ಲಂಕಾ ಕೊಟ್ಟ ಶಾಕ್​ನಿಂದ ತಲೆಕೆಳಗಾಯಿತು ಗಂಭೀರ್​ ಲೆಕ್ಕಾಚಾರ! ಒತ್ತಡಕ್ಕೆ ಸಿಲುಕಿದ ಗೌತಿ

Gambhir

ನವದೆಹಲಿ: ಟೀಮ್​ ಇಂಡಿಯಾದ ಲೆಜೆಂಡರಿ ಕ್ರಿಕೆಟಿಗ ಗೌತಮ್ ಗಂಭೀರ್, ಶ್ರೀಲಂಕಾ ವಿರುದ್ಧದ ಟಿ20 ಸರಣಿಯೊಂದಿಗೆ ಭಾರತದ ಕೋಚ್ ಆಗಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿರುವುದು ಕ್ರೀಡಾಭಿಮಾನಿಗಳಿಗೆ ಗೊತ್ತೇ ಇದೆ. ಮೊದಲ ಸರಣಿಯಲ್ಲೇ ಆತಿಥೇಯ ಲಂಕಾ ತಂಡದಿಂದ ತೀವ್ರ ಪೈಪೋಟಿ ಎದುರಾದರೂ ಭಾರತ ತಂಡ ಸತತ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಟಿ20 ಸರಣಿಯಲ್ಲಿ ಕ್ಲೀನ್​ ಸ್ವೀಪ್​ ಮಾಡಿದ ಭಾರತ ಏಕದಿನ ಸರಣಿಯಲ್ಲೂ ಲಂಕಾವನ್ನು ವೈಟ್ ವಾಶ್ ಮಾಡಲಿದೆ ಎಂದು ಭಾವಿಸಿದ್ದರು. ಏಕೆಂದರೆ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಂತಹ ಅಗ್ರ ಆಟಗಾರರು ತಂಡದಲ್ಲಿದ್ದು, ಆತಿಥೇಯ ತಂಡವನ್ನು ಸುಲಭವಾಗಿ ಬಗ್ಗುಬಡಿಯಬಹುದು ಸುಲಭ ಅಂದುಕೊಂಡಿದ್ದರು. ಆದರೆ, ಯುವಕರೇ ತುಂಬಿದ್ದ ಲಂಕಾ ತಂಡ ದೃಢ ಸಂಕಲ್ಪದಿಂದ ಆಡಿ, ಮೊದಲ ಪಂದ್ಯದಲ್ಲೇ ಭಾರತಕ್ಕೆ ಆಘಾತ ನೀಡಿತು. ಲಂಕಾ ಪಡೆ ಸೋಲಿನ ಸುಳಿಯಿಂದ ಹೊರಬಂದು ಪಂದ್ಯವನ್ನು ಟೈ ಮಾಡಿಕೊಂಡಿತು.

ಶ್ರೀಲಂಕಾ ಈ ರೇಂಜ್​ನಲ್ಲಿ ಸೆಣಸಾಡಿ ಸೋಲುವ ಪಂದ್ಯವನ್ನು ಟೈ ಮಾಡಿಕೊಳ್ಳುತ್ತದೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಸ್ಟಾರ್ ಆಟಗಾರರಿಂದ ತುಂಬಿರುವ ಭಾರತಕ್ಕೆ ಸವಾಲಾಗುತ್ತದೆ ಎಂದು ಭಾವಿಸಿರಲಿಲ್ಲ. ಆದರೆ, ಈ ಪಂದ್ಯದ ಫಲಿತಾಂಶದಿಂದ ಹೊಸ ಕೋಚ್ ಗೌತಮ್ ಗಂಭೀರ್‌ಗೆ ಹೊಸ ಟೆನ್ಶನ್ ಶುರುವಾಗಿದೆ. ಪಂದ್ಯ ಕೈ ತಪ್ಪಿದ್ದರಿಂದ ಅವರು ಗಂಭೀರವಾಗಿಯೇ ಇದ್ದರು. ಲಂಕಾದಂತಹ ತಂಡದ ವಿರುದ್ಧ ಪಂದ್ಯವನ್ನು ಟೈ ಮಾಡಿಕೊಂಡಿದ್ದು, ನೈತಿಕವಾಗಿ ಸೋಲಿಗೆ ಸಮಾನ ಎಂಬುದು ಗೌತಿಗೆ ಗೊತ್ತಿದೆ. ಅದಕ್ಕಾಗಿಯೇ ಅವರು ಭಾರತದ ಪ್ರದರ್ಶನ ಮತ್ತು ಬ್ಯಾಟರ್‌ಗಳ ವೈಫಲ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅದೇ ಸಮಯದಲ್ಲಿ ಅವರು ಒತ್ತಡಕ್ಕೂ ಒಳಗಾಗಿದ್ದಾರೆ. ಟಿ20 ಸರಣಿಯಲ್ಲಿ ಮಾಡಿದ ಪ್ರಯೋಗ ಏಕದಿನ ಮಾದರಿ ಪಂದ್ಯದಲ್ಲಿ ವಿಫಲವಾದ ಕಾರಣ ಹೊಸ ಕೋಚ್​ಗೆ ಆತಂಕ ಶುರುವಾಗಿದೆ.

ಕೋಚ್ ಗಂಭೀರ್ ಅವರ ಸಲಹೆಯ ಮೇರೆಗೆ ನಾಯಕ ರೋಹಿತ್ ಶರ್ಮ, ಮೊದಲ ಏಕದಿನ ಪಂದ್ಯದ ವೇಳೆ ಉಪನಾಯಕ ಶುಭಮನ್ ಗಿಲ್ ಅವರಿಗೆ ಬೌಲಿಂಗ್ ಮಾಡಲು ಒಂದು ಓವರ್ ನೀಡಿದರು. ಆದರೆ ಆ ಓವರ್‌ನಲ್ಲಿ ಗಿಲ್ 14 ರನ್ ನೀಡಿದರು. ಬ್ಯಾಟ್ಸ್‌ಮನ್‌ಗಳಾದ ರಿಯಾನ್ ಪರಾಗ್, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಕೂಡ ಟಿ20 ಸರಣಿಯಲ್ಲಿ ಬೌಲಿಂಗ್‌ನಲ್ಲಿ ಯಶಸ್ವಿಯಾಗಿದ್ದರು. ಆ ಪ್ರಯೋಗದ ಭಾಗವಾಗಿ, ಗಿಲ್​ಗೆ ಬೌಲಿಂಗ್ ಮಾಡಲು ಅವಕಾಶ ನೀಡಲಾಯಿತು. ಆದರೆ, ಗಿಲ್​ ಫೇಲ್​ ಆದರು. ಹಾಗಾಗಿ ಮತ್ತೊಮ್ಮೆ ಬೌಲಿಂಗ್ ಮಾಡಲು ಅವಕಾಶ ನೀಡಲಿಲ್ಲ.

ರೋಹಿತ್​ ಅವರು ಎಲ್ಲ ಸಾಮಾನ್ಯ ಬೌಲರ್‌ಗಳನ್ನು ಬಳಸಿದರು. ಶಿವಂ ದುಬೆಗು ಕೂಡ ಹೆಚ್ಚು ಬೌಲಿಂಗ್ ಮಾಡಲು ಅವಕಾಶ ಕೊಡಲಿಲ್ಲ. ಆದರೆ, ಆರನೇ ಬೌಲರ್‌ನ ಕೊರತೆಯನ್ನು ನೀಗಿಸಲು ಬ್ಯಾಟಿಂಗ್ ಆಲ್‌ರೌಂಡರ್‌ಗಳ ಜೊತೆಗೆ ಮೂರ್ನಾಲ್ಕು ಓವರ್‌ಗಳನ್ನು ಬೌಲ್ ಮಾಡುವ ಬ್ಯಾಟ್ಸ್‌ಮನ್‌ಗಳನ್ನು ಸಹ ಬಳಸಬೇಕು. ಆದರೆ, ಲಂಕಾ ನೀಡಿರುವ ಶಾಕ್​ನಿಂದ ಈ ಪ್ರಯೋಗವನ್ನು ಗೌತಿ ನಿಲ್ಲಿಸಿದರೆ, ಚಾಂಪಿಯನ್ಸ್ ಟ್ರೋಫಿಯಂತಹ ಐಸಿಸಿ ಟೂರ್ನಿಗಳಲ್ಲಿ ಬೆದರಿಕೆ ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈ ಸವಾಲನ್ನು ಮೆಟ್ಟಿ ನಿಂತರೆ ಯಶಸ್ಸು ನಮ್ಮದಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ಆರಂಭದಲ್ಲೇ ಗೌತಮ್​ ಗಂಭೀರ್​ಗೆ ಶಾಕ್​! ಈ ಆಟಗಾರರ ಮೇಲೆ ಭರವಸೆ ಕಳೆದುಕೊಂಡ ಗೌತಿ

ಕೋಚ್​ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲ್ಲ; ಗೌತಿ ಕುರಿತು ಶಾಕಿಂಗ್​ ಹೇಳಿಕೆ ಕೊಟ್ಟ ವಿಶ್ವಕಪ್​ ವಿಜೇತ ತಂಡದ ಆಟಗಾರ

ಬುಮ್ರಾರನ್ನು ಶ್ಲಾಘಿಸಿ ಪಾಕ್​ ಕ್ರಿಕೆಟಿಗರಿಗೆ ಹೋಲಿಸಿದ ಟೀಮ್​ ಇಂಡಿಯಾ ಮಾಜಿ ಕೋಚ್​!

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…