ಸಿನಿಮಾ

ಇನ್ಮುಂದೆ ಎಲ್‌ಕೆಜಿ ಪ್ರವೇಶಕ್ಕೆ 4 ವರ್ಷ ವಯೋಮಿತಿ ನಿಗದಿ; ಪಾಲಕರಿಂದ ವಿರೋಧ

ಬೆಂಗಳೂರು: ರಾಜ್ಯದ ಶಿಕ್ಷಣ ಇಲಾಖೆಯು ಪೂರ್ವ ಪ್ರಾಥಮಿಕ ತರಗತಿಗಳ ಪ್ರವೇಶಾತಿಗೆ ವಯೋಮಿತಿ ನಿಗದಿ ಮಾಡಿದ್ದು, ಆ ಪ್ರಕಾರ ಎಲ್‌ಕೆಜಿ ತರಗತಿಗೆ ಪ್ರವೇಶ ಕಲ್ಪಿಸಲು ಜೂನ್ 1ಕ್ಕೆ ಅನ್ವಯವಾಗುವಂತೆ 4 ವರ್ಷಗಳ ವಯೋಮಿತಿಯನ್ನು ನಿಗದಿ ಮಾಡಿದೆ.

ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರಬೇಕು

ಶಿಕ್ಷಣ ಹಕ್ಕು ಕಾಯ್ದೆ 2009 ಮತ್ತು ಕಡ್ಡಾಯ ಶಿಕ್ಷಣ ನಿಯಮಗಳು 2012 ರಂತೆ ಶೈಕ್ಷಣಿಕ ವರ್ಷದ ಜೂ.1ಕ್ಕೆ ಕಡ್ಡಾಯವಾಗಿ 6 ವರ್ಷ ಪೂರ್ಣಗೊಂಡಿರುವ ಮಗುವನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿದೆ.

ಇದನ್ನೂ ಓದಿ: ಚುನಾವಣೆಯ ಹೊಸ್ತಿಲಲ್ಲೇ ಕೋಲಾರ ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್​ಗೆ ಬಂಧನ ಭೀತಿ

ಈ ನಿಯಮವನ್ನು ರಾಜ್ಯದಲ್ಲಿ 2025-26ನೇ ಸಾಲಿನಿಂದ ಅನ್ವಯವಾಗುವಂತೆ ಜಾರಿಗೊಳಿಸಲು ಈಗಾಗಲೇ ಆದೇಶ ಹೊರಡಿಸಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನಿಂದ ಎಲ್‌ಕೆಜಿ ತರಗತಿಗೆ ದಾಖಲಾಗಿ ಹೊಂದಲು 2023ರ ಜೂ.1ಕ್ಕೆ ಅನ್ವಯವಾಗುವಂತೆ 4 ವರ್ಷಗಳ ವಯೋಮಿತಿಯನ್ನು ನಿಗದಿ ಮಾಡಿ ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಜ್ಞಾಪನ ಪತ್ರ ಹೊರಡಿಸಿದ್ದಾರೆ.

ಪಾಲಕರ ವಿರೋಧ

ಸರ್ಕಾರ ನಿಗದಿ ಮಾಡಿರುವ ವಯೋಮಿತಿಯನ್ನು ಪಾಲಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲಾ ಪ್ರವೇಶಾತಿಯನ್ನು 6 ವರ್ಷಕ್ಕೆ ನಿಗದಿ ಮಾಡಿರುವುದರಿಂದ ಸಾಕಷ್ಟು ಸಮಸ್ಯೆಯಾಗಲಿದೆ. ಜೂನ್ ಮತ್ತು ಜುಲೈನಲ್ಲಿ ಜನಿಸಿರುವ ಮಕ್ಕಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಮತ್ತೊಂದು ವರ್ಷ ವ್ಯರ್ಥವಾಗಿ ಕಾಯಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಹಿಂದೆ ಇದ್ದ 5.5 ವರ್ಷದಿಂದ 7 ವರ್ಷಗಳ ವಯೋಮಿತಿಯು ವೈಜ್ಞಾನಿಕವಾಗಿದೆ. ಈಗ ರೂಪಿಸಿರುವ ನಿಯಯವು ಅವೈಜ್ಞಾನಿಕವಾಗಿದ್ದು, ಮಕ್ಕಳ ಸ್ನೇಹಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Latest Posts

ಲೈಫ್‌ಸ್ಟೈಲ್