

ವೆಲ್ಲಿಂಗ್ಟನ್: ಗ್ಲೆನ್ ಮ್ಯಾಕ್ಸ್‌ವೆಲ್ (70 ರನ್, 31 ಎಸೆತ, 8 ಬೌಂಡರಿ, 5 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಆಶ್ಟನ್ ಅಗರ್ (30ಕ್ಕೆ 6) ಮಾರಕ ಸ್ಪಿನ್ ಬೌಲಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 64 ರನ್‌ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 5 ಪಂದ್ಯಗಳ ಸರಣಿಯನ್ನು ಜೀವಂತವಿಟ್ಟಿರುವ ಆರನ್ ಫಿಂಚ್ ಪಡೆ, ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ತಂಡ, ಮ್ಯಾಕ್ಸಿ ಜತೆಗೆ ನಾಯಕ ಆರನ್ ಫಿಂಚ್ (69) ಮತ್ತು ಜೋಶ್ ಫಿಲಿಪ್ (43) ಬಿರುಸಿನ ಬ್ಯಾಟಿಂಗ್‌ನಿಂದ 4 ವಿಕೆಟ್‌ಗೆ 208 ರನ್ ಪೇರಿಸಿತು. ಪ್ರತಿಯಾಗಿ ಕಿವೀಸ್ ತಂಡ ಅಗರ್ ದಾಳಿಗೆ ತತ್ತರಿಸಿ 17.1 ಓವರ್‌ಗಳಲ್ಲಿ 144 ರನ್‌ಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 8.3 ಓವರ್‌ಗಳಲ್ಲಿ 2 ವಿಕೆಟ್‌ಗೆ 80 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಕಿವೀಸ್, ಅಗರ್ ದಾಳಿಗಿಳಿದ ಬಳಿಕ 35 ರನ್ ಅಂತರದಲ್ಲಿ ಕೊನೇ 7 ವಿಕೆಟ್ ಕಳೆದುಕೊಂಡಿತು. ಸರಣಿಯ 4ನೇ ಪಂದ್ಯ ಶುಕ್ರವಾರ ವೆಲ್ಲಿಂಗ್ಟನ್‌ನಲ್ಲೇ ನಡೆಯಲಿದೆ.
ಆಸ್ಟ್ರೇಲಿಯಾ: 4 ವಿಕೆಟ್‌ಗೆ 208 (ವೇಡ್ 5, ಫಿಂಚ್ 69, ಫಿಲಿಪ್ 43, ಮ್ಯಾಕ್ಸ್‌ವೆಲ್ 70, ಸೋಧಿ 32ಕ್ಕೆ 2, ಸೌಥಿ 37ಕ್ಕೆ 1). ನ್ಯೂಜಿಲೆಂಡ್: 17.1 ಓವರ್‌ಗಳಲ್ಲಿ 144 (ಗುಪ್ಟಿಲ್ 43, ವಿಲಿಯಮ್ಸನ್ 9, ಕಾನ್‌ವೇ 38, ನೀಶಾಮ್ 0, ಅಗರ್ 30ಕ್ಕೆ 6, ಮೆರೆಡಿತ್ 24ಕ್ಕೆ 2, ಜಂಪಾ 17ಕ್ಕೆ 1). ಪಂದ್ಯಶ್ರೇಷ್ಠ: ಆಶ್ಟನ್ ಅಗರ್.