More

    1983ರ ಕ್ರಿಕೆಟ್ ವಿಶ್ವಕಪ್ ಹೀರೋಗಳಿಗೆ ಕರೊನಾ ಲಸಿಕೆ

    ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆದ 1983ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ಮೂಲಕ ಭಾರತೀಯ ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿದ ಮತ್ತು ಈಗಿನ ಕ್ರಿಕೆಟ್ ಶ್ರೀಮಂತಿಕೆ ಕಾರಣವಾಗಿರುವ ಕಪಿಲ್ ದೇವ್ ಬಳಗದ ಮೂವರು ಸದಸ್ಯರು ಮಂಗಳವಾರ ಕರೊನಾ ಲಸಿಕೆ ಪಡೆದುಕೊಂಡಿದ್ದಾರೆ.

    ಹಾಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಕೂಡ ಆಗಿರುವ 83ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರವಿಶಾಸ್ತ್ರಿ ಅವರು ಮಂಗಳವಾರ ಅಹಮದಾಬಾದ್‌ನ ಆಸ್ಪತ್ರೆಯೊಂದರಲ್ಲಿ ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡರು. ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ 58 ವರ್ಷದ ರವಿಶಾಸ್ತ್ರಿ ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ. ರವಿಶಾಸ್ತ್ರಿ ಅವರಲ್ಲದೆ 1983ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಇತರ ಸದಸ್ಯರಾದ ಸಂದೀಪ್ ಪಾಟೀಲ್ ಮತ್ತು ಮದನ್ ಲಾಲ್ ಕೂಡ ಮಂಗಳವಾರ ಕರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಮದುವೆ ಸಿದ್ಧತೆಗಾಗಿ ಕ್ರಿಕೆಟ್‌ನಿಂದ ರಜೆ ಬಿಡುವು ಪಡೆದರೇ ಬುಮ್ರಾ?

    64 ವರ್ಷದ ಸಂದೀಪ್ ಪಾಟೀಲ್ ಮುಂಬೈನಲ್ಲಿ ಲಸಿಕೆ ಹಾಕಿಸಿಕೊಂಡರೆ, 69 ವರ್ಷದ ಮದನ್ ಲಾಲ್ ದೆಹಲಿಯಲ್ಲಿ ಮೊದಲ ಡೋಸ್ ಪಡೆದುಕೊಂಡರು. ಭಾರತದಲ್ಲಿ ಸೋಮವಾರ 2ನೇ ಹಂತದ ಲಸಿಕೀಕರಣ ಆರಂಭಗೊಂಡಿದ್ದು, 60 ವರ್ಷ ಮೇಲ್ಪಟ್ಟವರಿಗೆ ಮತ್ತು ಗಂಭೀರ ಸ್ವರೂಪದ ಅನ್ಯವ್ಯಾಧಿಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. 1983ರ ವಿಶ್ವಕಪ್ ತಂಡದ ಬಹುತೇಕ ಆಟಗಾರರು ಸದ್ಯ 60 ವರ್ಷ ಮೇಲ್ಪಟ್ಟವರಾಗಿದ್ದು, ಮುಂಬರುವ ದಿನಗಳಲ್ಲಿ ಒಬ್ಬೊಬ್ಬರಾಗಿಯೇ ಕರೊನಾ ಲಸಿಕೆ ಹಾಕಿಸಿಕೊಳ್ಳುವ ನಿರೀಕ್ಷೆ ಇದೆ.

    ‘ಕೋವಿಡ್-19 ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡೆ. ಸಾಂಕ್ರಾಮಿಕ ಪಿಡುಗಿನ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಶಕ್ತಿ ತುಂಬಿದ್ದಕ್ಕಾಗಿ ವೈದ್ಯಕೀಯ ವೃತ್ತಿಪರರಿಗೆ ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳು’ ಎಂದು ರವಿಶಾಸ್ತ್ರಿ ಟ್ವೀಟಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡ ಸದ್ಯ ಅಹಮದಾಬಾದ್‌ನಲ್ಲಿದ್ದು, ಟೀಮ್ ಇಂಡಿಯಾದ ತರಬೇತಿ ಸಿಬ್ಬಂದಿ ಬಳಗದ ಬೇರೆ ಯಾರೂ ಕರೊನಾ ಲಸಿಕೆ ತೆಗೆದುಕೊಂಡಿಲ್ಲ ಎಂದು ಬಿಸಿಸಿಐ ಮೂಲಗಳು ದೃಢಪಡಿಸಿವೆ.

    ಐಸಿಸಿ ಫೆಬ್ರವರಿ ತಿಂಗಳ ಪ್ರಶಸ್ತಿ ರೇಸ್‌ನಲ್ಲಿದ್ದಾರೆ ಅಶ್ವಿನ್, ನೀವೂ ವೋಟ್ ಮಾಡಿ…

    ಟೆನಿಸ್ ಕೋರ್ಟ್‌ಗೆ ಸಾನಿಯಾ ಮಿರ್ಜಾ ಗೆಲುವಿನ ಪುನರಾಗಮನ

    ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಆಟಗಾರನಿಗೆ 5 ಲೀಟರ್ ಪೆಟ್ರೋಲ್ ಬಹುಮಾನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts