More

    ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಆಟಗಾರನಿಗೆ 5 ಲೀಟರ್ ಪೆಟ್ರೋಲ್ ಬಹುಮಾನ!

    ಭೋಪಾಲ್: ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ದೇಶ ಕೆಲ ಭಾಗಗಳಲ್ಲಿ ಈಗಾಗಲೆ ಪೆಟ್ರೋಲ್ ಬೆಲೆ ಮೂರಂಕಿಯನ್ನು ತಲುಪಿದೆ. ಆದರೆ ಮಧ್ಯಪ್ರದೇಶದಲ್ಲಿ ನಡೆದ ಕ್ರಿಕೆಟ್ ಟೂರ್ನಿಯೊಂದರಲ್ಲಿ ಪಂದ್ಯಶ್ರೇಷ್ಠರಾದ ಕ್ರಿಕೆಟಿಗರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಯಾಕೆಂದರೆ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ತಲಾ 5 ಲೀಟರ್ ಪೆಟ್ರೋಲ್ ದೊರೆತಿದೆ!

    ಹೌದು, ಭೋಪಾಲ್‌ನಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ರೂಪದಲ್ಲಿ 5 ಲೀಟರ್ ಪೆಟ್ರೋಲ್ ನೀಡಲಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕ ಮನೋಜ್ ಶುಕ್ಲಾ ಆಯೋಜಿಸಿದ್ದ ಈ ಕ್ರಿಕೆಟ್ ಟೂರ್ನಿ, ಪೆಟ್ರೋಲ್-ಡೀಸಲ್ ಬೆಲೆ ಏರಿಕೆ ವಿರುದ್ಧದ ಪ್ರತಿಭಟನೆಯ ಭಾಗವಾಗಿತ್ತು.

    ಇದನ್ನೂ ಓದಿ: ಕೆಕೆಆರ್​ ಸ್ಪಿನ್ನರ್​ ವರುಣ್ ಚಕ್ರವರ್ತಿಗೆ ಈ ಸಲವೂ ಟೀಮ್ ಇಂಡಿಯಾ ಪರ ಆಡುವ ಅದೃಷ್ಟವಿಲ್ಲ?

    ಭೋಪಾಲ್‌ನಲ್ಲಿ ಈಗ ಪ್ರೀಮಿಯಂ ಪೆಟ್ರೋಲ್ ಬೆಲೆ 100 ರೂಪಾಯಿ ದಾಟಿದೆ. ಇದರಿಂದಾಗಿ ಮಧ್ಯಪ್ರದೇಶದ ರಾಜಧಾನಿಯಲ್ಲಿ ಜನರ ಆಕ್ರೋಶ ಹೆಚ್ಚಾಗಿದೆ. ಭಾನುವಾರ ನಡೆದ ಟೂರ್ನಿಯ ಫೈನಲ್ ಪಂದ್ಯದ ಬಳಿಕ ಚಾಂಪಿಯನ್ ಸನ್‌ರೈಸರ್ಸ್‌ ಇಲೆವೆನ್ ತಂಡದ ಸಲಾವುದ್ದೀನ್ ಅಬ್ಬಾಸಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ 5 ಲೀಟರ್ ಪೆಟ್ರೋಲ್‌ನ ಕ್ಯಾನ್ ನೀಡಲಾಯಿತು. ಪೆಟ್ರೋಲ್-ಡೀಸಲ್ ಬೆಲೆ ಏರಿಕೆಯ ವಿರುದ್ಧ ಪ್ರತಿಭಟನೆ ನಡೆಸಲು ನಮಗೆ ಇದೇ ಉತ್ತಮ ಮಾರ್ಗವೆನಿಸಿತು ಎಂದು ಮನೋಜ್ ಶುಕ್ಲಾ ಈ ವೇಳೆ ಹೇಳಿದರು.

    ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ನೀಡಲಾದ 5 ಲೀಟರ್ ಪೆಟ್ರೋಲ್‌ನ ಕ್ಯಾನ್‌ನ ಮೇಲೆ ‘ಮೋದಿ ಬ್ರಾಂಡ್‌ನ ಅಮೂಲ್ಯ ಪೆಟ್ರೋಲ್’ ಎಂದು ಬರೆಯಲಾಗಿತ್ತು. ಈ 5 ಲೀಟರ್ ಪೆಟ್ರೋಲ್‌ನ ಬೆಲೆ 510 ರೂಪಾಯಿ ಆಗಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಟೂನ್ ಚಿತ್ರವೂ ಇತ್ತು. ಪೆಟ್ರೋಲ್ ಅನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿ ವಿತರಿಸುತ್ತಿರುವ ಚಿತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್‌ಕಿಂಗ್ಸ್ ಸೇರಿದ ಬಳಿಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ ಕನ್ನಡಿಗ ರಾಬಿನ್ ಉತ್ತಪ್ಪ!

    ನೋಬಾಲ್ ಎಸೆದು ಸೆಹ್ವಾಗ್​ಗೆ ಶತಕ ತಪ್ಪಿಸಿದ್ದ ಲಂಕಾ ಸ್ಪಿನ್ನರ್ ಈಗ ಬಸ್ ಡ್ರೈವರ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts