More

    ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ

    ಅರಕೇರಾ: ಪ್ರತಿಯೊಬ್ಬರು ಚುನಾವಣೆಯಲ್ಲಿ ನಿರ್ಭಿತರಾಗಿ ಮತದಾನ ಮಾಡಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗಬಾರದು ಎಂದು ತಾಪಂ ಇಒ ಬಾಬು ರಾಠೋಡ್ ಹೇಳಿದರು.

    ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಮತದಾರರಿಗೆ ಕ್ರಿಕೆಟ್ ಹಾಗೂ ಕಬಡ್ಡಿ ಪಂದ್ಯಾವಳಿ, ರಂಗೋಲಿ ಸ್ಪರ್ಧೆ, ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಶನಿವಾರ ಮಾತನಾಡಿದರು.

    ಮುಕ್ತ, ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆ ದೇಶದ ಘನತೆಯನ್ನು ಎತ್ತಿ ಹಿಡಿಯುತ್ತದೆ. ಪ್ರತಿಯೊಬ್ಬರ ಮತದಾನ ಅಮೂಲ್ಯವಾಗಿದ್ದು, ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಯುವ ಮತದಾರರಿಗಿದೆ ಎಂದರು. ತಾಪಂ ಎಡಿ ಅಣ್ಣರಾವ್ ಮಾತನಾಡಿ, ಯುವಕರು ಜಾತಿ, ಧರ್ಮ, ಜನಾಂಗಕ್ಕೆ ಪ್ರಭಾವಿತರಾಗದೆ ಮತ ಚಲಾಯಿಸಿ ಎಂದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿದರು.


    ಪಿಡಿಒ ವೆಂಕೋಬ ನಾಯಕ, ಎನ್‌ಆರ್‌ಎಲ್‌ಎಂ ವ್ಯವಸ್ಥಾಪಕ ಮಾರ್ಕಂಡಯ್ಯ, ಪ್ರಮುಖರಾದ ಕೆ.ಭಗವಂತ್ರಾಯ ನಾಯಕ, ರವಿ ನಾಯಕ, ಹನುಮಂತ್ರಾಯ ಪೂಜಾರಿ, ತಿಮ್ಮಯ್ಯ ಗುರಿಕಾರ, ಭೀಮಣ್ಣ ನಾಯಕ, ಆಸೀಫ್ ಕರ್ನೂಲ್, ವೆಂಕಟೇಶ ನಾಯಕ ಕರ್ನಾಳ, ಯಮುನಪ್ಪ ಕುಂಬಾರ, ಇಬ್ರಾಹೀಂ, ಬುದ್ದಿವಂತಿ, ಭಾಷಾ ಸಾಬ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts