ಕೋರ್ಟ್​ ಮುಂದೆ ತರಕಾರಿ ಮಾರಾಟಕ್ಕೆ ಕುಳಿತ ವಕೀಲರು!

Advocates protest
Published on

ಬೆಂಗಳೂರು: ಕೋರ್ಟ್ ಕಲಾಪದಲ್ಲಿ ಭಾಗಿಯಾಗಬೇಕಿದ್ದ ವಕೀಲರು ಇಂದು(ಗುರುವಾರ) ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್​ ಕೋರ್ಟ್​ ಎದುರಲ್ಲೇ ನಿಂತು ತರಕಾರಿ ಮಾಡುವಲ್ಲಿ ಬಿಜಿಯಾಗಿದ್ದರು! ಹೌದು, ಕಪ್ಪು ಕೋಟ್​ ಧರಿಸಿಕೊಂಡೇ ವಕೀಲರು ತರಕಾರಿ ಮಾರಾಟ ಮಾಡಿದರು.

ಕರೊನಾ ಲಾಕ್​ಡೌನ್​ ತೊಂದೊಡ್ಡಿರುವ ಸಂಕಷ್ಟ ಅಷ್ಟಿಷ್ಟಲ್ಲ. ಎಲ್ಲ ಕ್ಷೇತ್ರದ ಮೇಲೂ ಕೆಟ್ಟ ಪರಿಣಾಮ ಬೀರಿದ್ದು, ದುಡಿಮೆಗೂ ಕೊಳ್ಳಿ ಇಟ್ಟಿದೆ. ಇದು ವಕೀಲರ

ವಿಚಾರದಲ್ಲೂ ಹೊರತಾಗಿಲ್ಲ. ಕರೊನಾ ಪರಿಣಾಮ ಮಾರ್ಚ್​ ತಿಂಗಳಿಂದ ಕೋರ್ಟ್​ಗಳಲ್ಲಿ ಭೌತಿಕ ಕಲಾಪ(ಫಿಸಿಕಲ್​ ಹಿಯರಿಂಗ್​) ನಡೆಸದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಕೀಲರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ರಾಜ್ಯದ ನ್ಯಾಯಾಲಯಗಳಲ್ಲಿ ಆನ್​ಲೈನ್​ ಕಲಾಪಗಳ ಬದಲಿಗೆ ಪುರ್ಣಪ್ರಮಾಣದಲ್ಲಿ ಭೌತಿಕ ಕಲಾಪಗಳನ್ನು ನಡೆಸುವಂತೆ ಒತ್ತಾಯಿಸಿ ಕೆಲ ವಕೀಲರು ನಗರದ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂದೆ ತರಕಾರಿ ಮಾರಾಟ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಗ್ಗೆ 11 ಗಂಟೆ ವೇಳೆ ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್​ ಕೋರ್ಟ್​ ಮುಂಭಾಗದಲ್ಲಿ ಸೇರಿದ 50ಕ್ಕೂ ಅಧಿಕ ವಕೀಲರು ಕೂಡಲೇ ನ್ಯಾಯಾಲಯಗಳಲ್ಲಿ ಫಿಸಿಕಲ್​ ಹಿಯರಿಂಗ್​ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಇವರಲ್ಲಿ ಇಬ್ಬರು ವಕೀಲರು ತಾವು ತಂದಿದ್ದ ತರಕಾರಿಗಳನ್ನು ಸಾಂಕೇತಿಕವಾಗಿ ಮಾರಾಟ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಕರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭೌತಿಕ ಕಲಾಪ ನಡೆಸುವ ಬಗ್ಗೆ ಹೈಕೋರ್ಟ್​ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net