ಸುಶಾಂತ್​​ ಮನೆ ನನಗೆ ಪಾಸಿಟಿವ್​ ವೈಬ್​ ಕೊಡುತ್ತದೆ ಎಂದಿದ್ದೇಕೆ ನಟಿ ಅದಾ ಶರ್ಮಾ

“ದಿ ಕೇರಳ ಸ್ಟೋರಿ”, “ಬಸ್ತರ್​ ದಿ ನಕ್ಸಲ್​ ಸ್ಟೋರಿ” ನಟಿ ಅದಾ ಶರ್ಮಾ ಅವರು ವೈಯಕ್ತಿಕ ಮತ್ತು ವೃತ್ತಿಪರ ಜೀವನದಿಂದ ಆಗಾಗ ಮುನ್ನೆಲೆಯಲ್ಲಿರುತ್ತಾರೆ. ಕಳೆದ ಕೆಲವು ದಿನಗಳಿಂದ ನಟಿ ಅದಾ, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈನ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿ ಬಿಟೌನ್​ನಲ್ಲಿ ಹರಿದಾಡುತಿತ್ತು. ಇದೀಗ ಸ್ವತಃ ನಟಿ ಅದಾ ಅವರೇ ತಾವು ಸುಶಾಂತ್ ಮನೆಯಲ್ಲಿ ವಾಸಿಸುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನು ಓದಿhttps://www.vijayavani.net/kajal-aggarwal-opens-up-about-married-actresses-in-bollywood-get-meatier-parts-but-south-actresses-are-stereotyped

ಬಾಂದ್ರಾದಲ್ಲಿನ ಅಪಾರ್ಟ್​ಮೆಂಟ್​ನಲ್ಲಿ ನಟ ಸುಶಾಂತ ಮೃತದೇಹ ಪತ್ತೆಯಾದ ನಂತರ ಸುಮಾರು ಮೂರು ವರ್ಷಗಳ ಕಾಲ ಮನೆ ಖಾಳಿ ಉಳಿದಿತ್ತು. ಈ ಮನೆಯನ್ನು ನೋಡಲು ಅನೇಕರು ಬಂದರು ಆದರೆ ಯಾರೂ ಅದನ್ನು ಖರೀದಿಸಲಿಲ್ಲ. ಅಕ್ಟೋಬರ್ 2023ರಲ್ಲಿ ನಟಿ ಅದಾ ಶರ್ಮಾ ಐದು ವರ್ಷಗಳಿಗೆ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಂಡಿದ್ದಾರೆ. ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಅಪಾರ್ಟ್​ಮೆಂಟ್​ಗೆ ಸ್ಥಳಾಂತರಗೊಂಡಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.

ಈ ಫ್ಲಾಟ್ ಖರೀದಿಸಿರುವ ಬಗ್ಗೆ ಮೌನವಾಗಿದ್ದ ನಟಿ ಅದಾ ಶರ್ಮಾ ಖಾಸಗಿ ವಾಹಿನಿಗೆ ನೀಡದ ಸಂದರ್ಶನದಲ್ಲಿ ಸುಶಾಂತ್ ಅವರ ಫ್ಲಾಟ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. “ನಾನು 4 ತಿಂಗಳ ಹಿಂದೆ ಫ್ಲಾಟ್‌ (ಮಾಂಟ್ ಬ್ಲಾಂಕ್ ಅಪಾರ್ಟ್‌ಮೆಂಟ್, ಬಾಂದ್ರಾ)ಗೆ ಶಿಫ್ಟ್ ಆಗಿದ್ದೆ. ಆದರೆ ನಾನು ನನ್ನ ಚಿತ್ರಗಳ ಪ್ರಚಾರದಲ್ಲಿ ಬಿಸಿ ಇದಿದ್ದರಿಂದ ವಿಶ್ರಾಂತಿ ಪಡೆಯಲು ಸಾಧ್ಯವಾಗಿರಲಿಲ್ಲ. ಅದಾದ ನಂತರ ಮಥುರಾದ ಆನೆಧಾಮದಲ್ಲಿ ಸ್ವಲ್ಪ ಸಮಯ ಕಳೆದೆ, ಇತ್ತೀಚೆಗಷ್ಟೇ ಸ್ವಲ್ಪ ಬಿಡುವು ಸಿಕ್ಕಿತು, ಕೊನೆಗೆ ಇಲ್ಲಿಗೆ ಸ್ಥಳಾಂತರಗೊಂಡಿದ್ದಾನೆ” ಎಂದಿದ್ದಾರೆ.

ನಾನು ನನ್ನ ಜೀವನದುದ್ದಕ್ಕೂ ಪಾಲಿ ಹಿಲ್‌ನಲ್ಲಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೇನೆ, ಈಗ ನಾನು ಮೊದಲ ಬಾರಿಗೆ ನನ್ನ ನಿವಾಸವನ್ನು ಬದಲಾಯಿಸಿದ್ದೇನೆ. ಈ ಸ್ಥಳವು ನನಗೆ ಪಾಸಿಟಿವ್​​ ವೈಬ್‌ಗಳನ್ನು ನೀಡುತ್ತದೆ. ಈ ರೀತಿ ವಿಚಾರದಲ್ಲಿ ನಾನು ತುಂಬಾ ಸೂಕ್ಷ್ಮತೆಯಿಂದ ಇರುತ್ತೇನೆ.ನಾನು ಯಾವಾಗಲೂ ನನ್ನ ಅಂತಃಪ್ರಜ್ಞೆಯನ್ನು ಅನುಸರಿಸುತ್ತೇನೆ, ಇತರ ಜನರ ಅಭಿಪ್ರಾಯಗಳನ್ನು ಅಲ್ಲ. ಕೇರಳ ಮತ್ತು ಮುಂಬೈನಲ್ಲಿನ ನಮ್ಮ ಮನೆ ಮರಗಳಿಂದ ಆವೃತವಾಗಿತ್ತು. ನಮ್ಮ ಮನೆಯಲ್ಲಿ ಪಕ್ಷಿಗಳಿಗೆ, ಅಳಿಲುಗಳಿಗೆ ಆಹಾರ ನೀಡುತ್ತಿದ್ದೆವು. ಅದೇ ಮಾದರಿಯ ಮನೆಯಲ್ಲಿ ವಾಸಿಸಲು ನಾನು ಇಚ್ಛಿಸುವುದರಿಂದ ಈ ಮನೆ ಪಡೆದಿದ್ದೇನೆ ಎಂದಿದ್ದಾರೆ.(ಏಜೆನ್ಸೀಸ್​​)

ನಿಮ್ಮ ಜೀನ್ಸ್​ ಹೊಸದರಂತೆ ಕಾಣಬೇಕೇ? ಈ ಸಿಂಪಲ್​ ಟಿಪ್ಸ್​​ ನೀವೂ ಬಳಸಿ

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…