ನಿಮ್ಮ ಜೀನ್ಸ್​ ಹೊಸದರಂತೆ ಕಾಣಬೇಕೇ? ಈ ಸಿಂಪಲ್​ ಟಿಪ್ಸ್​​ ನೀವೂ ಬಳಸಿ

Untitled-design-18-1
Published on

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗು ಜೀನ್ಸ್​​ ಮೊದಲ ಆದ್ಯತೆ ಉಡುಪು. ಏಕೆಂದರೆ ಜೀನ್ಸ್​ ತೊಡಲು ಆರಾಮದಾಯಕವಾಗಿರುತ್ತದೆ. ಹೆಚ್ಚಿನ ಜನರು ಜೀನ್ಸ್ ಅನ್ನು ಕ್ಯಾಶುಯಲ್ ಡ್ರೆಸ್ ಆಗಿ ಧರಿಸಲು ಇಷ್ಟಪಡುತ್ತಾರೆ. ಆದರೆ ಇವುಗಳ ಒಂದು ಸಮಸ್ಯೆ ಎಂದರೆ ಅದು ಯಾವಾಗಲೂ ಹೊಸತಾಗಿ ಕಾಣುವುದಿಲ್ಲ. ಸರಿಯಾಗಿ ನೋಡಿಕೊಳ್ಳದಿದ್ದರೆ ಸ್ವಲ್ಪ ಸಮಯದ ನಂತರ ಜೀನ್ಸ್ ಹಳೆಯದಾಗಿ ಕಾಣುತ್ತದೆ. ನೆಚ್ಚಿನ ಉಡುಪಾದ ಜೀನ್ಸ್ ಯಾವಾಗಲೂ ಹೊಸದಾಗಿ ಕಾಣಬೇಕೆಂಬುದು ನಿಮ್ಮ ಆಸೆಯೇ. ಅದನ್ನು ಹೊಸದರಂತೆ ಕಾಣುವುದಾಗಿ ಮಾಡುವುದು ಸುಲಭ. ಇಲ್ಲಿದೆ ನೋಡಿ ಸಿಂಪಲ್​​ ಸಲಹೆ

  • ಜೀನ್ಸ್​ ಅನ್ನು ದೀರ್ಘಕಾಲದವರೆಗೆ ಬಳಸಬೇಕೆಂದರೆ ಬಳಸಿದ ಪ್ರತಿ ಬಾರಿಯೂ ತೊಳೆಯದೆ ವಾರಕ್ಕೊಮ್ಮೆ ಶುಚಿಗೊಳಿಸಿ.
  • ಜೀನ್ಸ್​​ ಅನ್ನು ಮೃದುವಾಗಿಡಲು ಫ್ಯಾಬ್ರಿಕ್ ಸಾಫ್ಟ್‌ನರ್‌ಗಳನ್ನು ಸಹ ಬಳಸಬಹುದು. ಇದು ಅದರ ಬಣ್ಣವು ಮರೆಯಾಗುವುದನ್ನು ತಡೆಯುತ್ತದೆ.
  • ಜೀನ್ಸ್‌ನಲ್ಲಿರುವ ಟ್ಯಾಗ್​ನಲ್ಲಿ ಮುದ್ರಿತವಾಗಿರುವ ಸೂಚನೆಗಳನ್ನು ಅನುಸರಿಸಿ. ಏಕೆಂದರೆ ಟ್ಯಾಗ್​ನಲ್ಲಿ ಯಾವ ರೀತಿಯ ಬಟ್ಟೆಯನ್ನು ಬಳಸಲಾಗಿದೆ ಮತ್ತು ಅದನ್ನು ಹೇಗೆ ಶುಚಿಗೊಳಿಸಬೇಕು ಎಂದು ಹೇಳಲಾಗಿರುತ್ತದೆ.
  • ಜೀನ್ಸ್ ತೊಳೆಯುವಾಗ ಬ್ಲೀಚ್ ಬಳಸಬೇಡಿ. ಬ್ಲೀಚ್​ ಬಳಸಿದರೆ ಬಣ್ಣವು ಮಸುಕಾಗಲು ಕಾರಣವಾಗುತ್ತದೆ.
  • ನೀವು ಮೊದಲ ಬಾರಿಗೆ ಜೀನ್ಸ್ ಅನ್ನು ಶುಚಿಗೊಳಿಸುತ್ತಿದ್ದರೆ, ತೊಳೆಯುವ ಮೊದಲು ನೀರಿನಲ್ಲಿ ಎರಡು ಚಮಚ ಉಪ್ಪನ್ನು ಮಿಶ್ರಣ ಮಾಡಿ. ಹೀಗೆ ಮಾಡುವುದರಿಂದ ಜೀನ್ಸ್‌ನ ಬಣ್ಣ ಮಾಸುವುದಿಲ್ಲ.
  • ಜೀನ್ಸ್ ಅನ್ನು ವಾಷಿಂಗ್​ ಮೆಷಿನ್​ಗೆ ಹಾಕುವ ಬದಲು ಕೈಯಿಂದ ತೊಳೆಯಿರಿ. ಬಟ್ಟೆಯು ಬೇಗ ಹಾಳಾಗುವುದಿಲ್ಲ.
  • ಜೀನ್ಸ್ ಅನ್ನು ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು, ಇದು ಬಟ್ಟೆಯನ್ನು ಹಾನಿಗೊಳಿಸುತ್ತದೆ.
  • ಇತರೆ ಬಟ್ಟೆಗಳೊಂದಿಗೆ ಜೀನ್ಸ್ ಅನ್ನು ಎಂದಿಗೂ ತೊಳೆಯಬೇಡಿ, ಬದಲಿಗೆ ಜೀನ್ಸ್​​ ಅನ್ನು ಪ್ರತ್ಯೇಕಿಸಿ ತೊಳೆಯಿರಿ.
  • ಜೀನ್ಸ್‌ನಿಂದ ಕಲೆಗಳನ್ನು ತೆಗೆದುಹಾಕಲು ಮತ್ತು ಯಾವುದೇ ರೀತಿಯ ಹಾನಿಯಿಂದ ರಕ್ಷಿಸಲು ಡ್ರೈ ಕ್ಲೀನಿಂಗ್​ ಕೊಡಬಹುದು. ಡ್ರೈ ಕ್ಲೀನಿಂಗ್ ಕೇವಲ ಕೊಳಕು ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ, ಜೀನ್ಸ್ ಮೇಲೆ ಯಾವುದೇ ಕಠಿಣ ಪರಿಣಾಮ ಬೀರುವುದಿಲ್ಲ. ಆದರೂ ಇದು ದುಬಾರಿ ಆಯ್ಕೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net