ಮುಂಬೈ : ಟಾಲಿವುಡ್, ಕಾಲಿವುಡ್ನಲ್ಲಿ ತನ್ನದೇ ನಟನ ಕೌಶಲದಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ನಟಿ ಕಾಜಲ್ ಅಗರ್ವಾಲ್. ಇತ್ತೀಚೆಗೆ ನಟಿ ಕಾಜಲ್ ದಕ್ಷಿಣ ಚಿತ್ರರಂಗವನ್ನು ಬಿಟೌನ್ಗೆ ಹೋಲಿಸಿ ಖಾಸಗಿ ವಾಹಿನಿಯೊಂದರಲ್ಲಿ ನೀಡಿರುವ ಹೇಳಿಕೆಯಿಂದ ಟಾಕ್ ಆಫ್ ದಿ ಟೌನ್ ಆಗಿದ್ದಾರೆ.
ಇದನ್ನು ಓದಿ : https://www.vijayavani.net/anant-ambani-radhika-merchants-pre-wedding-bash-served-food-from-bengalurus-rameshwaram-cafe
ಹಿಂದಿ ಚಿತ್ರರಂಗಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ವಿಷಯಗಳು ವಿಭಿನ್ನವಾಗಿವೆ ಎಂದು ನಟಿ ಕಾಜಲ್ ಅಗರ್ವಾಲ್ ಒಪ್ಪಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಮದುವೆಯಾದ ನಂತರ ಅಥವಾ ತಾಯಂದಿರಾದ ಬಳಿಕವೂ ನಟಿಯರಿಗೆ ಉತ್ತಮ ಪಾತ್ರಗಳು ಸಿಗುತ್ತವೆ. ದೀಪಿಕಾ ಪಡುಕೋಣೆಗೆ ‘ಫೈಟರ್’ ಚಿತ್ರದಲ್ಲಿ ಆ್ಯಕ್ಷನ್ ಇರುವಂತ ಪಾತ್ರವನ್ನು ನೀಡಲಾಗಿದೆ. ಆಲಿಯಾ ಭಟ್ ಅವರನ್ನು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ರೊಮ್ಯಾಂಟಿಕ್ ಪಾತ್ರಕ್ಕೆ ಆಫರ್ ಮಾಡಲಾಗಿದೆ. ಆದರೆ ದಕ್ಷಿಣ ಚಿತ್ರರಂಗದಲ್ಲಿ ಮಹಿಳಾ ಕಲಾವಿದೆಯರೂ ಮದುವೆಯಾದ ಅಥವಾ ತಾಯಂದಿರಾದ ನಂತರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳನ್ನು ಪಡೆಯಲು ಸಾಧ್ಯವಾಗದೆ ಇನ್ನು ಶ್ರಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಚಿತ್ರರಂಗದಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೂ “ನಮ್ಮಲ್ಲಿ ಇನ್ನೂ ಸ್ವಲ್ಪ ಸ್ಟೀರಿಯೊಟೈಪ್ ಸಂಪ್ರದಾಯವಿದೆ. ಶೀಘ್ರದಲ್ಲೇ ನಾವು ಅದನ್ನು ತೊಡೆದುಹಾಕುತ್ತೇವೆ ಎಂದು ಹೇಳಿದ್ದಾರೆ.
ಈ ಸಂಪೂರ್ಣ ಹೊಸ ಪೀಳಿಗೆಯ ನಟಿಯರಿಗೆ ಮದುವೆಯಾಗಿ ಮಕ್ಕಳಿದ್ದಾರೆ ಎಂದು ಭಾವಿಸುತ್ತೇನೆ. ವಿವಾಹಿತ ನಟಿಯರಾದ ಶರ್ಮಿಳಾ ಟ್ಯಾಗೋರ್ ಮತ್ತು ಹೇಮಾ ಮಾಲಿನಿ ಅವರಂತೆ ಮದುವೆಯಾಗಿರುವ ಅಥವಾ ತಾಯಂದಿರಾದ ನಂತರವು ಮಹಿಳಾ ಕಲಾವಿದರು ಬಹುಮುಖ ಪಾತ್ರಗಳಲ್ಲಿ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಅಲ್ಲದೆ ನಟಿ ನಯನತಾರಾ ಇನ್ನೂ ತನ್ನದೇ ಆದ ರೀತಿಯಲ್ಲಿ ರೋಮ್ಯಾಂಟಿಕ್ ಮತ್ತು ಆಕ್ಷನ್ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಕಾಜಲ್ ಮೆಚ್ಚುಗೆ ವ್ಯಕ್ತಪಡಿಸಿದರು. (ಏಜೆನ್ಸೀಸ್)
ಎಕ್ಸಿಟ್ ಪೋಲ್ ಬಳಿಕ ಪ್ರಧಾನಿ ಮೋದಿ ನೇತೃತ್ವದಲ್ಲಿ 7 ಸಭೆಗಳು: ಯಾವ್ಯಾವ ವಿಷಯ ಚರ್ಚಿಸಲಿದ್ದಾರೆ ಗೊತ್ತಾ?