More

    ರಣಗಲ್‌ಗೆ ಜತೆಯಾದ ರುಕ್ಮಿಣಿ: ಸಪ್ತ ಸಾಗರದಾಚೆಯಿಂದ ಬಾನದಾರಿಯಲ್ಲಿ ಬಂದ ಹುಡುಗಿ

    ಬೆಂಗಳೂರು: ನರ್ತನ್ ನಿರ್ದೇಶನದ ಹಾಗೂ ಶಿವರಾಜಕುಮಾರ್ ಅಭಿನಯದ ‘ಭೈರತಿ ರಣಗಲ್’ ಇತ್ತೀಚೆಗಷ್ಟೆ ಮುಹೂರ್ತ ಆಚರಿಸಿಕೊಂಡಿತ್ತು. 2016ರಲ್ಲಿ ಬಿಡುಗೆಗೊಂಡಿದ್ದ ‘ಮಫ್ತಿ’ ಸಿನಿಮಾದ ಪ್ರೀಕ್ವೆಲ್ ಇದು. ಶಿವರಾಜಕುಮಾರ್ ಜತೆ ಪ್ರಮುಖ ಭೂಮಿಕೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿರಲಿಲ್ಲ.

    ಇದೀಗ ನಟಿ ರುಕ್ಮಿಣಿ ವಸಂತ್ ‘ಭೈರತಿ ರಣಗಲ್’ ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಾಲಿವುಡ್‌ನ ರಾಹುಲ್ ಬೋಸ್ ಕೂಡ ಮುಖ್ಯ ತಾರಾಗಣದಲ್ಲಿ ಇರಲಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಕಾರ್ಯಕ್ರಮ ನೆರವೇರಿದ್ದು ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ.

    ‘ಬೀರ್‌ಬಲ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರುಕ್ಮಿಣಿ, ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’, ಹೇಮಂತ್ ರಾವ್ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅದರ ಬೆನ್ನಲ್ಲೇ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರವೊಂದರಲ್ಲಿಯೂ ರುಕ್ಮಿಣಿ ವಸಂತ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಶೂಟಿಂಗ್ ಮಲೇಷ್ಯಾದಲ್ಲಿ ನಡೆಯುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts