

ಕೇರಳ: 'ದಿ ಕೇರಳ ಸ್ಟೋರಿ'(The Kerala Story) ಚಿತ್ರವನ್ನು ಯಶಸ್ವಿಗೊಳಿಸಿದಂತೆ ಇತರೆ ಸಿನಿಮಾಗಳನ್ನು ಕೂಡ ನೋಡಿ ಯಶಸ್ವಿಗೊಳಿಸಿ ಎಂದು ತಮ್ಮ ಅಭಿಮಾನಿಗಳಲ್ಲಿ ನಟಿ ಅದಾ ಶರ್ಮಾ(Adah Sharma) ಮನವಿ ಮಾಡಿದ್ದಾರೆ.
"ನಮ್ಮ ಚಿತ್ರ 'ದಿ ಕೇರಳ ಸ್ಟೋರಿ' ಅನ್ನು ಸತತ ಐದನೇ ವಾರವು ಕೂಡ ಚಿತ್ರಮಂದಿರಕ್ಕೆ ಹೋಗಿ, ವೀಕ್ಷಿಸುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು" ಎಂದು ತಮ್ಮ ಇನ್‌ಸ್ಟಾಗ್ರಾಮ್(Instagram) ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ದಿ ಕೇರಳ ಸ್ಟೋರಿ ಚಿತ್ರವು, ಬಾಕ್ಸ್ ಆಫೀಸ್‌ನಲ್ಲಿ(Box Office) ಬರೋಬ್ಬರಿ 234.2 ಕೋಟಿ ರೂಪಾಯಿಗಳನ್ನು ಕಬಳಿಸಿದೆ. ಈ ಮೂಲಕ ಇತ್ತೀಚಿಗೆ ಬಿಡುಗಡೆಗೊಂಡ ಸಿನಿಮಾಗಳ ಗಳಿಕೆಯ ಸಾಲಿನಲ್ಲಿ ಕೇರಳ ಸ್ಟೋರಿ ಚಿತ್ರವೇ ಅಗ್ರಸ್ಥಾನದಲ್ಲಿದೆ. ಮತ್ತು ಅತ್ಯಂತ ವೇಗವಾಗಿ ಬಾಕ್ಸ್ ಆಫೀಸ್ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಂಡ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿತ್ರಮಂದಿರಗಳಲ್ಲಿ ಇತರೆ ಹೊಸ ಚಿತ್ರಗಳ ಬಿಡುಗಡೆಗಳನ್ನು ಸಹ ಬೆಂಬಲಿಸುವಂತೆ ನಟಿ ಅದಾ ತಮ್ಮ ಅಭಿಮಾನಿಗಳಲ್ಲಿ ಪ್ರತ್ಯೇಕವಾಗಿ ಮನವಿ ಮಾಡಿದ್ದು, ಕೇರಳ ಸ್ಟೋರಿ ಚಿತ್ರದಲ್ಲಿ ಅಭಿನಯಿಸುವ ಮುನ್ನ ತಮಗೆ ನೀಡಿದ ಪಾತ್ರಕ್ಕಾಗಿ ತೆಗೆಸಿಕೊಂಡಿದ್ದ ಲುಕ್ ಟೆಸ್ಟ್ಗಳ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಕಮೆಂಟ್ಗಳು ಹರಿದು ಬಂದಿದೆ.