ಕಿಲಾಡಿ ಜತೆ ಪ್ರಣೀತಾ ಥೈಯಾ ಥಕ; ರವಿತೇಜ ಚಿತ್ರದ ಹಾಡಿನಲ್ಲಿ ಹೆಜ್ಜೆ..

Praneetha
Published on

ಬೆಂಗಳೂರು: ನಟಿ ಪ್ರಣೀತಾ ಸುಭಾಷ್ ಕನ್ನಡದ ಜತೆಗೆ ಬಹುಭಾಷೆಗಳಲ್ಲಿಯೂ ಗೊತ್ತಿರುವ ಮುಖ. ತಮಿಳು, ತೆಲುಗು ಸಿನಿಮಾಗಳ ಜತೆಗೆ ಬಾಲಿವುಡ್​ನಲ್ಲಿಯೂ ಖಾತೆ ತೆರೆದಿದ್ದಾರೆ. ವರ್ಷದ ಬಳಿಕ ಇದೀಗ ಮತ್ತೆ ತೆಲುಗಿನತ್ತ ಮುಖ ಮಾಡಿದ್ದಾರೆ. ಹಾಗಂತ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಬದಲಿಗೆ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಇತ್ತೀಚೆಗಷ್ಟೇ ತೆಲುಗು ನಟ ರವಿತೇಜ, ‘ಕಿಲಾಡಿ’ ಎಂಬ ಚಿತ್ರದಲ್ಲಿ ನಟಿಸುವ ಸುದ್ದಿಯಾಗಿತ್ತು. ರವಿತೇಜಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸುವುದು ಅಧಿಕೃತವಾಗಿದ್ದು, ಇದೀಗ ಪ್ರಣೀತಾ ಸುಭಾಷ್ ಸಹ ಕಿಲಾಡಿ ಚಿತ್ರದ ಭಾಗವಾಗಲಿದ್ದಾರೆ. ಚಿತ್ರದಲ್ಲಿ ಮಾಸ್ ಹಾಡೊಂದಕ್ಕೆ ಅವರು ಹೆಜ್ಜೆ ಹಾಕಲಿದ್ದಾರಂತೆ. ಈಗಾಗಲೇ ಚಿತ್ರತಂಡ ಪ್ರಣೀತಾ ಜತೆ ಒಂದು ಹಂತದ ಮಾತುಕತೆಯನ್ನೂ ನಡೆಸಿದೆಯಂತೆೆ. ಇನ್ನೇನು ಶೀಘ್ರದಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಘೋಷಣೆ ಮಾಡಲಿದೆಯಂತೆ.

ರಮೇಶ್ ವರ್ವ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಡಿಂಪಲ್ ಹಯಾತಿ, ಮಿಕಾಶಿ ಚೌಧರಿ ಸಹನಾಯಕಿಯರಾಗಿ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ವರಲಕ್ಷ್ಮೀ ಶರತ್​ಕುಮಾರ್, ಸಮುದ್ರಖಣಿ ಪೋಷಕ ಪಾತ್ರಗಳಲ್ಲಿದ್ದು, ಕೊನೆರು ಸೂರ್ಯನಾರಾಯಣ್ ಈ ಚಿತ್ರ ನಿರ್ವಿುಸುತ್ತಿದ್ದಾರೆ. ಇತ್ತ ಹಿಂದಿಯ ‘ಹಂಗಾಮಾ 2’ ಚಿತ್ರದಲ್ಲಿ ಪ್ರಣೀತಾ ಬಿಜಿಯಾಗಿದ್ದಾರೆ. ಅಜಯ್ ದೇವಗನ್ ಜತೆಗೆ ‘ಭುಜ್; ದಿ ಪ್ರೖೆಡ್ ಆಫ್ ಇಂಡಿಯಾ’ ಸಿನಿಮಾದಲ್ಲಿಯೂ ನಟಿಸಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net