VIDEO| ಮಗಳು ವಂಶಿಕಾಗೆ ನಟಿ ಮಾನ್ಯಾ ಕನ್ನಡ ಪಾಠ ಹೇಗಿದೆ ನೋಡಿ?

image
Published on

ಬೆಂಗಳೂರು: ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ್ದ ನಟಿ ಮಾನ್ಯಾ ನಾಯ್ಡು, ಬಳಿಕ ನಾಯಕಿಯಾಗಿ ಕಾಣಿಸಿಕೊಂಡು ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಾಕಷ್ಟು ಸಿನಿಮಾ ಮಾಡಿ ಒಂದಷ್ಟು ಅವಾರ್ಡ್​ಗಳನ್ನೂ ಗಿಟ್ಟಿಸಿದ್ದರು. ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದ ಮಾನ್ಯತಾ, 2010ಕ್ಕೆ ಸಿನಿಮಾ ಕ್ಷೇತ್ರದಿಂದ ಶಾಶ್ವತವಾಗಿ ದೂರವಾಗಿಯೇ ಉಳಿದರು. ಇದೀಗ ಇದೇ ನಟಿ ಮತ್ತೆ ಸಿನಿಮಾಕ್ಷೇತ್ರದತ್ತ ಆಗಮಿಸಲು ಉತ್ಸುಕರಾಗಿದ್ದಾರೆ. ಅದರ ಜತೆಗೆ ಬಿಡುವಿನ ವೇಳೆಯಲ್ಲಿ ಮಗಳು ವಂಶಿಕಾಗೆ ಕನ್ನಡ ಪಾಠ ಮಾಡುತ್ತಿದ್ದಾರೆ.

ಹೌದು, ವರ್ಷ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ಮಾನ್ಯಾ, ಆ ಚಿತ್ರದಲ್ಲಿನ ವಾಸಂತಿ ವಾಸಂತಿ ಹಾಡನ್ನು ಮಗಳಿಗೆ ಹೇಳಿಕೊಟ್ಟಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ವಿವರವಾಗಿ ಸಿನಿಮಾ ಬಗ್ಗೆ ಬರೆದುಕೊಂಡು, ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಸದ್ಯ ನೂಯಾರ್ಕ್​ನಲ್ಲಿ ಪತಿ ಜತೆ ನೆಲೆಸಿರುವ ಮಾನ್ಯಾ, ಕಳೆದ ಹಲವು ವರ್ಷಗಳಿಂದ ಅಲ್ಲಿನ ಬ್ಯಾಂಕ್​ವೊಂದರಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಮತ್ತೆ ಸಿನಿಮಾಕ್ಕೆ ಬರುವುದಾಗಿ ಟಿಕ್​ಟಾಕ್​ನಲ್ಲಿ ವಿಡಿಯೋ ತುಣುಕೊಂದನ್ನು ಶೇರ್ ಮಾಡಿ ಅದರಲ್ಲಿ ಮನದಾಸೆ ಹೇಳಿಕೊಂಡಿದ್ದರು.

ಅಂದಹಾಗೆ, 2005ರಲ್ಲಿ ವಿಷ್ಣುವರ್ಧನ್ ನಟನೆಯ ‘ವರ್ಷ’ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಮಾನ್ಯಾ, ಅದಾದ ಬಳಿಕ ದರ್ಶನ್ ಜತೆಗೆ ‘ಶಾಸ್ತ್ರಿ’ ಚಿತ್ರದಲ್ಲೂ ನಟಿಸಿದರು. ‘ಶಂಭು’, ‘ಬೆಳ್ಳಿ ಬೆಟ್ಟ’, ‘ಅಂಬಿ’ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು. 2007ರಲ್ಲಿ ಬಿಡುಗಡೆಯಾದ ‘ಈ ಪ್ರೀತಿ ಒಂಥರಾ’ ಚಿತ್ರದ ಬಳಿಕ ಬೇರಾವ ಕನ್ನಡ ಸಿನಿಮಾದಲ್ಲಿ ಮಾನ್ಯಾ ನಟಿಸಿರಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net