'ಡೆವಿಲ್​' ಚಿತ್ರದಲ್ಲಿ ಪವರ್​ಫುಲ್​ ರಾಜಕಾರಣಿಯಾದ ಮಾಳವಿಕಾ ನಾಯರ್​ ; ಅವರ ಲುಕ್​ ಹೇಗಿದೆ ಗೊತ್ತಾ?

Malavika Nair (8)
Published on

ಜೂ. ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ನಟಿಸುತ್ತಿರುವ ಹೊಸ ಸಿನಿಮಾ ‘ಡೆವಿಲ್’. ಈ ಚಿತ್ರದಲ್ಲಿ ಕಲ್ಯಾಣ್ ಮೊದಲ ಬಾರಿಗೆ ಸೀಕ್ರೆಟ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಕನ್ನಡದ ‘ಗಾಳಿಪಟ 2’, ತೆಲುಗಿನ ‘ವಿರೂಪಾಕ್ಷ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ.

ಜತೆಗೆ ಅಜಯ್, ಸತ್ಯ, ಶ್ರೀಕಾಂತ್ ಹಾಗೂ ಎಡ್ವರ್ಡ್ ಸೊನ್ನೆನ್‌ಬ್ಲಿಕ್, ಮಾರ್ಕ್ ಬೆನ್ನಿಂಗ್ಟನ್ ಸೇರಿ ಕೆಲವು ಹಾಲಿವುಡ್ ಕಲಾವಿದರೂ ತಾರಾಗಣದಲ್ಲಿದ್ದಾರೆ. ಇದೀಗ ಮಲಯಾಳಂನ ‘ಉಸ್ತಾದ್ ಹೋಟೆಲ್’, ‘ಬ್ಲ್ಯಾಕ್ ಬಟರ್‌ಫ್ಲೈ’ ಜತೆಗೆ ತೆಲುಗಿನ ‘ಟ್ಯಾಕ್ಸಿವಾಲಾ’, ‘ಒರೆ ಬುಜ್ಜಿಗಾ’, ‘ಥ್ಯಾಂಕ್ ಯೂ’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿರುವ ಮಾಳವಿಕಾ ನಾಯರ್ ‘ಡೆವಿಲ್’ ಚಿತ್ರತಂಡ ಸೇರಿಕೊಂಡಿದ್ದಾರೆ. ಅವರಿಲ್ಲಿ ಮಣಿಮೇಕಲಾ ಎಂಬ ಪ್ರಬಲ ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗಷ್ಟೆ ಬಿಳಿ ಕಾಟನ್ ಸೀರೆ ತೊಟ್ಟು ಭಾಷಣ ಮಾಡುತ್ತಿರುವ ಮಾಳವಿಕಾ ನಾಯರ್ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಅಭಿಷೇಕ್ ನಾಮಾ ನಿರ್ದೇಶಿಸುತ್ತಿರುವ ‘ಡೆವಿಲ್ : ದಿ ಬ್ರಿಟೀಷ್ ಸೀಕ್ರೆಟ್ ಏಜೆಂಟ್’ ಚಿತ್ರಕ್ಕೆ ಹರ್ಷವರ್ಧನ್ ರಾಮೇಶ್ವರ್ ಸಂಗೀತ, ಸೌಂದರ್ ರಾಜನ್ ಛಾಯಾಗ್ರಹಣವಿರಲಿದೆ. ಸಿನಿಮಾ ಇದೇ ನ. 24ರಂದು ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net