More

    Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ‘ಲವ್ ಮಾಕ್ಟೇಲ್ 2’ ಮೂಲಕ ’ಸಿಹಿ’ಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರೇಚಲ್ ಡೇವಿಡ್. ಸದ್ಯ ‘ಶೆಫ್​ ಚಿದಂಬರ’ ಸೇರಿ ಕನ್ನಡದ ಮೂರು ಚಿತ್ರಗಳು ಸೇರಿದಂತೆ ತಮಿಳು ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೆ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಅವರು, ಮುಂದಿನ ಸಿನಿಮಾ, ಪಾತ್ರಗಳು, ಹವ್ಯಾಸ, ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

    Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ
    • ‘ಶೆಫ್​ ಚಿದಂಬರ’ ಚಿತ್ರದಲ್ಲಿ ನಿಮ್ಮ ಪಾತ್ರ?
    • ನಿರ್ದೇಶಕ ಆನಂದ್ ವೀಡಿಯೊ ಕಾಲ್ ಮೂಲಕ ಕಥೆ ಹೇಳಿದರು. ಇಷ್ಟವಾಗಿ ಒಪ್ಪಿಕೊಂಡೆ. ಮರ್ಡರ್ ಮಿಸ್ಟ್ರಿ ಜತೆ ಡಾರ್ಕ್ ಕಾಮಿಡಿ ಇರುವ ವಿಭಿನ್ನ ಜಾನರ್ ಸಿನಿಮಾ. ಇಂತಹ ವಿಷಯ ಕನ್ನಡದಲ್ಲಿ ಹೊಸತು ಅಂತನ್ನಿಸಿತು. ಅನು ಎಂಬ ಪ್ರಾಮುಖ್ಯತೆ ಇರುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.
    • ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ..
    • ಅಲ್ಲಿಗೂ ಕನ್ನಡಕ್ಕೂ ಹೆಚ್ಚು ವ್ಯತ್ಯಾಸವಿಲ್ಲ. ಆದರೆ, ಬೆಂಗಳೂರು ಮತ್ತು ಕೇರಳ ಎರಡೂ ನನಗೆ ಮನೆ ಇದ್ದ ಹಾಗೆ. ನಾನು ಹುಟ್ಟಿ ಬೆಳೆದೆದ್ದು ಬೆಂಗಳೂರಿನಲ್ಲೇ. ಶೂಟಿಂಗ್ ಇದ್ದಾಗ ಕೇರಳಕ್ಕೆ ಹೋಗುತ್ತೇನೆ. ಸ್ಯಾಂಡಲ್‌ವುಡ್‌ನಲ್ಲಿ ಜನ ನನ್ನನ್ನು ಸ್ವೀಕರಿಸಿದ ರೀತಿ ತುಂಬಾ ಖುಷಿಯಿದೆ. ಇನ್ನೂ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ.

    ಇದನ್ನೂ ಓದಿ : BBKS10; ಕ್ಯಾಪ್ಟನ್‌ ಸ್ನೇಹಿತ್​ಗೆ ಕಠಿಣ ಶಿಕ್ಷೆ?

    Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ

    *‘ಶೆಫ್​ ಚಿದಂಬರ’ ಅನುಭವ ಹೇಗಿತ್ತು?
    -ಈ ಟೀಮ್ ಪ್ಲ್ಯಾನಿಂಗ್ ಬಹಳ ಇಷ್ಟವಾಯಿತು. ಇಷ್ಟು ಜನ ಕಲಾವಿದರನ್ನು ಸೇರಿಸಿ 29 ದಿನಗಳಲ್ಲಿ ಶೂಟಿಂಗ್ ಮುಗಿಸುವುದು ಸಾಮಾನ್ಯದ ವಿಷಯವಲ್ಲ. ತಾಂತ್ರಿಕ ವರ್ಗ ಸೇರಿ ಎಲ್ಲರೂ ಅದ್ಭುತವಾಗಿ ಕೆಲಸ ಮಾಡಿದ್ದಾರೆ.

    • ಯಾವ ರೀತಿಯ ಪಾತ್ರ ನಿಮಗಿಷ್ಟ?
    • ನನಗೆ ಆ್ಯಕ್ಷನ್ ಪಾತ್ರ ಮಾಡುವ ಆಸೆಯಿದೆ. ಪ್ರತಿ ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ಮಾಡಿದ ಹಿಂದಿನ ಸಿನಿಮಾಗಿಂತ ಭಿನ್ನವಾಗಿದೆಯೇ ಎನ್ನುವುದನ್ನು ಮೊದಲು ನೋಡುತ್ತೇನೆ. ಹೀಗಾಗಿ ಪ್ರತಿ ಸಿನಿಮಾಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಟಿಸಲು ಸಾಧ್ಯವಾಗುತ್ತಿದೆ.

    ಇದನ್ನೂ ಓದಿ : ತಮ್ಮ ಮುಂದಿನ ಸಿನಿಮಾದ ಬಗ್ಗೆ ನಟ ವಿಶಾಲ್​ ಕೊಟ್ಟ ಸುಳಿವು ಹೀಗಿದೆ

    Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ
    • ವೆಬ್ ಸರಣಿಗಳಲ್ಲಿ ಅವಕಾಶ ಸಿಕ್ಕರೆ..?
    • ಇದುವರೆಗೂ ವೆಬ್‌ಸರಣಿಯಲ್ಲಿ ನಟಿಸಿಲ್ಲ. ಆದರೆ, ಒಳ್ಳೆಯ ಅವಕಾಶ ಸಿಕ್ಕರೆ ಯಾವ ಭಾಷೆಯಾದರೂ ಮಾಡಲು ರೆಡಿ. ಇನ್ನೊಂದು ತಮಿಳು ಚಿತ್ರ ಮಾಡುತ್ತಿದ್ದೇನೆ. ಇತ್ತೀಚೆಗಷ್ಟೆ ನನ್ನ ಮೊದಲ ತಮಿಳು ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ.
    • ಸಿನಿಮಾ ಹೊರತುಪಡಿಸಿ ಏನು ಹವ್ಯಾಸಗಳಿವೆ?
    • ನನಗೆ ಹೊಸ ಹೊಸ ಕೌಶಲಗಳನ್ನು ಕಲಿಯಲು ಬಹಳ ಇಷ್ಟ. ಅದು ಎಲ್ಲೋ ಒಂದು ಕಡೆ ಸಿನಿಮಾಗೆ ಸಹಾಯವಾಗುತ್ತದೆ ಎನ್ನುವುದು ನನ್ನ ನಂಬಿಕೆ. ಕಲಾವಿದೆಯಾಗಿ ನನಗೆ ಉಪಯೋಗವಾಗುತ್ತದೆ. ಕ್ರಿಯಾಶೀಲತೆ ಹೆಚ್ಚಿಸುತ್ತದೆ. ಈಗ ಎಲ್ಲ ಸಿನಿಮಾಗಳ ಚಿತ್ರೀಕರಣ ಮುಗಿಸಿರುವುದರಿಂದ ಪಾಟರಿ ಕಲಿಯುತ್ತಿದ್ದೇನೆ. ಜತೆಗೆ ಸಂಗೀತ ಹಾಗೂ ಪಿಯಾನೋ ತರಬೇತಿ ಕೂಡ ಪಡೆಯುತ್ತಿದ್ದೇನೆ.
    Rachel David Interview ಆ್ಯಕ್ಷನ್ ಪ್ರಿಯೆ ರೇಚೆಲ್ ; ಪಾಟರಿ, ಸಂಗೀತ, ಪಿಯಾನೋ ಕಲಿಕೆಯಲ್ಲಿ ಬಿಜಿಯಾದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts