'ಕೃಷ್ಣಂ ಪ್ರಣಯ ಸಖಿ' ನಾಯಕಿ ಶರಣ್ಯಾ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ.

Sharanya Shetty (3)
Published on

'1980', 'ಡಿಯರ್​ ಲವ್​' ಸೇರಿ ಇದೀಗ ಗೋಲ್ಡನ್​ ಸ್ಟಾರ್​ ಗಣೇಶ್​ ನಾಯಕನಾಗಿರುವ 'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ನಟಿಸುತ್ತಿರುವ ಶರಣ್ಯಾ ಶೆಟ್ಟಿ ನವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾರೆ. ದಸರಾ ಸಡಗರದ ಬಗ್ಗೆ ಅವರು, 'ಪ್ರತಿ ವರ್ಷ ನವರಾತ್ರಿ ಹಬ್ಬ ನಮಗೆ ತುಂಬ ಸ್ಪೆಷಲ್. ಏಕೆಂದರೆ ಒಂಬತ್ತು ದಿನಗಳ ಕಾಲ ಪ್ರತಿದಿನ ದೇವಸ್ಥಾನಕ್ಕೆ ಹೋಗುತ್ತೇನೆ. ಮನೆಯಲ್ಲಿ ಕಳಶ ಕೂರಿಸಿ, ಪ್ರತಿದಿನ ಪೂಜೆ ಮಾಡಿ, ದೇವಿ ಮಹಾತ್ಮೆಯ ಒಂದೊಂದು ಪಾಠ ಓದುತ್ತೇನೆ. ಒಂಬತ್ತು ದಿನವೂ ಒಂದೊಂದು ವಿಶೇಷತೆ ಇರುತ್ತದೆ. ಕೊನೆಯ ಒಂಬತ್ತನೇ ದಿನ ಕುಟುಂಬದವರೆಲ್ಲರೂ ಸೇರಿ ಪೂಜೆ ಮಾಡಿ, ಸಿಹಿ ಅಡುಗೆ ಮಾಡಿ ತಿಂದು ಸಂಭ್ರಮಿಸುತ್ತೇವೆ' ಎಂದು ಹೇಳಿಕೊಳ್ಳುತ್ತಾರೆ.

'ಹಬ್ಬದ ದಿನಗಳಲ್ಲಿ ಕೇವಲ ಸಸ್ಯಾಹಾರ ಮಾತ್ರ ಸೇವಿಸುತ್ತೇವೆ. ಪ್ರತಿದಿನ ಪೂಜೆ ಆಗುವವರೆಗೂ ಊಟ ಮಾಡುವುದಿಲ್ಲ. ಅಮ್ಮ ಅಂತೂ ಪ್ರತಿ ಹಬ್ಬಗಳನ್ನೂ ಸಡಗರದಿಂದ ಆಚರಿಸುತ್ತಾರೆ. ದಸರಾ ಹಬ್ಬದ ಸಮಯದಲ್ಲಿ ನಾನೂ ಅಮ್ಮನ ಜತೆ ಸೇರಿಕೊಳ್ಳುತ್ತೇನೆ. ಇನ್ನು ಈ ಬಾರಿ ನಾನು ಯುವ ದಸರಾದಲ್ಲಿ ನೃತ್ಯಪ್ರದರ್ಶನ ನೀಡಿದ್ದೇನೆ' ಎಂದು ಈ ಬಾರಿ ಹಬ್ಬದ ಖುಷಿಯನ್ನು ಹಂಚಿಕೊಳ್ಳುತ್ತಾರೆ ಶರಣ್ಯಾ.

ಯುವ ದಸರಾ ಒಂದು ದೊಡ್ಡ ವೇದಿಕೆ. ಅಲ್ಲಿ ಪರ್ಫಾಮ್​ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಈಗ್ಗೆ ನಾಲ್ಕು ವರ್ಷಗಳ ಹಿಂದೆ ನಡೆದ ಯುವ ದಸರಾದಲ್ಲಿ ಫ್ಯಾಷನ್​ ಶೋ ಮಾಡಿದ್ದೆ. ಈ ವರ್ಷ 1980ರ ಕನ್ನಡ ನಾಯಕಿಯರಿಗೆ ಗೌರವಾರ್ಥವಾಗಿ ತುಂಬ ಯೋಚಿಸಿ ರೆಟ್ರೋ ಡಾನ್ಸ್ ರ್ಪಾರ್ಮ್ ಆಯ್ಕೆ ಮಾಡಿಕೊಂಡಿದ್ದೆ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net