ತಮ್ಮ ಮುಂದಿನ ಸಿನಿಮಾದ ಬಗ್ಗೆ ನಟ ವಿಶಾಲ್​ ಕೊಟ್ಟ ಸುಳಿವು ಹೀಗಿದೆ

Untitled design - 2023-10-19T170643.315
Published on

ತಮಿಳುನಾಡು: ಕಾಲಿವುಡ್​ನ ನಟ, ನಿರ್ಮಾಪಕ ವಿಶಾಲ್​ ಅವರ ಮುಂಬರುವ 34ನೇ ಪ್ರಾಜೆಕ್ಟ್ ಬಗ್ಗೆ ಒಂದು ಫೋಟೋ ಹರಿಬಿಡುವ ಮುಖೇನ ತಮ್ಮ ಅಭಿಮಾನಿಗಳು ಮತ್ತು ಸಿನಿಪ್ರಿಯರಿಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ನಟ ವಿಶಾಲ್ ಅಭಿನಯದ ಗ್ಯಾಂಗ್​ಸ್ಟರ್​ ಸಿನಿಮಾ 'ಮಾರ್ಕ್ ಆಂಟನಿ' ಪ್ರೇಕ್ಷಕರಿಂದ ನಿರೀಕ್ಷಿಸಿದ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದು, ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿದೆ. ಈ ಮಧ್ಯೆ ತಮ್ಮ ಮುಂದಿನ 'ವಿಶಾಲ್​ 34' ಸಿನಿಮಾಗೆ ನಿರ್ದೇಶಕ ಹರಿ ಜೊತೆ ಕೈಜೋಡಿಸಿದ ವಿಶಾಲ್​, ಮನೆಯೊಳಗೆ ಮಳೆ ಹರಿದುಬರುತ್ತಿರುವ ಫೋಟೋವೊಂದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

"ವಿಶಾಲ್​ 34 ಚಿತ್ರದ ಎರಡನೇ ವೇಳಾಪಟ್ಟಿಯ ಶೂಟಿಂಗ್​ ಮುಗಿಸಿದ್ದೇವೆ. ಕಡೆಯ ಶಾಟ್​ಗೆ ಸರಿಯಾಗಿ ಮಳೆ ಪ್ರಾರಂಭವಾಯಿತು. ದೇವರ ಆರ್ಶಿವಾದ ಮಳೆಯ ರೂಪದಲ್ಲಿ ಸಿಕ್ಕಿದೆ" ಎಂದು ನಟ ಫೋಟೋ ಮೇಲೆ ಬರೆದು, ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಹರಿ ನಿರ್ದೇಶಿಸುತ್ತಿದ್ದು, ಸ್ಟೋನ್​ ಬೆಂಚರ್ಸ್​ ನಿರ್ಮಾಣ ಮಾಡುತ್ತಿದೆ.

ಸಿನಿಮಾದಲ್ಲಿ ಗೌತಮ್ ವಾಸುದೇವ್ ಮೆನನ್ ಮತ್ತು ಸಮುದ್ರಕನಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಚಿತ್ರ ತಯಾರಕರು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಶೀಘ್ರದಲ್ಲೇ ಹೊರಬರಲಿದೆ ಎಂದು ವಿಶಾಲ್​ ತಿಳಿಸಿದ್ದಾರೆ.

ಪ್ರಿಯಾ ಭವಾನಿ ಶಂಕರ್ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾವನ್ನು ಝೀ ಸ್ಟುಡಿಯೋಸ್ ನಿರ್ಮಿಸುತ್ತಿದೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net