ಐಷಾರಾಮಿ ಕಾರು ಖರೀದಿಸಿದ ನಟಿ ಕರೀನಾ ಕಪೂರ್; ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ?

kareenakapoor
Published on

ಮುಂಬೈ: ಪ್ರಸ್ತುತ ಬಿ-ಟೌನ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಕರೀನಾ ಕಪೂರ್. ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಅವರನ್ನು ಮದುವೆಯಾಗಿರುವ ಕರೀನಾ ಕಪೂರ್ ಬಹಳ ದಿನಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. ಕರೀನಾ ರೀ ಎಂಟ್ರಿ ಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ಲಾಲ್ ಸಿಂಗ್ ಚಡ್ಡಾ ಅವರ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಸಿನಿಮಾ, ಪ್ಯಾಮಿಲಿ ವಿಚಾರವಾಗಿ ಸುದ್ದಿಯಲ್ಲಿರುವ ನಟಿ ಇದೀಗ ದುಬಾರಿ ಬೆಲೆಯ ಕಾರ್​ ಖರೀದಿಸಿದ್ದಾರೆ ಎನ್ನುವ ಸುದ್ದಿ ಹಾಗೂ ವಿಡಿಯೋ ಸೊಶೀಯಲ್​​​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕರೀನಾ ಇತ್ತೀಚೆಗೆ ಅವರು ಹೊಸ ಐಷಾರಾಮಿ ಕಾರು ಖರೀದಿಸಿದರು. ಕರೀನಾ ಕಪೂರ್ ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕರೀನಾ ಜೊತೆಗೆ ಅವರ ಸಹೋದರಿ ಕರಿಷ್ಮಾ ಕಪೂರ್ ಕೂಡ ಕಾಣಿಸಿಕೊಂಡಿದ್ದಾರೆ.

ವರದಿಗಳ ಪ್ರಕಾರ, ಕಾರಿನ ಬೆಲೆ ರೂ. 2ರಿಂದ 2.3 ಕೋಟಿ ಇರಲಿದೆಯಂತೆ. ಭಾರತೀಯ ಸೆಲೆಬ್ರಿಟಿಗಳಲ್ಲಿ, ಈ ಲ್ಯಾಂಡ್ ರೋವರ್ ಕಾರು ಸನ್ನಿ ಡಿಯೋಲ್ ಮತ್ತು ಸುನಿಲ್ ಶೆಟ್ಟಿ ಒಡೆತನದಲ್ಲಿದೆ ಎನ್ನಲಾಗಿದೆ.

ಲಾಲ್ ಸಿಂಗ್ ಚಡ್ಡಾ ನಂತರ, ಈಗ ಕರೀನಾ ಕಪೂರ್ ದಿ ಬಕಿಂಗ್ಹ್ಯಾಮ್ ಮರ್ಡರ್ಸ್ ಚಿತ್ರದಲ್ಲಿ ಪ್ರದಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಹನ್ಸಲ್ ಮೆಹ್ತಾ ನಿರ್ಮಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕರೀನಾ ಫಸ್ಟ್ ಲುಕ್ ಪೋಸ್ಟರ್ ಆಕರ್ಷಕವಾಗಿದೆ. ಅವರು ರೋಹಿತ್ ಶೆಟ್ಟಿ ಅವರ ಸಿಂಗಂ 3 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net