Malavika Menon : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಆದರೆ, ಕೆಟ್ಟದಾಗಿ ಮಾತನಾಡುವುದು ತಪ್ಪು. ಒಂದು ವೇಳೆ ಸಿಕ್ಕಿಬಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ತಾಜಾ ಉದಾಹರಣೆ.
ಮಲಯಾಳಂ ಚಿತ್ರರಂಗದ ನಟಿ ಮಾಳವಿಕಾ ಮೆನನ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿ ಅವಮಾನಿಸಿದ್ದ ಯುವಕನನ್ನು ಕೇರಳ ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.
ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿ ಮೂಲದ ಶ್ರೀಜಿತ್ ರವೀಂದ್ರನ್ (28) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಮಾಳವಿಕಾ ಉಡುಗೆ ಬಗ್ಗೆ ರವೀಂದ್ರನ್ ಕೆಟ್ಟದಾಗಿ ಕಾಮೆಂಟ್ ಮಾಡಿ ಅವಮಾನಿಸಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಮಾಳವಿಕಾ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಕೊಚ್ಚಿ ಸೈಬರ್ ಪೊಲೀಸರು ಆರೋಪಿ ರವೀಂದ್ರನ್ನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಆಯಾ ವಯಸ್ಸಿಗೆ ಅನುಗುಣವಾಗಿ ಯಾರು ಎಷ್ಟು ಗಂಟೆ ನಿದ್ದೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಪಟ್ಟಿ… Sleep
ಸಾಮಾಜಿಕ ಜಾಲತಾಣದಲ್ಲಿ ನಟಿಯರ ಫೋಟೋ ಮತ್ತು ವಿಡಿಯೋ ಕೆಳಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಒಂದು ವರ್ಗದ ಜನರಿದ್ದಾರೆ. ಕೆಲವರು ತಮ್ಮ ಅಧಿಕೃತ ಜಾಲತಾಣ ಖಾತೆಯಲ್ಲೇ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ನಕಲಿ ಖಾತೆಗಳ ಮೂಲಕ ನಟಿಯರಿಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಕೆಲ ನಟಿಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ, ಕೆಲವರು ಇಂಥವರ ವಿರುದ್ಧ ಸಮರ ಸಾರಿ ಕಾನೂನು ಕ್ರಮಕ್ಕೆ ಮುಂದಾಗುತ್ತಾರೆ.
ಇನ್ನು ಮುಂದೆ ಯಾರಾದರೂ ಕೆಟ್ಟದಾಗಿ ಕಾಮೆಂಟ್ ಮಾಡುವ ಮುನ್ನ ಒಮ್ಮೆ ಯೋಚಿಸಿ, ಇಲ್ಲವಾದಲ್ಲಿ ಶ್ರೀಜಿತ್ ರವೀಂದ್ರನ್ ರೀತಿ ಪೊಲೀಸರ ಅತಿಥಿಯಾಗಬೇಕಾಗುತ್ತದೆ. (ಏಜೆನ್ಸೀಸ್)
ಖ್ಯಾತ ನಿರ್ದೇಶಕನ ಜತೆ ಅನುಷ್ಕಾ ಶೆಟ್ಟಿ ರಹಸ್ಯ ಮದುವೆ! ಕೊನೆಗೂ ಬಹಿರಂಗವಾಯ್ತು ಅಸಲಿ ಸತ್ಯ | Anushka Shetty
ನಾನು ಬಿಡೋದೆ ಇಲ್ಲ… ಸೆಲ್ಫಿ ವೇಳೆ ಮಹಿಳೆಯ ವರ್ತನೆ ಕಂಡು ಕಕ್ಕಾಬಿಕ್ಕಿಯಾದ ಕೊಹ್ಲಿ! ವಿಡಿಯೋ ವೈರಲ್… Virat Kohli