ನನ್ನ ಗಂಡ ಹೇಗಿರಬೇಕೆಂದರೆ… ; ಕನಸಿನ ರಾಜಕುಮಾರನ ಬಗ್ಗೆ ನಟಿ ಕೃತಿ ಸನನ್ ಮಾತು

Kriti Sanon (1)
Published on

ತೆಲುಗಿನ ‘ನೇನೊಕ್ಕಡಿನೆ’ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಕೃತಿ ಸನನ್, ನಂತರ ಬಾಲಿವುಡ್‌ನಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಕಳೆದ ಒಂದು ದಶಕದಲ್ಲಿ ‘ರಾಬ್ತಾ’, ‘ಮಿಮಿ’, ‘ಆದಿಪುರುಷ್’ ಸೇರಿ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ 33 ವರ್ಷದ ಕೃತಿ ಕೈಯಲ್ಲಿ ಈಗಲೂ ಮೂರು ಚಿತ್ರಗಳಿವೆ. ಕೆಲ ವರ್ಷಗಳಿಂದ ನಟ ಟೈಗರ್ ಶ್ರಾಫ್​ ಜತೆ ಓಡಾಡಿಕೊಂಡಿದ್ದ ಅವರು, ಇತ್ತೀಚೆಗಷ್ಟೆ ಬ್ರೇಕಪ್ ಮಾಡಿಕೊಂಡಿದ್ದರು.

ಅದರ ನಡುವೆಯೇ ಇಬ್ಬರೂ ಪ್ಯಾನ್ ಇಂಡಿಯಾ ‘ಗಣಪತ್’ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದಾರೆ. ಇಂತಹ ಕೃತಿ ಇತ್ತೀಚೆಗಷ್ಟೆ ತಮ್ಮ ಕನಸಿನ ರಾಜಕುಮಾರನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ಸದ್ಯ ನಾನು ಒಂಟಿಯಾಗಿದ್ದೇನೆ. ನಾನು ತುಂಬ ರೊಮ್ಯಾಂಟಿಕ್. ನನ್ನನ್ನು ಮದುವೆಯಾಗುವ ಹುಡುಗ ಕೂಡ ರೊಮ್ಯಾಂಟಿಕ್ ಆಗಿರಬೇಕು ಅಂತ ಬಯಸುತ್ತೇನೆ. ಏನಾದರೂ ಸಾಧಿಸಬೇಕೆಂದು ಮುನ್ನುಗ್ಗುವ, ಮಹತ್ವಾಕಾಂಕ್ಷೆಯ, ನನ್ನನ್ನೂ ಪ್ರೇರೇಪಿಸುವಂತಿರಬೇಕು. ನನಗಿಂತ ಎತ್ತರವಿರಬೇಕು. ಎಲ್ಲಕ್ಕೂ ಮಿಗಿಲಾಗಿ ರಿಯಲ್ ಮತ್ತು ಪ್ರಾಮಾಣಿಕವಾಗಿರಬೇಕು’ ಎಂದು ಹೇಳಿಕೊಂಡಿದ್ದಾರೆ.

ಕೃತಿ, ಟೈಗರ್ ನಟಿಸುತ್ತಿರುವ ‘ಗಣಪತ್’ ಇದೇ ತಿಂಗಳ 20ರಂದು ತೆರೆಗೆ ಬರಲಿದೆ. ಅದರ ಜತೆಗೆ ಕೃತಿ ‘ದೋ ಪತ್ತಿ’, ‘ದಿ ಕ್ರ್ಯೂ’ ಹಾಗೂ ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net