ನಟರೇ ಎಕ್ಸ್‌ಪೋಸ್ ಮಾಡಿದ್ದಾರೆ! ‘ಗರಡಿ’ ಚಿತ್ರದ ಬಗ್ಗೆ ನಾಯಕಿ ಸೋನಲ್ ಮೊಂಟೇರೊ ಮಾತು

Garadi (2)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಯೋಗರಾಜ್ ಭಟ್ ನಿರ್ದೇಶನದ, ಯಶಸ್ ಸೂರ್ಯ, ಸೋನಲ್ ಮೊಂಟೇರೊ ಮತ್ತು ಬಿ.ಸಿ. ಪಾಟೀಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಗರಡಿ’. ಈಗಾಗಲೇ ಚಿತ್ರದ ‘ಹೊಡಿರೆಲೆ ಹಲಗಿ’ ಹಾಗೂ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ವೈರಲ್ ಆಗಿವೆ. ಟೈಟಲ್ ಹೇಳುವಂತೆ ದೇಸೀ ಕಲೆ ಕುಸ್ತಿ ಸುತ್ತ ಚಿತ್ರದ ಕಥೆ ಸುತ್ತುತ್ತದೆ.

ಹಾಗಂತ ನಟಿಯರಿಗೆ ಹೆಚ್ಚು ಆಸ್ಪದವಿಲ್ಲ ಅಂತಲ್ಲ. ‘ಪಂಚತಂತ್ರ’, ‘ರಾಬರ್ಟ್’, ‘ಬನಾರಸ್’ ಸೇರಿ ಕೆಲವು ಚಿತ್ರಗಳಲ್ಲಿ ಮಿಂಚಿರುವ ನಾಯಕಿ ಸೋನಲ್ ‘ಗರಡಿ’ಯಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಹೆಣ್ಣುಮಕ್ಕಳು ಕುಣಿಯುವುದು, ಎಕ್ಸ್‌ಪೋಸ್ ಮಾಡುವುದು ಸಿನಿಮಾಗಳಲ್ಲಿ ಸಾಮಾನ್ಯ. ಆದರೆ, ‘ಗರಡಿ’ ಚಿತ್ರದಲ್ಲಿ ಅದು ಉಲ್ಟಾ ಆಗಿದೆ. ನಾಯಕಿಯಾಗಿ ನಾನು ‘ಗರಡಿ’ ಚಿತ್ರದಲ್ಲಿ ನಟರು ಎಕ್ಸ್‌ಪೋಸ್ ಮಾಡುವುದನ್ನು ನೋಡಿದ್ದೇನೆ’ ಎಂದು ನಗುತ್ತಾರೆ.

Sonal Monteiro at Banaras Movie Press Meet
Sonal Monteiro at Banaras Movie Press Meet

ವಿಚಿತ್ರ ಪಾತ್ರದಲ್ಲಿ ನಟಿಸಿದ್ದೇನೆ!
ನಾಯಕಿ ಸೋನಲ್ ಮೊಂಟೇರೊ ‘ಗರಡಿ’ಯಲ್ಲಿ ವಿಚಿತ್ರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಯೋಗರಾಜ್ ಭಟ್ ಸರ್ ನನ್ನ ಗಾಡ್‌ಾದರ್. ‘ಗರಡಿ’ ಚಿತ್ರದಲ್ಲಿ ಈಗಿನ ಟ್ರೆಂಡ್‌ಗೆ ತಕ್ಕ ವಿಚಿತ್ರ ಪಾತ್ರ ಕೊಟ್ಟಿದ್ದಾರೆ. ನಾನಿಲ್ಲಿ ಟಿಕ್‌ಟಾಕರ್ ಆಗಿದ್ದೇನೆ. ಶೂಟಿಂಗ್ ಪ್ರಾರಂಭವಾಗುವ 15, 20 ದಿನ ಮುನ್ನವೇ ನಮಗೆ ವರ್ಕ್‌ಶಾಪ್ ಮಾಡಿಸಿದ್ದರು. ಇನ್ಸ್‌ಟಾ ರೀಲ್ಸ್, ಯೂಟ್ಯೂಬ್ ವ್ಲಾಗ್‌ಗಳನ್ನು ನೋಡಿ ಸಿದ್ಧತೆ ಪಾತ್ರಕ್ಕೆ ಮಾಡಿಕೊಂಡೆ. ಭಟ್ ಸರ್, ಚಿತ್ರದಲ್ಲಿ ನೀನು ಚೆನ್ನಾಗಿ ಕಾಣಿಸಿಕೊಳ್ಳಬಾರದು ಎನ್ನುತ್ತಿದ್ದರು’ ಎಂದು ಹೇಳಿಕೊಳ್ಳುತ್ತಾರೆ. ಅಂದಹಾಗೆ, ‘ಗರಡಿ’ ನ. 10ರಂದು ರಿಲೀಸ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net