More

    ವೃದ್ಧ ಶೇಕ್​ಹ್ಯಾಂಡ್​ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ: ನಟಿ ಈಶಾ ಚೋಪ್ರಾ

    ಮುಂಬೈ:  ಮಹಿಳೆಯರು ಮಾತ್ರವಲ್ಲದೇ ಹುಡುಗರು, ಪುರುಷರು ಕೂಡ ಲೈಂಗಿಕ ಕಿರುಕುಳ ಅನುಭವಿಸುತ್ತಿರುವುದು ಇದೆ. ತಮ್ಮ ಮನೆಯಲ್ಲಿಯೂ ಮಾತನಾಡಲು ಹೆದರುತ್ತಾರೆ, ಅಂಜುತ್ತಾರೆ.  ಬರಹಗಾರ್ತಿ, ನಟಿಯೂ ಆಗಿರುವ 30 ವರ್ಷದ ನಟಿ ಈಶಾ ತಮಗೆ  70 ವರ್ಷದ ವೃದ್ಧ ಕಿರುಕುಳ ನೀಡಿದ ಘಟನೆಯನ್ನು ರಿವೀಲ್​ ಮಾಡಿದ್ದಾರೆ.

    ನಟಿ ಹೇಳಿದ್ದೇನು?: 10 ದಿನಗಳ ಹಿಂದೆ ನನಗೆ ವ್ಯಕ್ತಿಯೊಬ್ಬ ದೈಹಿಕವಾಗಿ ಕಿರುಕುಳ ನೀಡಿದರು. ಸಾರ್ವಜನಿಕ ಸ್ಥಳದಲ್ಲಿ 70 ವರ್ಷ ವಯಸ್ಸಿನ ವ್ಯಕ್ತಿ  ಶೇಕ್ ಹ್ಯಾಂಡ್ ಮಾಡುವ ನೆಪದಲ್ಲಿ ನನ್ನನ್ನು ಎಳೆದು ದೇಹ ಸ್ಪರ್ಶಿಸಿದ್ದಾನೆ. ಈ ಘಟನೆಯ ನಂತರ ನಾನು ಖಿನ್ನತೆ ಜಾರಿದ್ದೆ. ನಾನು ಶಾಕ್​ನಲ್ಲಿದ್ದೆ. ರಾತ್ರಿ ನಿದ್ರಿಸಲಾದೆ, ಹಗಲು ಹೆಚ್ಚು ಮಲಗುತ್ತಾ ನನ್ನ ದಿನಚರಿಯೇ ಏರುಪೇರಾಗಿತ್ತು.  ಕೈಗಳು ನಡುಗುತ್ತಿದ್ದವು. ಈ ಘಟನೆಯಿಂದ ಹೊರಕ್ಕೆ ಬರಲು ತುಂಬಾ ದಿನಗಳೇ ಬೇಕಾದವು. ಇದರಿಂದ ಸಾಮಾಜಿಕ ಜಾಲತಾಣದಿಂದ ದೂರವೇ ಉಳಿದಿದ್ದೆ. ಅಂದು  ನನ್ನೊಂದಿಗಿದ್ದ ಗೆಳತಿ ಬಿಟ್ಟು ಬೇರೆ ಯಾರೂ ಗಮನಿಸಲಿಲ್ಲ. ಆದರೆ ಅವಳೂ ಕೂಡಾ ನನ್ನೊಂದಿಗೆ ಶಾಕ್​ ಆಗಿದ್ದಳು. ತಾವು  7 ವರ್ಷದವಳಾಗಿದ್ದಾಗ ಇಂಥದ್ದೇ ಘಟನೆ  ಸಿನಿಮಾ ಥಿಯೇಟರ್​ನಲ್ಲಿ ನಡೆದಿತ್ತು.  ಆ ಮುಖ ಈಗಲೂ ನೆನಪಾದರೆ ಭಯವಾಗುತ್ತದೆ.  ತುಂಬಾ ಗಾಬರಿಯಿಂದ ಇದ್ದೆ. ಈ ದಿನಗಳನ್ನು ದಾಟಿ ಇದನ್ನ ಬರೆಯುವ ಧೈರ್ಯ ಮಾಡಿದ್ದೇನೆ ಎಂದು ನಟಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

    ಅನೇಕ ಅಭಿಮಾನಿಗಳು ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ನೀವು ತುಂಬಾ ಧೈರ್ಯವಾಗಿರಬೇಕೆಂದು ನಾನು ಬಯಸುತ್ತೇನೆ. ನೀವು  ಧರ್ಯವಾಗಿರಿ ಎಂದು ಕಾಮೆಂಟ್​​ ಮಾಡುವ ಮೂಲಕವಾಗಿ ನಟಿಗೆ ಅಭಿಮಾನಿಗಳು ಧೈರ್ಯ ತುಂಬಿದ್ದಾರೆ.

    ನೀರ್ಜಾ, ಎ ಚೀಟ್​ ಡೇ, ನೋ ಲ್ಯಾಂಡ್ಸ್​ ಮ್ಯಾನ್​, ಅಫ್ವಾ, ನೀರಜ್​,  ನೋ ಒನ್​ ಕಿಲ್ಡ್​ ಜೆಸ್ಸಿಕಾ, ಅಲಿಘರ್​, ಮಾಮಾಸ್​ ಬಾಯ್ಸ್​, ಪರಚಾಯಿನಂತ ಹಲವು ಚಿತ್ರಗಳಲ್ಲಿ ನಟಿಸಿರುವ ಈಶಾ, ಪ್ರಸಿದ್ಧ ಬರಹಗಾರ್ತಿಯೂ ಆಗಿದ್ದಾರೆ.

    500 ರೂ.ಸಂಬಳ ಪಡೆಯುತ್ತಿದ್ದ ಪುಟ್ಟ ಬಾಲಕ ಇಂದು ಕೋಟ್ಯಧಿಪತಿ…ಈ ನಟ ಯಾರೆಂದು ಗುರುತಿಸುತ್ತೀರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts