500 ರೂ.ಸಂಬಳ ಪಡೆಯುತ್ತಿದ್ದ ಪುಟ್ಟ ಬಾಲಕ ಇಂದು ಕೋಟ್ಯಧಿಪತಿ…ಈ ನಟ ಯಾರೆಂದು ಗುರುತಿಸುತ್ತೀರಾ?

kapil
Published on

ಮುಂಬೈ: ಈ ಫೋಟೋದಲ್ಲಿ ನೀವು ಚಿಕ್ಕ ಬಾಲಕನನ್ನು ನೋಡಬಹುದು...ಅವನು ತನ್ನ ತಂದೆಯ ಪೊಲೀಸ್ ಕ್ಯಾಪ್ ಅನ್ನು ತಲೆಯ ಮೇಲೆ ಧರಿಸಿದ್ದಾನೆ. ಮುಂದೊಂದು ದಿನ ಇಂತಹ ಹಲವು ಪೊಲೀಸ್ ಅಧಿಕಾರಿಗಳು ತನಗೆ ಸೆಲ್ಯೂಟ್ ಹೊಡೆಯುತ್ತಾರೆ ಎಂದು ಈ ಬಾಲಕನಿಗೆ ತಿಳಿದಿರಲಿಲ್ಲ. ಹೌದು, ಇಂದು ಈ ಪುಟ್ಟ ಬಾಲಕ ಇಡೀ ಜಗತ್ತನ್ನು ಆಳುತ್ತಿದ್ದಾನೆ. ಅಷ್ಟೇ ಅಲ್ಲ, ಪ್ರತಿ ಮನೆಯಲ್ಲೂ ತನ್ನದೇ ಆದ ವಿಶಿಷ್ಟವಾದ ಗುರುತನ್ನು ಸೃಷ್ಟಿಸಿಕೊಂಡಿದ್ದಾನೆ.

ಅನೇಕರು ಈ ಬಾಲಕನಿಗೆ ದೇವರ ಸ್ಥಾನವನ್ನೂ ನೀಡಿದ್ದಾರೆ. ಜನಪ್ರಿಯತೆ ಮತ್ತು ಸ್ಟಾರ್‌ಡಮ್ ಬಗ್ಗೆ ಮಾತನಾಡುವುದಾದರೆ ಬಾಲಿವುಡ್‌ನ ಅನೇಕ ದೊಡ್ಡ ಗಣ್ಯರು ಸಹ ಈ ಬಾಲಕನ ಅಭಿಮಾನಿಗಳಾಗಿದ್ದಾರೆ. ಆದರೆ ಇಷ್ಟು ಎತ್ತರದ ಸ್ಥಾನಕ್ಕೇರಲು ಈ ಬಾಲಕನ ಪ್ರಯಾಣ ಅಷ್ಟು ಸುಲಭವಾಗಿರಲಿಲ್ಲ. ತಂದೆಯ ಮರಣದ ನಂತರ, ಕುಟುಂಬದ ಜವಾಬ್ದಾರಿಗಳು ಚಿಕ್ಕ ವಯಸ್ಸಿನಲ್ಲಿಯೇ ಈ ಬಾಲಕನ ಹೆಗಲ ಮೇಲೆ ಬಿದ್ದವು. ಬಾಲಕನಿಗೆ ಆಗ ಕೇವಲ 14 ವರ್ಷ.

ಇಷ್ಟು ಹೇಳಿದ ಮೇಲೆ ಇವರು ಯಾರು ಎಂದು ನಿಮಗೆ ಗುರಿತಿಸಲು ಸಾಧ್ಯವಾಗದಿದ್ದರೆ ಇಲ್ಲಿದೆ ನೋಡಿ ಉತ್ತರ. ಈ ಬಾಲಕ ಬೇರಾರೂ ಅಲ್ಲ, ಪ್ರತಿಯೊಬ್ಬರ ನೆಚ್ಚಿನ, ಕಿರುತೆರೆಯ ಅತ್ಯಂತ ಪ್ರಸಿದ್ಧ ಹಾಸ್ಯನಟ ಕಪಿಲ್ ಶರ್ಮಾ. ಎಲ್ಲರನ್ನೂ ನಗಿಸುವ ಕಪಿಲ್ ಶರ್ಮಾ ಇಂದು ಕೋಟ್ಯಂತರ ರೂಪಾಯಿಗಳ ಒಡೆಯ. ಆದರೆ ಕೇವಲ 500 ರೂ.ನಲ್ಲಿ ಬದುಕುತ್ತಿದ್ದ ಕಾಲವೊಂದಿತ್ತು. ಅವರ ಬಾಲ್ಯವು ಕಡು ಬಡತನದಲ್ಲಿ ಕೂಡಿತ್ತು. ತಂದೆ ಇಲ್ಲದ ಕಾರಣ ಅಕ್ಕನ ಮದುವೆಗೂ ಹಣ ಇರಲಿಲ್ಲ.

ಮೊದಲ ಸಂಪಾದನೆಯಿಂದ ಸಿಕ್ಕಿತು 500 ರೂ. ಅಮೃತಸರ ನಿವಾಸಿ ಕಪಿಲ್ ಶರ್ಮಾ ಫೋನ್ ಬೂತ್‌ನಲ್ಲಿ ಮೊದಲು ಕೆಲಸ ಮಾಡಿದರು. ಇಲ್ಲಿ ಕೆಲಸ ಮಾಡಿದ್ದಕ್ಕೆ 500 ರೂ. ಅವರ ಮೊದಲ ಗಳಿಕೆಯಾಗಿತ್ತು. ಇದಲ್ಲದೇ ಜವಳಿ ಗಿರಣಿಯಲ್ಲಿಯೂ ಕೆಲಸ ಮಾಡಿದ್ದು, ಅಲ್ಲಿ 900 ರೂ. ಪಡೆದರು.

ಇಂದು ಇವರ ಆದಾಯ 300 ಕೋಟಿ ರೂ.

ಅಂದಹಾಗೆ ಕಪಿಲ್​​​ ಅವರ ಒಂದು ಕಾಮಿಡಿ ಶೋ ಅವರ ಅದೃಷ್ಟವನ್ನು ಬದಲಾಯಿಸಿತು. ಮೊದಲ ಬಾರಿಗೆ ಇಲ್ಲಿ ಆಡಿಷನ್​​​​ನಿಂದ ಅವರು ತಿರಸ್ಕರಿಸಲ್ಪಟ್ಟರು. ನಂತರ ಅವರು ಈ ಕಾರ್ಯಕ್ರಮದ ಮೂರನೇ ಸೀಸನ್ ವಿಜೇತರಾದರು. ಇದಾದ ನಂತರ ಹಿಂತಿರುಗಿ ನೋಡದೆ ಹಂತಹಂತವಾಗಿ ಯಶಸ್ಸಿನ ಮೆಟ್ಟಿಲುಗಳನ್ನು ಏರಿದರು. ಇಂದು ಅವರ ರಿಯಾಲಿಟಿ ಶೋ 'ಕಪಿಲ್ ಶರ್ಮಾ ಶೋ' ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಇವರ ಕಾರ್ಯಕ್ರಮ ವೀಕ್ಷಿಸಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಇಂದು ಅವರ ನಿವ್ವಳ ಮೌಲ್ಯದ ಬಗ್ಗೆ ಮಾತನಾಡುವುದಾದರೆ ಅವರ ಆದಾಯ ಗಳಿಕೆ ಸುಮಾರು 300 ಕೋಟಿ ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net