'ಸಪ್ತ ಸಾಗರದಾಚೆ ಎಲ್ಲೋ' ವೀಕ್ಷಿಸಿದ ಪ್ರಕಾಶ್​ ರೈ​; ಚಿತ್ರತಂಡಕ್ಕೆ ಹೇಳಿದ್ದಿಷ್ಟು

Untitled design - 2023-10-06T190230.737
Published on

ಬೆಂಗಳೂರು: ಸೆ.01 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಸ್ಯಾಂಡಲ್​ವುಡ್​ನ ಸಿಂಪಲ್ ಸ್ಟಾರ್, ನಟ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್​ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಇದೀಗ ಒಟಿಟಿಗೂ ಲಗ್ಗೆಯಿಟ್ಟಿದ್ದು, ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ.

ಈ ಸಿನಿಮಾ ವೀಕ್ಷಿಸಿದ ಕೆಲವು ಚಿತ್ರರಂಗದ ಕಲಾವಿದರು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಾಲಿಗೆ ನಟ ಪ್ರಕಾಶ್​ ರೈ ಕೂಡ ಸೇರ್ಪಡೆಗೊಂಡಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಬಹುಭಾಷಾ ನಟ ಪ್ರಕಾಶ್​ ರೈ, ಇತ್ತೀಚೆಗಷ್ಟೇ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಬಳಿಕ ಟ್ವೀಟ್​ ಮಾಡಿದ ನಟ, “ಸಪ್ತ ಸಾಗರದಾಚೆ ಎಲ್ಲೋ, ಆಹಾ!! ಒಂದು ಸುಂದರ ಹ್ರದಯಸ್ಪರ್ಶಿ ಅನುಭವ. ತಪ್ಪದೇ ನೋಡಿ, ಧನ್ಯವಾದಗಳು" ಎಂದು ಬರೆದು ಪೋಸ್ಟ್​ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್​ ಆಗಿದ್ದ 'ಸಪ್ತ ಸಾಗರದಾಚೆ ಎಲ್ಲೋ' ತದನಂತರದಲ್ಲಿ ತೆಲುಗು ಆವೃತ್ತಿಯಲ್ಲಿ 'ಸಪ್ತ ಸಾಗರಾಲೂ ದಾಟಿ' ಟೈಟಲ್​ನಡಿ ಬಿಡುಗಡೆಗೊಂಡಿತು. ತೆಲುಗು ಪ್ರೇಕ್ಷಕರಿಂದಲೂ ಉತ್ತಮ ರೆಸ್ಪಾನ್ಸ್​ ಪಡೆದ ಈ ಚಿತ್ರವು ಇದೀಗ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಸ್ಟ್ರೀಮಿಂಗ್​ಗೆ ಲಭ್ಯವಿದ್ದು, ನಾಲ್ಕು ಭಾಷೆಯಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net