More

    ನಮ್ಮ ಮೆಟ್ರೋದಲ್ಲಿ ಮಿತಿಮೀರಿದ ರೀಲ್ಸ್​ ಗೀಳು; ಯೂಟ್ಯೂಬರ್ ಪ್ರ್ಯಾಂಕ್ ವಿಡಿಯೋಗೆ ಗಾಬರಿಗೊಂಡ ಪ್ರಯಾಣಿಕರು

    ಬೆಂಗಳೂರು: ಇತ್ತೀಚಿನ ವರ್ಷಗಳಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಲ್ಫಾವಧಿಯ್ಲಲೇ ಸಾಕಷ್ಟು ಖ್ಯಾತಿ ಗಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರ್ಯಾಂಕ್​ ವಿಡಿಯೋಗಳನ್ನು ಮಾಡುವುದನ್ನು ನಾವು ನೋಡಿರುತ್ತೇವೆ. ಕೆಲವರು ಹುಚ್ಚಾಟವಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತದೆ.

    ಇದೀಗ ಬೆಂಗಳೂರು ಮೆಟ್ರೋದಲ್ಲಿ ಅಂತಹದ್ದೆ ಪ್ರಕರಣ ಒಂದು ಜರುಗಿದೆ. ಎಸ್ಕಲೇಟರ್ ಮೇಲೆ ಯೂಟ್ಯೂಬರ್ ಪ್ರ್ಯಾಂಕ್‌ ವಿಡಿಯೋ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿರುವ ಘಟನೆ ವಿಜಯನಗರದಿಂದ ಮೆಜೆಸ್ಟಿಕ್‌ ಮಾರ್ಗವಾಗಿ ಸಂಚರಿಸುವ ಪರ್ಪಲ್ ಲೈನ್‌ ಮೆಟ್ರೋದಲ್ಲಿ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಇದನ್ನೂ ಓದಿ: ‘ಪ್ರಧಾನಿ ಮೋದಿ ಕಾಂಗ್ರೆಸ್​ ಪಕ್ಷವನ್ನು ಎಷ್ಟು ಬೇಕಾದರೂ ಟೀಕಿಸಲಿ ಆದರೆ….’: ಮಲ್ಲಿಕಾರ್ಜುನ ಖರ್ಗೆ

    ಒಂದು ವಿಡಿಯೋದಲ್ಲಿ ನೋಡುವಂತೆ, ಚಲಿಸುತ್ತಿರುವ ಮೆಟ್ರೋದಲ್ಲಿ ಮೂರ್ಛೆ ಬಂದವರಂತೆ ಪ್ರಾಂಕ್ ಮಾಡಲಾಗಿದೆ. ಮತ್ತೊಂದು ವೀಡಿಯೋದಲ್ಲಿ, ಎಸ್ಕಲೇಟರ್​ನಲ್ಲಿ ಬರುವಾಗ ವಯಸ್ಸಾದ ವೃದ್ಧೆಯ ಮುಂದೆ ಪ್ರಾಂಕ್ ಮಾಡಿದ್ದು, ಈ ವೇಳೆ ವೃದ್ಧೆ ಗಾಬರಿಗೊಳ್ಳುವುದನ್ನು ಕಾಣಬಹುದಾಗಿದೆ. ಅಲ್ಲದೇ ಚಲಿಸುತ್ತಿದ್ದ ಮೆಟ್ರೋದಲ್ಲಿ ಮೂರ್ಛೆ ಬಂದವನಂತೆ ಪ್ರ್ಯಾಂಕ್‌ ಮಾಡುವುದನ್ನು ನೋಡಬಹುದಾಗಿದೆ.

    ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ BMRCL ಅಧಿಕಾರಿಗಳು  ಪ್ರ್ಯಾಂಕ್‌ ಮಾಡಿ ಪ್ರಯಾಣಿಕರನ್ನು ಗಾಬರಿಗೊಳಿಸಿದ ಯುವಕನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆತನ ಹೆಸರು ಪ್ರ್ಯಾಂಕ್‌ ಪ್ರಜ್ಜು ಎಂದು ತಿಳಿದುಬಂದಿದೆ. ಪ್ರ್ಯಾಂಕ್ ಪ್ರಜ್ಜು ಎಂಬ ಯುವಕನಿಂದ ಈ ಹುಚ್ಚಾಟ ನಡೆಸಿದ್ದು, ತನ್ನದೇ ಇನ್​ಸ್ಟಾಗ್ರಾಮ್​ನಲ್ಲಿ ವೀಡಿಯೋ ಹಂಚಿಕೊಂಡಿದ್ದಾನ. ಆತನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts