More

    ರಾಜಧಾನಿಯಲ್ಲಿ ಬಸ್​ ನಿಲ್ದಾಣಗಳೇ ನಾಪತ್ತೆ!; ಒಂದು ತಿಂಗಳ ಬಳಿಕ ದೂರು ದಾಖಲು!

    ಬೆಂಗಳೂರು: ಬಸ್​ನಲ್ಲಿ ಪರ್ಸ್ ಕಾಣೆಯಾಗುವುದು, ಬಸ್​ ನಿಲ್ದಾಣದಲ್ಲಿ ಬ್ಯಾಗ್ ಕಳೆದುಹೋಗುವುದು ಮಾತ್ರವಲ್ಲ ಬಸ್ ಮಿಸ್ ಆಗಿದ್ದನ್ನೂ ಕೇಳಿದ್ದೇವೆ. ಆದರೆ ಇದೀಗ ಬಸ್​ ನಿಲ್ದಾಣವೇ ಕಾಣೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಚ್ಚರಿ ಎಂದರೆ ಹೀಗೆ ಬಸ್​ ಸ್ಟ್ಯಾಂಡ್ ನಾಪತ್ತೆಯಾದ ತಿಂಗಳ ಬಳಿಕ ದೂರು ದಾಖಲಾಗಿದೆ.

    ಆಯುಕ್ತರ ಕಚೇರಿ ಹಿಂಭಾಗದಲ್ಲಿ ಇರುವ ಕನ್ನಿಂಗ್‌ಹ್ಯಾಮ್ ರಸ್ತೆಯ ಕಾಫಿ ಡೇ ಎದುರು 10 ಲಕ್ಷ ರೂ. ವೆಚ್ಚದಲ್ಲಿ ಬಿಬಿಎಂಪಿಯಿಂದ ಸ್ಟೇನ್ ಲೆಸ್ ಸ್ಟೀಲ್‌ನಲ್ಲಿ ಈ ಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಆ ಶೆಲ್ಟರ್​ ಫ್ರೇಮನ್ನೇ ಕಳವು ಮಾಡಿದ್ದಾರೆ.

    ಆ.21ರಂದು ಈ ಶೆಲ್ಟರ್ ನಿರ್ಮಾಣಗೊಂಡಿತ್ತು. ಆದರೆ ಕಳ್ಳರ ಗುಂಪೊಂದು ಇದನ್ನು ಕತ್ತರಿಸಿಕೊಂಡು ಹೋಗಿದ್ದು, ಆ.28ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಬಿಎಂಟಿಸಿಗೆ ಈ ಬಸ್​ ನಿಲ್ದಾಣಗಳನ್ನು ನಿರ್ಮಿಸಿಕೊಡುವ ಸೈನ್ಪೋಸ್ ಇಂಡಿಯಾ ಕಂಪನಿಯ ಉಪಾಧ್ಯಕ್ಷ ಎನ್.ರವಿ ರೆಡ್ಡಿ ಈ ಕುರಿತು ಹೈಗ್ರೌಂಡ್ಸ್​ ಠಾಣಾ ಪೊಲೀಸರಿಗೆ ಸೆ. 30ರಂದು ದೂರು ನೀಡಿದ್ದಾರೆ.

    ಹಾಗಂತ ರಾಜಧಾನಿ ಬೆಂಗಳೂರಿನಲ್ಲಿ ಇದೊಂದೇ ಪ್ರಕರಣವಲ್ಲ, ಬಸ್​ ನಿಲ್ದಾಣವನ್ನೇ ಕಳವು ಮಾಡಿರುವ ಇಂಥ ಅನೇಕ ಪ್ರಕರಣಗಳು ನಡೆದಿವೆ. ಎಚ್​ಆರ್​ಬಿಆರ್​ ಲೇಔಟ್, ಕಲ್ಯಾಣನಗರ, ದೂಪನಹಳ್ಳಿ ಮತ್ತು ಬಿಎಎಂಎಲ್ ಲೇಔಟ್, ರಾಜರಾಜೇಶ್ವರಿನಗರದಲ್ಲೂ ಬಸ್​ ನಿಲ್ದಾಣಗಳು ನಾಪತ್ತೆ ಆಗಿವೆ ಎಂಬುದೂ ಬೆಳಕಿಗೆ ಬಂದಿವೆ. ಇವೆಲ್ಲವೂ ಒಂದೇ ಕಳ್ಳ ಗ್ಯಾಂಗ್​ನ ಕೃತ್ಯವೇ ಅಥವಾ ಇದರ ಹಿಂದೆ ಭ್ರಷ್ಟಾಚಾರದ ನೆರಳಿದೆಯೇ ಎಂಬ ಅನುಮಾನಗಳು ಮೂಡಿವೆ.

    ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

    ಹೊಸದೂ ಬೇಡ, ಹಳೇದೂ ಬೇಡ: ಏನಿದು ಮಹಿಳೆಯರ ಒತ್ತಾಯ?; ಮಾನಿನಿಯರು ಒಲಿಯದ ಏಕೈಕ ಭಾಗ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts