ಚೆನ್ನೈ: ನಟ ದರ್ಶನ್ ಅಭಿನಯದ ಅಣ್ಣಾವ್ರು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ದಿವ್ಯಾ ಅಲಿಯಾಸ್ ಕನಿಹಾ ಸುಬ್ರಮಣ್ಯಂ ಒಂದು ಕಾಲದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ತಮಿಳುನಾಡು ಮೂಲದ ಕನಿಹಾ, ಕನ್ನಡ ಮತ್ತು ಮಲಯಾಳಂನ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಕಾಲಿವುಡ್ನಲ್ಲಿ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚುತ್ತಿರುವ ಕನಿಹಾ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋವನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಕನಿಹಾ ಅವರ ಫೋಟೋ ನೋಡಿದರೆ ಅರೇ ಅವರಿಗೆ ಏನಾಯಿತು ಅಂದುಕೊಳ್ಳುತ್ತೀರಿ. ಆಸಿಡ್ ದಾಳಿ ಸಂತ್ರಸ್ತೆಯರ ಮುಖದ ರೀತಿ ಕನಿಹಾ ಅವರ ಮುಖವಿದೆ. ಆದರೆ, ಕನಿಹಾ ಅವರಿಗೆ ವಾಸ್ತವವಾಗಿ ಏನು ಅಪಾಯವಾಗಿಲ್ಲ. ಏಕೆಂದರೆ, ಸಿನಿಮಾವೊಂದರ ಪಾತ್ರಕ್ಕಾಗಿ ಮಾಡಿದ ಮೇಕಪ್ ಇದಾಗಿದೆ. ನಟ ವಿಜಯ್ ಅಭಿನಯದ ಗೋಟ್ ಸಿನಿಮಾದಲ್ಲಿ ಕನಿಹಾ ಸಣ್ಣ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ದೃಶ್ಯವೊಂದಕ್ಕೆ ಬೆಂಕಿ ತಗುಲಿದಾಗ ಮುಖ ಸುಟ್ಟು ಹೋಗುವ ರೀತಿಯಲ್ಲಿ ಮೇಕಪ್ ಮಾಡಿಕೊಂಡಿದ್ದಾರೆ.
ಗೋಟ್ ಸಿನಿಮಾದಲ್ಲಿ ನಾನು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಆ ಒಂದು ದೃಶ್ಯದ ಹಿಂದೆ ಎಷ್ಟೆಲ್ಲ ಶ್ರಮವಿದೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇಲ್ಲಿದೆ ನೋಡಿ ಎಂದು ಕನಿಹಾ ಬರೆದುಕೊಂಡಿದ್ದಾರೆ. ಫೋಟೋ ಕುರಿತಾದ ವಾಸ್ತವಾಂಶ ತಿಳಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಪಾತ್ರಕ್ಕಾಗಿ ಕನಿಹಾ ಸಮರ್ಪಣಾ ಮನೋಭಾವವನ್ನು ಕೊಂಡಾಡಿದ್ದಾರೆ.
ಅಂದಹಾಗೆ ಕನಿಹಾ ಅವರು 2002ರಲ್ಲಿ ಮಣಿರತ್ನಂ ನಿರ್ದೇಶಿಸಿದ ಫೈವ್ ಸ್ಟಾರ್ ಎಂಬ ತಮಿಳು ಚಿತ್ರದೊಂದಿಗೆ ಉದ್ಯಮಕ್ಕೆ ಪ್ರವೇಶಿಸಿದರು. ಆ ನಂತರ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಆ ನಂತರ ಕನ್ನಡದಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಸ್ಯಾಂಡಲ್ವುಡ್ನಲ್ಲಿ ಅಣ್ಣಾವ್ರು, ಸೈ, ರಾಜಕುಮಾರಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಕನಿಹಾ ಸುಬ್ರಮಣ್ಯಂ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2008ರಲ್ಲಿ ಅಮೆರಿಕನ್ ಸಾಫ್ಟ್‌ವೇರ್ ಇಂಜಿನಿಯರ್ ಶ್ಯಾಮ್ ರಾಧಾಕೃಷ್ಣನ್ ಅವರನ್ನು ವಿವಾಹವಾದರು. ದಂಪತಿಗೆ ಗಂಡು ಮಗುವಿದೆ. ಮದುವೆಯ ನಂತರ ಚಿತ್ರಗಳಿಗೆ ಸ್ವಲ್ಪ ಗ್ಯಾಪ್ ನೀಡಿದ ಕನಿಹಾ ಇತ್ತೀಚೆಗೆ ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್)
RRR ಚಿತ್ರದ ಈ ಪುಟ್ಟ ಹುಡುಗಿ ನಿಮಗೆ ನೆನಪಿದೆಯಾ? ಈಗ ಎಷ್ಟು ಬದಲಾಗಿದ್ದಾರೆ ನೋಡಿ…
ತನ್ನ ವಿಚಿತ್ರ ಸಂಭ್ರಮಾಚರಣೆಯಿಂದ ಅಂದು ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ಬಾಲಕ ಇಂದು ಹೇಗಿದ್ದಾನೆ ನೋಡಿ!