ತನ್ನ ವಿಚಿತ್ರ ಸಂಭ್ರಮಾಚರಣೆಯಿಂದ ಅಂದು ಜಾಲತಾಣದಲ್ಲಿ ಧೂಳೆಬ್ಬಿಸಿದ್ದ ಬಾಲಕ ಇಂದು ಹೇಗಿದ್ದಾನೆ ನೋಡಿ!

green t shirt boy meme
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ಮಾತ್ರ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಎಷ್ಟರಮಟ್ಟಿಗೆ ಅಂದರೆ, ಆ ವಿಡಿಯೋಗಳು ವರ್ಷಗಳೇ ಕಳೆದರು ಆಗಿಂದಾಗೇ ವೈರಲ್​ ಆಗುತ್ತಲೇ ಇರುತ್ತವೆ. ಅದೇ ರೀತಿ ಕೆಲವು ವರ್ಷಗಳಿಂದ ಒಂದು ವಿಡಿಯೋ ಆಗಾಗ ವಿಡಿಯೋ ವೈರಲ್​ ಆಗುತ್ತಲೇ ಇದೆ. ಆ ವಿಡಿಯೋವನ್ನು ನೋಡಿ ಇಂದಿಗೂ ನಗುವವರೂ ಇದ್ದಾರೆ. ಅದರಲ್ಲೂ ಕ್ರೀಡಾ ಪ್ರೇಮಿಗಳಿಗೆ ಆ ವಿಡಿಯೋ ತುಂಬಾ ಚೆನ್ನಾಗಿ ಗೊತ್ತು.

ವಿಡಿಯೋದಲ್ಲಿ ಹಸಿರು ಟೀ ಶರ್ಟ್ ಮತ್ತು ಹಸಿರುವ ಶಾರ್ಟ್ಸ್​ ಧರಿಸಿದ ಪುಟ್ಟ ಹುಡುಗನೊಬ್ಬ ಕ್ರೀಡಾಂಗಣದಲ್ಲಿ ಮ್ಯಾಚ್ ನೋಡುತ್ತಾ ಕುಳಿತಿರುವಾಗ ಪರದೆಯ ಮೇಲೆ ತನ್ನನ್ನು ನೋಡಿ ಒಂದು ಕ್ಷಣ ಅಚ್ಚರಿಗೊಂಡು, ಮರುಕ್ಷಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡುತ್ತಾನೆ. ಈ ವೇಳೆ ಟೀ ಶರ್ಟ್ ಅನ್ನು ಮೇಲಕ್ಕೆ ಎತ್ತಿ, ಸೊಂಟ ತಿರುಗಿಸುತ್ತಾ, ನಾಲಿಗೆ ಹೊರಚಾಚಿ ವಿಚಿತ್ರವಾಗಿ ಸಂಭ್ರಮಿಸುತ್ತಾನೆ. ಕ್ರೀಡಾ ಪ್ರೇಮಿಗಳಿಗೆ ಇಂದಿಗೂ ಈ ವಿಡಿಯೋ ಫೇವರಿಟ್​ ಆಗಿದೆ.

2013ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಯಿತು. ಇಂದಿಗೂ ಈ ವಿಡಿಯೋವನ್ನು ಹಲವು ಮೀಮ್​ಗಳಲ್ಲಿ ಬಳಸಿಕೊಳ್ಳುತ್ತಾರೆ. ಈ ಒಂದೇ ಒಂದು ವಿಡಿಯೋದಿಂದ ಆ ಹುಡುಗ ರಾತ್ರೋರಾತ್ರಿ ಸ್ಟಾರ್​ ಆಗಿದ್ದಾನೆ. ಇದೀಗ ಅದೇ ಹುಡುಗನಿಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ಟ್ರೆಂಡಿಂಗ್ ಆಗಿದೆ. ವಿಡಿಯೋ ನೋಡಿದವರು ಓಹೋ ಆ ಹುಡುಗ ಇವನೇ ಎಂದು ಆಶ್ಚರ್ಯಪಡುತ್ತಿದ್ದಾರೆ. ಆತ ಗುರುತಿಸಲಾಗದಷ್ಟು ಬದಲಾಗಿದ್ದಾನೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ ಆ ಹುಡುಗ ಓರ್ವ ಫುಟ್​ಬಾಲ್​ ಪ್ರೇಮಿ. ನಮ್ಮ ಭಾರತೀಯರಿಗೆ ಕ್ರಿಕೆಟ್ ಹುಚ್ಚಿರುವಷ್ಟು, ಕೆಲವು ದೇಶಗಳಲ್ಲಿ ಫುಟ್​ಬಾಲ್ ಹುಚ್ಚು ಹೆಚ್ಚು. ವಾಸ್ತವವಾಗಿ, ಫುಟ್​ಬಾಲ್​ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ. ಈ ಕ್ರೀಡೆಗೆ ಹುಚ್ಚು ಅಭಿಮಾನಿಗಳಿದ್ದಾರೆ. ಈ ಹಸಿರು ಟೀ ಶರ್ಟ್ ಹುಡುಗನಿಗೂ ಫುಟ್​ಬಾಲ್​ ಎಂದರೆ ತುಂಬಾ ಇಷ್ಟ. ಅಂದು ತಮ್ಮ ತಂಡದ ಮ್ಯಾಚ್ ನೋಡುವಾಗ ಗೋಲು ಹೊಡೆದಾಗ ಆ ರೀತಿ ಸಂಭ್ರಮಿಸಿದರು. ಅದೇ ವೇಳೆ ಕ್ಯಾಮರಾಮನ್ ಬಾಲಕನತ್ತ ಕ್ಯಾಮೆರಾ ತಿರುಗಿಸಿದ ವಿಡಿಯೋ ವೈರಲ್ ಆಗಿತ್ತು. ಇತ್ತೀಚೆಗೆ ಅದೇ ರೀತಿಯ ಸಂಭ್ರಮಾಚರಣೆಯನ್ನು ಮರುಸೃಷ್ಟಿಸಿ, ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net