ನವದೆಹಲಿ: ಮದುವೆ ಬಗ್ಗೆ ನನಗೆ ಸದುದ್ದೇಶವಿದೆ. ವೈವಾಹಿಕ ಬಂಧನಕ್ಕೆ ಕಾಲಿಡಬೇಕೆಂಬ ಆಸೆಯೂ ಇದೆ. ಕಾಲ ಕೂಡಿ ನಬಂದಾಗ ಖಂಡಿತಾ ಮದುವೆ ಮಾಡಿಕೊಳ್ಳುತ್ತೇನೆ ಎಂದು ಬಾಲಿವುಡ್ ನಟಿ, ಸಂಸದೆ ಕಂಗನಾ ರನೌತ್ ಮತ್ತೊಮ್ಮೆ ತನ್ನ ಮದುವೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!
ಹಿಮಾಚಲ ಪ್ರದೇಶದ ಮಂಡಿಯ ಸಂಸದೆಯೂ ಆಗಿರುವ ನಟಿಗೆ ಸಂಸಾರ ಆರಂಭಿಸಿ ಮದುವೆಯಾಗುವ ಯೋಜನೆ ಇದೆಯೇ ಎಂದು ಸಂದರ್ಶನವೊಂದರಲ್ಲಿ ಪ್ರಶ್ನಿಸಿದಾಗ, “ನಾನು ಖಂಡಿತವಾಗಿಯೂ ಮದುವೆಯಾಗಲು ಬಯಸುತ್ತೇನೆ” ಎಂದು ಹೇಳಿದರು.
ನಿಮ್ಮ ಈಗಿನ ಸಂಸದೀಯ ಅವಧಿಯಲ್ಲಿ ಮದುವೆ ನಡೆಯುತ್ತದೆಯೇ ಎಂದು ಕೇಳಿದಾಗ, ಪ್ರಸ್ತುತ ಅವಧಿಯ ನಂತರ ಮದುವೆಯಾಗುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಕಂಗನಾ ಮದುವೆಯಾಗುವ ಇಚ್ಛೆ ಬಹಿರಂಗವಾಗಿ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಈ ಹಿಂದೆ “ಸಂಗಾತಿ ಇಲ್ಲದೆ ಇರುವುದು ಕಷ್ಟ. ಒಬ್ಬರಿಲ್ಲದೆ ಇರುವುದು ಸುಲಭವಲ್ಲ. ಪ್ರತಿಯೊಬ್ಬರಿಗೂ ಒಬ್ಬ ಸಂಗಾತಿ ಇರಬೇಕು” ಎಂದಿದ್ದರು.
ಅದಕ್ಕೇನಾ ಪೂಜಾ ಬೋಲ್ಡ್ ಫೋಟೋ ಶೂಟ್? ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಹೀಗೊಂದು ಚರ್ಚೆ ಶುರು!