ಹೈದರಾಬಾದ್: ಟಾಲಿವುಡ್ನ ನಂಬರ್ ಒನ್ ನಾಯಕಿಯಾಗಿದ್ದ ಪೂಜಾ ಹೆಗ್ಡೆ ಸತತ ಸೋಲಿನಿಂದ ಕಂಗೆಟ್ಟಿದ್ದು, ಮತ್ತೆ ಜನಪ್ರಿಯತೆ ಗಳಿಸಲು ಹಾಟ್ಫೋಟೋಶೂಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಈಗ ವ್ಯಾಪಕವಾಗಿ ಕೇಳಿ ಬರುತ್ತಿವೆ.
ಇದನ್ನೂ ಓದಿ: ‘ಸಿನಿಮಾ ಇಂಡಸ್ಟ್ರಿಗಿಂತ ಹೊರಗೆ ರಕ್ಷಣೆ ಕಡಿಮೆ’: ಕಾಸ್ಟಿಂಗ್ ಕೌಚ್ ಕುರಿತು ಶ್ರದ್ಧಾ ಶ್ರೀನಾಥ್ ಪ್ರತಿಕ್ರಿಯೆ
ಪ್ರಭಾಸ್ ಜೊತೆಗಿನ ‘ರಾಧೆ ಶ್ಯಾಮ್’ ಸಿನಿಮಾದಿಂದ ಪೂಜಾ ಹೆಗ್ಡೆಗೆ ಬ್ಯಾಡ್ ಟೈಮ್ ಶುರುವಾಗಿದೆ. ನಟಿಸಿದ ಪ್ರತಿ ಸಿನಿಮಾವೂ ಫ್ಲಾಪ್ ಆಗಿದ್ದು, ಐರನ್ ಲೆಗ್ ಎಂಬ ಮುದ್ರೆ ಬಿದ್ದಿದೆ. ಹೀಗಾಗಿಯೇ ಟಾಪ್ ಸ್ಥಾನದಲ್ಲಿದ್ದ ನಟಿಗೆ ಅವಕಾಶಗಳೇ ಬಾರದಂತಾಗಿವೆ ಎನ್ನಲಾಗುತ್ತಿದೆ.
ಕನ್ನಡತಿ ಪೂಜಾ ಹೆಗ್ಡೆ ತೆಲುಗಿನಲ್ಲಿ ನಾಗ ಚೈತನ್ಯ ಅಭಿನಯದ ‘ಓ ಲೈಲಾ ಫಾರ್’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ವರುಣ್ ತೇಜ್ ಹೀರೋ ಆಗಿ ಪರಿಚಯವಾದ ‘ಮುಕುಂದ’ ಸಿನಿಮಾದಲ್ಲಿ ಉತ್ತಮ ನಟನೆ ತೋರಿ ತೆಲುಗರ ಮನಗೆದ್ದರು. ಬಳಿಕ
ಹರೀಶ್ ಶಂಕರ್ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ಅಭಿನಯದ ‘ದುವ್ವಾಡ ಜಗನ್ನಾಥಂ’ ಚಿತ್ರದ ಮೂಲಕ ಸ್ಟಾರ್ ಹೀರೋಯಿನ್ ಆದರು.
ತೆಲುಗಿನಲ್ಲಿ ಸತತ ಫ್ಲಾಪ್‌ಗಳೊಂದಿಗೆ ಪೂಜಾ ಸ್ಟಾರ್‌ಡಮ್ ಮೇಲೆ ಕಪ್ಪು ಛಾಯೆ ಬಿದ್ದಿತು. ಬಳಿಕ ಹಿಂದಿ ಚಿತ್ರರಂಗದತ್ತ ಪಯಣಬೆಳೆಸಿದ್ದು, ಸಲ್ಮಾನ್ ಖಾನ್ ಜೊತೆಗಿನ ಹಿಂದಿ ಚಿತ್ರಗಳಾದ ‘ಸರ್ಕಸ್’ ಮತ್ತು ‘ಕಿಸಿ ಕಾ ಭಾಯ್ ಕಿಸಿ ಕಾ ಜಾನ್’ ಫ್ಲಾಪ್ ಆದವು. ಅಲ್ಲಿ ಸಹ ಸ್ಟಾರ್‌ಡಮ್ ಕಡಿಮೆಯಾಯಿತು.
ಸದ್ಯ ಬಹುಭಾಷಾ ನಟಿ ಪೂಜಾ ಹೆಗ್ಡೆ ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲ ಎಂದೇ ಹೇಳಬೇಕು. ಸದ್ಯಕ್ಕೆ ‘ದೇವ’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈ ನಡುವೆ ಹಾಟ್ ಫೋಟೋ ಶೂಟ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಫೋಟೋಗಳನ್ನು ಹಾಕುತ್ತಿದ್ದು, ಅವಕಾಶಗಳು ಕಡಿಮೆಯಾದ್ದರಿಂದ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರೆಯೇ ಎಂಬ ಮಾತುಗಳು ತೆಲುಗು ಚಿತ್ರರಂಗದಿಂದ ವ್ಯಾಪಕವಾಗಿ ಕೇಳಿ ಬರುತ್ತಿವೆ.
ತಿಮ್ಮಪ್ಪ ದರ್ಶನಕ್ಕೆ ಆನ್‌ಲೈನ್ ಟಿಕೆಟ್ ಬುಕ್ಕಿಂಗ್: ನೋಂದಣಿಗೆ ಕಡಿಮೆ ಕಾಲಾವಕಾಶ!