'ಸಿನಿಮಾ ಇಂಡಸ್ಟ್ರಿಗಿಂತ ಹೊರಗೆ ರಕ್ಷಣೆ ಕಡಿಮೆ': ಕಾಸ್ಟಿಂಗ್ ಕೌಚ್ ಕುರಿತು ಶ್ರದ್ಧಾ ಶ್ರೀನಾಥ್ ಪ್ರತಿಕ್ರಿಯೆ

shradha srinath
Published on

ಚೆನ್ನೈ: ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ವಿಚಾರ ಭಾರಿ ಸದ್ದು ಮಾಡುತ್ತಿದೆ. ಮಲಯಾಳಂ ಚಿತ್ರರಂಗದಿಂದ ಪ್ರಾರಂಭವಾಗಿ ಕನ್ನಡ, ತೆಲುಗು, ತಮಿಳು ಭಾಷೆಗಳ ಸಿನಿ ಇಂಡಸ್ಟ್ರೀಗೂ ಹಬ್ಬಿದೆ. ಈ ವಿಷಯಕ್ಕೆ ಸಾಕಷ್ಟು ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಇದರ ಭಾಗವಾಗಿ ದಕ್ಷಿಣ ಭಾರತದ ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ಪ್ರತಿಕ್ರಿಯಿಸಿದ್ದಾರೆ. 'ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕರು ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ನನ್ನ ಮಟ್ಟಿಗೆ ನಾನು ಯಾವುದೇ ಕಹಿ ಅನುಭವ ಅಥವಾ ಘಟನೆಗಳನ್ನು ಎದುರಿಸಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

'ನಿಜ ಹೇಳಬೇಕೆಂದರೆ, ಚಲನಚಿತ್ರಗಳಿಗಿಂತ ಹೊರಗಿನ ಪ್ರಪಂಚದಲ್ಲಿ ಮಹಿಳೆಯರಿಗೆ ರಕ್ಷಣೆ ಕಡಿಮೆ ಇದೆ. ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದಂಥ ಘಟನೆಗಳು ನಡೆಯುತ್ತಿಲ್ಲ. ಸಮಾಜದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅಪರಾಧಗಳು ನಡೆಯುತ್ತಿವೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಕಾರು ಚಾಲಕ ಹೇಗೆ ವರ್ತಿಸುತ್ತಾನೋ ಎಂಬ ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ನಾನು ಸಮಾಜದಲ್ಲಿ ಆರಾಮದಾಯಕ ಮತ್ತು ನೈಸರ್ಗಿಕವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎಂದು ಶ್ರದ್ಧಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net