ಚೆನ್ನೈ: ನಟಿ ನಯನತಾರಾ ಇತ್ತೀಚೆಗೆ ತಮ್ಮ ಪತಿ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಹುಟ್ಟುಹಬ್ಬವನ್ನು ಆಚರಿಸಲು ಕೆಲವು ವಿಶೇಷ ಫೋಟೋಗಳನ್ನು ಸಾಮಾಜಿಕ ಮಾಧ್ಯಮದ ತನ್ನ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಆಕೆ ಪತಿಗೆ ಚುಂಬಿಸುತ್ತಿರುವುದು ಕಂಡುಬಂದಿದೆ. ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: 48ನೇ ವಯಸ್ಸಿನಲ್ಲಿ ಕಾಮಾಸಕ್ತಿ ಹೆಚ್ಚಿಸಿಕೊಂಡ ಟೈಟಾನಿಕ್ ಬ್ಯೂಟಿ! ಥೆರಪಿ ರಹಸ್ಯ ಬಿಚ್ಚಿಟ್ಟ ಕೇಟ್ ವಿನ್ಸ್‌ಲೆಟ್!
ಫೋಟೋಗಳ ಜೊತೆ ಟಿಪ್ಪಣಿ ಬರೆದಿರುವ ನಯನತಾರಾ, ‘ಹುಟ್ಟುಹಬ್ಬದ ಶುಭಾಶಯಗಳು. ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಲು ಪದಗಳು ಸಾಕಾಗುವುದಿಲ್ಲ. ನಿಮ್ಮ ಕನಸುಗಳು ನನಸಾಗುವಂತೆ ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದಿದ್ದಾರೆ.
ಇದೀಗ ಈ ಫೋಟೋಗಳು ವೈರಲ್ ಆಗಿವೆ. ‘ಇವರಿಬ್ಬರು ಮುದ್ದಾದ ಜೋಡಿ’, ‘ನಿಮ್ಮ ದಾಂಪತ್ಯ ಸುಖಕರವಾಗಿರಲಿ’ ಎಂದು ಹಲವು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ ಮೊದಲ ಬಾರಿಗೆ ‘ನೇನು ರೌಡಿನೇ’ ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಿದರು. ಆ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅವರಿಬ್ಬರು ಸ್ನೇಹಿತರಾದರು. ಏಳು ವರ್ಷದಿಂದ ಪ್ರೀತಿಸುತ್ತಿದ್ದರು. ಕಡೆಗೆ ಹಿರಿಯರ ಒಪ್ಪಿಗೆ ಮೇರೆಗೆ 2022ರಲ್ಲಿ ಮದುವೆಯಾದರು. ಬಾಡಿಗೆ ತಾಯ್ತನದ ಮೂಲಕ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ.
ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ವಿಘ್ನೇಶ್ ಶಿವನ್ ಸದ್ಯ ‘ಲವ್ ಇನ್ಸೂರೆನ್ಸ್ ಕಂಪನಿ’ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ‘ಅನ್ನಪುರಣಿ’ ಚಿತ್ರಕ್ಕಾಗಿ ನಯನತಾರಾ ಅತ್ಯುತ್ತಮ ನಟಿಯಾಗಿ ಸೈಮಾ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಅವರು ‘ಟೆಸ್ಟ್’, ‘ಡಿಯರ್ ಸ್ಟೂಡೆಂಟ್ಸ್’ ಮತ್ತು ‘ತನ್ನಿ ಒರುವನ್ 2’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ವಾರಕ್ಕೆ ಏಳು ಉದ್ಯೋಗ! 21 ವರ್ಷದ ಬ್ರಿಟನ್ ಮಹಿಳೆ ಮಾಸಿಕ ಆದಾಯ 2 ಲಕ್ಷ!!