48ನೇ ವಯಸ್ಸಿನಲ್ಲಿ ಕಾಮಾಸಕ್ತಿ ಹೆಚ್ಚಿಸಿಕೊಂಡ ಟೈಟಾನಿಕ್​ ಬ್ಯೂಟಿ! ಥೆರಪಿ ರಹಸ್ಯ ಬಿಚ್ಚಿಟ್ಟ ಕೇಟ್ ವಿನ್ಸ್‌ಲೆಟ್!

Kate Winslet

ನವದೆಹಲಿ: ಮೂಡ್ ಸ್ವಿಂಗ್​ನಿಂದ ಹಿಡಿದು ದೈಹಿಕ ಬದಲಾವಣೆಯವರೆಗೂ ನಮ್ಮ ದೇಹದ ಒಟ್ಟಾರೆ ಆರೋಗ್ಯದಲ್ಲಿ ಹಾರ್ಮೋನ್​ಗಳು ಮಹತ್ವದ ಪಾತ್ರ ವಹಿಸುತ್ತವೆ. ಹಾರ್ಮೋನ್​ಗಳಲ್ಲಿ ಒಂದು ಸಣ್ಣ ಅಸಮತೋಲನ ಉಂಟಾದರೂ ದೇಹದಲ್ಲಿ ಸಾಕಷ್ಟು ಏರಿಳಿತಗಳು ಸಂಭವಿಸುತ್ತವೆ.

ಇತ್ತೀಚೆಗೆ “ಹೌ ಟು ಫೇಲ್​ ವಿಥ್​ ಎಲಿಜಬೆತ್​-ಪಾರ್ಟ್​ 1” ಪಾಡಕಾಸ್ಟ್​ನಲ್ಲಿ ಟೈಟಾನಿಕ್​ ಸಿನಿಮಾ ಖ್ಯಾತಿಯ ಹಾಲಿವುಡ್​ ನಟಿ ಕೇಟ್​ ವಿನ್ಸ್​ಲೆಟ್ ಭಾಗವಹಿಸಿದ್ದರು. ಈ ವೇಳೆ ಅವರು ಲೈಂಗಿಕ ಆಸಕ್ತಿಯ ಬಗ್ಗೆ ಮುಕ್ತವಾಗಿ ಮಾತನಾಡಿದರು. ಕೆಲವೊಮ್ಮೆ ಮಹಿಳೆಯರಲ್ಲಿ ಕಾಮಾಸಕ್ತಿ ಕುಸಿತಗೊಳ್ಳುತ್ತದೆ. ಟೆಸ್ಟೋಸ್ಟೆರಾನ್ ಹಾರ್ಮೋನ್​ ಕಡಿಮೆಯಾಗುವುದರಿಂದ ಇದು ಸಂಭವಿಸುತ್ತದೆ. ಮಹಿಳೆಯರಲ್ಲೂ ಟೆಸ್ಟೋಸ್ಟೆರಾನ್ ಹಾರ್ಮೋನ್​ ಉತ್ಪತಿಯಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದರ ಮಟ್ಟ ಕುಸಿತಗೊಂಡಾಗ ಮಹಿಳೆಯರ ಲೈಂಗಿಕ ಆಸಕ್ತಿಯ ಮೇಲೆ ಪ್ರಭಾವ ಬೀರುತ್ತದೆ ಎಂದು 48 ವರ್ಷದ ಕೇಟ್​ ವಿನ್ಸ್​ಲೆಟ್​ ಹೇಳಿದರು.

ಟೆಸ್ಟೋಸ್ಟೆರಾನ್ ಹಾರ್ಮೋನ್​ಗಳು ಸಂಪೂರ್ಣ ಕಡಿಮೆಯಾದಾಗ ಅವುಗಳನ್ನು ಬದಲಿಸಬೇಕಾಗುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಇದು ಸಾಧ್ಯವಿದೆ. ಟೆಸ್ಟೋಸ್ಟೆರಾನ್ ಹಾರ್ಮೋನ್​ಗಳ ಮಟ್ಟವನ್ನು ಮತ್ತೆ ಹೆಚ್ಚಿಸಿದಾಗ ಲೈಂಗಿಕ ಆಸಕ್ತಿ ಬೆಳೆಯುತ್ತದೆ. ಇದು ನನಗೆ ತುಂಬಾ ಗೊತ್ತಿದೆ ಎನ್ನುವ ಮೂಲಕ ತಾವು ಕೂಡ ಟೆಸ್ಟೋಸ್ಟೆರಾನ್ ಹಾರ್ಮೋನ್​ ಥೆರಪಿ ಮಾಡಿಸಿಕೊಂಡಿರುವುದಾಗಿ ಕೇಟ್​ ವಿನ್ಸ್​ಲೆಟ್ ಒಪ್ಪಿಕೊಂಡರು.

ಪಾಡ್​ಕಾಸ್ಟ್​ ಕೇಳುಗರೊಬ್ಬರು ತನ್ನ ದೀರ್ಘಾವಧಿಯ ಗೆಳೆಯನೊಂದಿಗೆ ಲೈಂಗಿಕ ಬಯಕೆಯನ್ನು ಕಳೆದುಕೊಳ್ಳುವ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ ಕೇಟ್​ ವಿನ್ಸ್​ಲೆಟ್​ ಈ ವಿವರಣೆಯನ್ನು ನೀಡಿದರು. ಅಲ್ಲದೆ, ದೈಹಿಕ ಆರೋಗ್ಯಕ್ಕಾಗಿ ನಾನು ಕೆಲ ಸಲಹೆಗಳನ್ನು ನೀಡುತ್ತೇನೆ. ನಿಮ್ಮ ಥೈರಾಯ್ಡ್ ಮತ್ತು ಟೆಸ್ಟೋಸ್ಟೆರಾನ್ ಮಟ್ಟವನ್ನು ಆಗಾಗ ಪರೀಕ್ಷಿಸಿ ಏಕೆಂದರೆ, ಈ ಎರಡೂ ಹಾರ್ಮೋನ್​ಗಳು ನಿಮ್ಮ ಭಾವನೆಗಳ ಮೇಲೆ ನೇರ ಪರಿಣಾಮ ಬೀರಬಹುದು ಎಂದರು. (ಏಜೆನ್ಸೀಸ್​)

ಸೈಕಲ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗ್ತಿದ್ದ ಲಾರಿ ಚಾಲಕನನ್ನು ಚೇಸ್​ ಮಾಡಿ ಹಿಡಿದ ನಟಿ ನವ್ಯಾ ನಾಯರ್​!

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಈ ಅಪರೂಪದ 2 ತಲೆ ಹಾವಿಗಿದೆ ಎರಡು ಹೆಸರು! ಒಂದಕ್ಕೆ ಹೆಚ್ಚು ಆಹಾರ ಕೊಟ್ರೆ ಇನ್ನೊಂದಕ್ಕೆ ಕೋಪ

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…