ಸೈಕಲ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗ್ತಿದ್ದ ಲಾರಿ ಚಾಲಕನನ್ನು ಚೇಸ್​ ಮಾಡಿ ಹಿಡಿದ ನಟಿ ನವ್ಯಾ ನಾಯರ್​!

Navya Nair

ಆಲಪ್ಪುಳ: ಸೈಕಲ್​ಗೆ ಡಿಕ್ಕಿ ಹೊಡೆದು ಎಸ್ಕೇಪ್​ ಆಗುತ್ತಿದ್ದ ಲಾರಿ ಚಾಲಕನನ್ನು ಚೇಸ್​ ಮಾಡಿ ಹಿಡಿಯುವ ಮೂಲಕ ನಟಿ ನವ್ಯಾ ನಾಯರ್​, ನಿಜ ಜೀವನಲ್ಲಿಯೂ ತಾನೊಬ್ಬ ನಾಯಕಿ ಎಂಬುದನ್ನು ಸಾಬೀತು ಮಾಡಿದ್ದಾರೆ.

ಆಲಪ್ಪುಳ ಜಿಲ್ಲೆಯ ಪಟ್ಟಣಕ್ಕಾಡ್ ಗ್ರಾಮದ ಇಂಡಿಯನ್​ ಕಾಫಿ ಹೌಸ್ ಬಳಿ ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ರಮೇಶನ್​ ಎಂಬುವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ರಮೇಶನ್​ ಪ್ರಯಾಣಿಸುತ್ತಿದ್ದ ಸೈಕಲ್‌ಗೆ ಹರಿಯಾಣ ನೋಂದಣಿಯ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದ ನಂತರ ಚಾಲಕ ಲಾರಿ ನಿಲ್ಲಿಸದೇ ಅಲ್ಲಿಂದ ಪರಾರಿಯಾಗುತ್ತಿರುವುದನ್ನು ನಟಿ ನವ್ಯಾ ಮತ್ತು ಅವರ ಕುಟುಂಬ ನೋಡಿದೆ. ತಕ್ಷಣ ಲಾರಿಯನ್ನು ಚೇಸ್​ ಮಾಡಿ, ತಡೆದು ನಿಲ್ಲಿಸಿದ್ದಾರೆ. ಬಳಿಕ ನವ್ಯಾ ಅವರು ಕಂಟ್ರೋಲ್ ರೂಂಗೆ ಕರೆ ಮಾಡಿ ಅಪಘಾತದ ವರದಿ ಮಾಡಿದ್ದಾರೆ.

ನವ್ಯಾ ಅವರು ವರದಿ ನೀಡುತ್ತಿದ್ದಂತೆ ಹೆದ್ದಾರಿ ಪೊಲೀಸರು ಮತ್ತು ಪಟ್ಟಣಕ್ಕಾಡ್ ಎಎಸ್​ಐ ಸ್ಥಳಕ್ಕೆ ತಲುಪಿ, ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಾಲಕನನ್ನು ಪೊಲೀಸರ ವಶಕ್ಕೆ ನೀಡಿ ನವ್ಯಾ ಅವರು ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಗಾಯಗೊಂಡ ರಮೇಶನ್​ ಅವರನ್ನು ಹೆದ್ದಾರಿ ಪೊಲೀಸ್ ವಾಹನದಲ್ಲಿ ತುರವೂರು ತಾಲೂಕು ಆಸ್ಪತ್ರೆಗೆ ಸಾಗಿಸಿ, ಅಲ್ಲಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಟಿ ನವ್ಯಾ ನಾಯರ್​ ಮತ್ತು ಅವರ ಕುಟುಂಬ ಮುತ್ತುಕುಲಂನಲ್ಲಿರುವ ತಮ್ಮ ಮನೆಯಲ್ಲಿ ಓಣಂ ಆಚರಣೆಯನ್ನು ಮುಗಿಸಿ ಎರ್ನಾಕುಲಂಗೆ ಮರಳುತ್ತಿದ್ದರು. ಕಾರಿನಲ್ಲಿ ನವ್ಯಾ ಜತೆಗೆ ಅವರ ತಂದೆ, ತಾಯಿ, ಸಹೋದರ ಹಾಗೂ ಮಗ ಸಾಯಿಕೃಷ್ಣ ಇದ್ದರು ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಈ ಅಪರೂಪದ 2 ತಲೆ ಹಾವಿಗಿದೆ ಎರಡು ಹೆಸರು! ಒಂದಕ್ಕೆ ಹೆಚ್ಚು ಆಹಾರ ಕೊಟ್ರೆ ಇನ್ನೊಂದಕ್ಕೆ ಕೋಪ

ಸೋನಂ​ ಕಪೂರ್​ಗಾಗಿ ಲಂಡನ್​ನಲ್ಲಿ 231 ಕೋಟಿಯ ಲಕ್ಷುರಿ ಮನೆ ಖರೀದಿಸಿದ ಮಾವ! ಶೀಘ್ರವೇ ಯುಕೆಗೆ ಶಿಫ್ಟ್​

Share This Article

ಗಂಟಲಲ್ಲಿ ಮೀನಿನ ಮುಳ್ಳು ಸಿಲುಕಿಕೊಂಡ್ರೆ ಏನು ಮಾಡ್ಬೇಕು? ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​ | Fish

ಮೀನು ( Fish ) ಗಳು ಅನೇಕ ಜನರ ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಮೀನು ಆರೋಗ್ಯಕ್ಕೆ…

ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರೋಲಿಂಗ್ ಮಾಡ್ತೀರಾ?  ಇದ್ರಿಂದಲೇ ಗೊತ್ತಾಗುತ್ತದೆ ನಿಮ್ಮ Personality traits…

ಬೆಂಗಳೂರು:  ಈಗ  ಕೆಲವು ಅಧ್ಯಯನಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು (Personality traits ) ಹುಟ್ಟಿದ ದಿನಾಂಕ, ಕಣ್ಣಿನ…

Salt Water : ಪ್ರತಿದಿನ ಬೆಳಗ್ಗೆ ಉಗುರು ಬೆಚ್ಚನೆಯ ನೀರಿನಲ್ಲಿ ಉಪ್ಪು ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?

ಬೆಂಗಳೂರು: ನಾವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳುವುದು ತುಂಬಾ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ