ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ಹಲವು ಕಾರಣಗಳಿವೆ ಎನ್ನುತ್ತಾರೆ ವೈದ್ಯರು.
ಇದನ್ನೂ ಓದಿ: ಅದಕ್ಕೇನಾ ಪೂಜಾ ಬೋಲ್ಡ್ ಫೋಟೋ ಶೂಟ್? ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಹೀಗೊಂದು ಚರ್ಚೆ ಶುರು!
ನಮ್ಮ ದೇಹದ ತೂಕವು ನಮ್ಮ ಆರೋಗ್ಯದ ಬಗ್ಗೆಯೂ ಹೇಳುತ್ತದೆ. ಆದ್ದರಿಂದ, ಸರಿಯಾದ ತೂಕವನ್ನು ಕಾಪಾಡಿಕೊಳ್ಳಲು ತಜ್ಞರು ಹೇಳುತ್ತಾರೆ. ಈ ಕಾರಣದಿಂದಾಗಿ, ಅಧಿಕ ತೂಕ ಹೊಂದಿರುವವರು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಕಡಿಮೆ ತೂಕವಿರುವವರು ತೂಕವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಯಾವುದೇ ಪ್ರಯತ್ನವಿಲ್ಲದೆ ಇದ್ದಕ್ಕಿದ್ದಂತೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ನಮ್ಮ ದೇಹದಲ್ಲಿನ ಕೆಲವು ಆರೋಗ್ಯ ಸಮಸ್ಯೆಗಳು ಕಾರಣವಾಗಿರಬಹುದು.
ಮಾನಸಿಕ ಸಮಸ್ಯೆಗಳಾದ ಖಿನ್ನತೆ, ಆತಂಕ, ಒಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಓಸಿಡಿ) ನಂತಹ ಆರೋಗ್ಯ ಸಮಸ್ಯೆಗಳು ಆಹಾರ ಸೇವಿಸುವುದರ ಮೇಲೆ ಪರಿಣಾಮ ಬೀರಬಹುದು. ಇದರಿಂದ ತೂಕ ಕಡಿಮೆಯಾಗುತ್ತದೆ.
ಇನ್ನು ಕೆಲವರು ಅನಾರೋಗ್ಯ ದೂರಮಾಡಿಕೊಳ್ಳಲು ಹೆಚ್ಚಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಇವು ಹಸಿವನ್ನು ಕಡಿಮೆ ಮಾಡುವ ಮೂಲಕ ಅಡ್ಡಪರಿಣಾಮ ಬೀರಿ ತೂಕ ನಷ್ಟಕ್ಕೆ ಕಾರಣವಾಗಬಹುದು. ಅದೇ ರೀತಿ ಪ್ಯಾಂಕ್ರಿಯಾಟೈಟಿಸ್‌ನಂತಹ ಜೀರ್ಣಕಾರಿ ಸಮಸ್ಯೆಗಳು ಸಹ ತೂಕ ನಷ್ಟಕ್ಕೆ ಕಾರಣವಾಗಬಹುದು. ಮಧುಮೇಹ, ಇರುವವರು ತಮ್ಮ ದೇಹವು ಸಾಕಷ್ಟು ಇನ್ಸುಲಿನ್ ಉತ್ಪಾದಿಸಲು ಮತ್ತು ಅದನ್ನು ಸರಿಯಾಗಿ ಬಳಸದಿದ್ದಾಗ ತೂಕವನ್ನು ಕಳೆದುಕೊಳ್ಳುತ್ತಾರೆ. ಹೈಪರ್ ಥೈರಾಯ್ಡಿಸಮ್ ಸಮಸ್ಯೆಯಿದ್ದರೂ ದೇಹ ತೂಕ ಕಳೆದುಕೊಳ್ಳುತ್ತಾರೆ.
ಅದೇ ರೀತಿ ಕ್ಯಾನ್ಸರ್, ದೀರ್ಘಕಾಲದ ಸೋಂಕುಗಳು, ಪಾರ್ಕಿನ್ಸನ್‌ನಂತಹ ಅಪಾಯಕಾರಿ ಸಮಸ್ಯೆಗಳು ಸಹ ತೂಕ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಸಮಸ್ಯೆ ಇದ್ದಾಗ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.
‘ಪೋಸ್ಟ್ ಹಾಕಿದ್ರೆ ಪ್ರಯೋಜನವಿಲ್ಲ, ದೂರು ನೀಡಬೇಕು’: ಪೂನಂ ಲೈಂಗಿಕ ಕಿರುಕುಳ ಆರೋಪಕ್ಕೆ ಫಿಲಂಚೇಂಬರ್ ಪ್ರತಿಕ್ರಿಯೆ!