More

    NCC ಯುನಿಫಾರ್ಮ್ ತೊಟ್ಟಿರುವ ಈ ನಟ ಯಾರು? ಗೆಸ್ ಮಾಡಿ!

    ಬೆಂಗಳೂರು: ಪ್ರತಿಯೊಬ್ಬರಿಗೂ ತಮ್ಮ ನೆಚ್ಚಿನ ನಟ-ನಟಿ ಬಾಲ್ಯದಲ್ಲಿ ಹೇಗಿದ್ದಿರಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಅಂತೆಯೇ ಸೆಲೆಬ್ರಿಟಿಗಳು ಕೂಡ ಆಗಾಗ್ಗೇ ತಮ್ಮ ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಈ ಫೋಟೋಗಳು ಸಾಕಷ್ಟು ವೈರಲ್ ಆಗುತ್ತವೆ. ಇದೀಗ ಸ್ಯಾಂಡಲ್​ವುಡ್​ನ ಸೂಪರ್ ಸ್ಟಾರ್ ಒಬ್ಬರು ತಮ್ಮ ಹಳೆಯ ಫೋಟೋವೊಂದನ್ನು ಇನ್ಸ್​ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ನಟ ಉಪೇಂದ್ರ ಸೋಶಿಯಲ್ ಮೀಡಿಯಾವನ್ನು ಸಕ್ರೀಯವಾಗಿ ಬಳಸುತ್ತಾರೆ. ಸಿನಿಮಾ ಹಾಗೂ ರಾಜಕೀಯ ವಿಚಾರಗಳ ಬಗ್ಗೆ ಜಾಲತಾಣಗಳಲ್ಲಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಾರೆ. ಇದೀಗ ಉಪೇಂದ್ರ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದು ಫ್ಯಾನ್ಸ್​ಗೂ ಖುಷಿಕೊಟ್ಟಿದೆ.

    ಇದನ್ನೂ ಓದಿ: ಫ್ಯಾಷನ್ ಉದ್ಯಮಿಯೊಂದಿಗೆ ಎರಡನೇ ಮದುವೆಯಾದ ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ!

     
     
     
     
     
    View this post on Instagram
     
     
     
     
     
     
     
     
     
     
     

    A post shared by Upendra (@nimmaupendra)

    ಉಪೇಂದ್ರ ಅವರು ಶೇರ್ ಮಾಡಿಕೊಂಡಿರುವ ಎರಡು ಫೋಟೋಗಳಲ್ಲಿ, ಒಂದು ಎನ್​ಸಿಸಿ ಯುನಿಫಾರ್ಮ್ ತೊಟ್ಟಿರುವ ಫೋಟೋ ಆಗಿದೆ. ಫೋಟೋ ನೋಡಿದಾಕ್ಷಣ ಇದು ಯಾರೆಂದು ಊಹಿಸಲು ಆರಂಭದಲ್ಲಿ ಫ್ಯಾನ್ಸ್​ಗೆ ಸಾಧ್ಯವಾಗಿಲ್ಲ. ಸದ್ಯ ಈ ಫೋಟೋಗಳಿಗೆ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ‘ಉಪೇಂದ್ರ ಯಾವತ್ತಿದ್ದರೂ ಸೂಪರ್’ ಎನ್ನುತ್ತಿದ್ದಾರೆ ಫ್ಯಾನ್ಸ್.

    ಸದ್ಯ ಉಪೇಂದ್ರ ಸಿನಿಮಾ ಕೆಲಸಗಳಲ್ಲಿ ಬಿಝಿಯಾಗಿದ್ದಾರೆ. ಎಂಟು ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದು, ‘ಯುಐ’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಜತೆಗೆ ಕಬ್ಜ-2 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts