

ಬೆಂಗಳೂರು: 'ಅವತಾರ ಪುರುಷ' ಸಿನಿಮಾ ಚಿತ್ರೀಕರಣ ವೇಳೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಟ ಶರಣ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ ಬೆಳಗ್ಗೆ ಎಚ್ಎಂಟಿ ಗ್ರೌಂಡ್ನಲ್ಲಿ ಸಿನಿಮಾ ಶೂಟಿಂಗ್ ನಡೆಯುತಿತ್ತು. ಆ ವೇಳೆ ತೀವ್ರ ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ ಶರಣ್ರನ್ನು ನಿರ್ದೇಶಕ ಸಿಂಪಲ್ ಸುನಿ ತಂಡ ಆಸ್ಪತ್ರೆಗೆ ಕರೆದೊಯ್ದರು. ಈ ಬಗ್ಗೆ 'ದಿಗ್ವಿಜಯ ನ್ಯೂಸ್' ಜತೆ ಮಾತನಾಡಿದ ನಟಿ ಶ್ರುತಿ, 'ಇಂದು ಅವತಾರ ಪುರುಷ ಶೂಟಿಂಗ್ನಲ್ಲಿ ಅಣ್ಣ ಭಾಗಿಯಾಗಿದ್ರು. ಅಲ್ಲಿ ಅಣ್ಣನಿಗೆ ಹೊಟ್ಟೆನೋವು ಕಾಡುತಿತ್ತು. ಕರೊನಾ ಹಿನ್ನೆಲೆಯಲ್ಲಿ ಮತ್ತು ಚಿತ್ರೀಕರಣಕ್ಕೆ ಸಮಸ್ಯೆ ಆಗುವ ಹಿನ್ನೆಲೆಯಲ್ಲಿ ಅವರು ತನ್ನ ನೋವನ್ನ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ನೋವು ಹೆಚ್ಚಾದ ಹಿನ್ನೆಲೆ ನೇರವಾಗಿ ಆಸ್ಪತ್ರೆಗೆ ಬಂದಿದ್ದಾರೆ' ಎಂದರು. ಇದನ್ನೂ ಓದಿರಿ VIDEO|ಶರಣ್ ಹುಟ್ಟು ಹಬ್ಬದ ಅಂಗವಾಗಿ ಅವತಾರ್ ಪುರುಷ ಚಿತ್ರದ ಟ್ರೈಲರ್ ಬಿಡುಗಡೆ
'ಶರಣ್ಗೆ ಕಿಡ್ನಿಯಲ್ಲಿ ಸ್ಟೋನ್ ಇದೆ ಎಂದು ಡಾಕ್ಟರ್ ಹೇಳಿದ್ದಾರೆ. ಇವತ್ತು ಆಸ್ಪತ್ರೆಯಲ್ಲೇ ಇರಲು ಸೂಚಿಸಿದ್ದಾರೆ. ಶೂಟಿಂಗ್ ಪೋಸ್ಟ್ ಪೋನ್ ಆಗಿದ್ದಕ್ಕೆ ತುಂಬಾ ಬೇಸರ ಪಟ್ಟುಕೊಂಡಿದ್ದಾನೆ. ಚಿಕಿತ್ಸೆ ಬಳಿಕ ನಾಳೆ(ಭಾನುವಾರ) ಮನೆಗೆ ಕಳಿಸುವ ಸಾಧ್ಯತೆ ಇದೆ' ಎಂದು ನಟಿ ಶ್ರುತಿ ಹೇಳಿದರು.