

ಬೆಂಗಳೂರು: ನಟ ನೀನಾಸಂ ಸತೀಶ್ ಸದ್ಯ ಪೆಟ್ರೋಮ್ಯಾಕ್ಸ್ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಕೊನೇ ಹಂತದ ಶೂಟಿಂಗ್ ಮುಕ್ತಾಯವಾಗಿ ಕುಂಬಳಕಾಯಿ ಒಡೆಯಲು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಆ ಚಿತ್ರದ ಚಿತ್ರೀಕರಣದ ಗ್ಯಾಪ್ನಲ್ಲೇ ನಟ ಸತೀಶ್ ಟೀ ಅಂಗಡಿಯಲ್ಲಿ ಠಿಕಾಣಿ ಹೂಡಿದ್ದಾರೆ.
ಹೌದು, ವಿಜಯ್ ಪ್ರಸಾದ್ ನಿರ್ದೇಶನದ ಪೆಟ್ರೋಮ್ಯಾಕ್ಸ್ ಸಿನಿಮಾ ಸದ್ಯ ಮೈಸೂರಿನ ಹಲವೆಡೆ ಶೂಟಿಂಗ್ ಮಾಡಿಕೊಳ್ಳುತ್ತಿದೆ. ಈ ಶೂಟಿಂಗ್ನ ಬಿಡುವಿನಲ್ಲಿ ಸೆಟ್ ಬಳಿಯ ಟೀ ಶಾಪ್ನಲ್ಲಿ ಸತೀಶ್ ಪ್ರತ್ಯಕ್ಷರಾಗಿ ಬಿಸಿ ಬಿಸಿ ಟೀ ಸವಿದು ಬಂದಿದ್ದಾರೆ. ಅಷ್ಟೇ ಅಲ್ಲ, ಖಡಕ್ ಟೀ ಮಿಕ್ಸಿಂಗ್ ಮಾಡುವ ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ತಾಜ್ ಮಹಲ್ ಎದುರು ಏನು ಮಾಡ್ತಿದ್ದಾರೆ ಅಕ್ಷಯ್?
ಇತ್ತೀಚೆಗಷ್ಟೇ ಇದೇ ಶೂಟಿಂಗ್ ಸೆಟ್ಗೆ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಭೇಟಿ ನೀಡಿದ್ದರು. ಇನ್ನೇನು ಜನವರಿ 4ಕ್ಕೆ ಚಿತ್ರದ ಶೂಟಿಂಗ್ ಮುಕ್ತಾಯಗೊಳ್ಳಲಿದ್ದು, 5ರಂದು ತಮಿಳು ಸಿನಿಮಾ ನಿಮಿತ್ತ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.