

Actor Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋವೊಂದು ವೈರಲ್ ಆಗಿದೆ. ಆ ಫೋಟೋದಲ್ಲಿ ಬಾಲಿವುಡ್ನ ದಿವಂಗತ ನಟಿ ಶ್ರೀದೇವಿ ಇದ್ದಾರೆ. ಅವರ ಜೊತೆ ಕೆಲವು ಮಹಿಳೆಯರು ಮತ್ತು ಮಕ್ಕಳಿದ್ದಾರೆ. ಆ ಮಕ್ಕಳಲ್ಲಿ ಓರ್ವ ಮಹಾನ್ ನಟ ಮತ್ತು ಅವರ ಆಸ್ತಿಯ ಮೌಲ್ಯ ಬರೋಬ್ಬರಿ 3000 ಕೋಟಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಹಾಗಾದರೆ, ಆ ನಟ ಯಾರು ಎಂದು ನಾವೀಗ ತಿಳಿದುಕೊಳ್ಳೋಣ.
ಬಾಲಿವುಡ್ನಲ್ಲಿ ನಟಿಸಿರುವ ಅನೇಕ ಸ್ಟಾರ್ ಮಕ್ಕಳು ಈಗ ಬಹಳ ಜನಪ್ರಿಯರಾಗಿದ್ದಾರೆ ಮತ್ತು ಚಲನಚಿತ್ರೋದ್ಯಮದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಕೆಲವು ಸ್ಟಾರ್ ಮಕ್ಕಳಿಗೆ ಅವರ ಕುಟುಂಬದ ಹಿನ್ನೆಲೆಯಿಂದಾಗಿ ಅವಕಾಶಗಳು ದೊರೆಯುತ್ತವೆ. ಅಲ್ಲದೆ, ಚಲನಚಿತ್ರೋದ್ಯಮದಲ್ಲಿ ಸ್ಥಿರವಾಗಿರಲು ಕೂಡ ಅನುವು ಮಾಡಿಕೊಡುತ್ತದೆ. ಪ್ರಸ್ತುತ ವೈರಲ್ ಆಗಿರುವ ಫೋಟೋದಲ್ಲಿ ಪ್ರಸಿದ್ಧ ನಟಿ ಶ್ರೀದೇವಿಯನ್ನು ನೋಡಬಹುದು. ಆ ಫೋಟೋದಲ್ಲಿರುವ ಮತ್ತು ಗುರುತು ಮಾಡಿರುವ ಈ ಪುಟ್ಟ ಹುಡುಗ ಈಗ ದೊಡ್ಡ ನಟ.
ಅಂದಹಾಗೆ, ಫೋಟೋದಲ್ಲಿರುವ ಈ ಹುಡುಗ ತುಂಬಾ ತುಂಟನಂತೆ ಕಾಣುತ್ತಾನೆ. ಆತ ಆ ಕಾಲದಲ್ಲಿ ಒಬ್ಬ ಸ್ಟಾರ್ ಮಗುವಾಗಿದ್ದ. ಆದರೆ, ಈಗ 40 ವರ್ಷ ದಾಟಿದ್ದು, ಸೂಪರ್ ಸ್ಟಾರ್ ಆಗಿದ್ದಾರೆ. ಬಾಲನಟನಂತೆ ಕಂಡರೂ, ಅವರ ಜೀವನವು ಅನೇಕ ಏರಿಳಿತಗಳನ್ನು ಕಂಡಿದೆ. ಅಂದಹಾಗೆ, ಈ ಮಗು ಬೇರೆ ಯಾರೂ ಅಲ್ಲ, ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್.
ಹೃತಿಕ್ ಅವರ ಬಾಲ್ಯ ಸುಲಭವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ ಅವರಿಗೆ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಅಂದರೆ, ಅವರು ಮೂಕರಾಗಿದ್ದರು. ಒಂದು ಕಾಲದಲ್ಲಿ, ಶಾಲೆಯಲ್ಲಿ ಅವರ ತೊದಲುವಿಕೆಯಿಂದಾಗಿ ಇತರ ವಿದ್ಯಾರ್ಥಿಗಳು ಅವರನ್ನು ಕೀಟಲೆ ಮಾಡುತ್ತಿದ್ದರು ಮತ್ತು ಗೇಲಿ ಮಾಡುತ್ತಿದ್ದರು. ಬಾಲ್ಯದಲ್ಲಿ ಪ್ರೀತಿಸುತ್ತಿದ್ದ ಶಾಲೆ ಅವರಿಗೆ ಭಯಾನಕ ಸ್ಥಳವಾಗಿತ್ತು. ಹೀಗಾಗಿ, ಶಾಲೆಯಲ್ಲಿರುವುದನ್ನು ಇಷ್ಟಪಡುತ್ತಿರಲಿಲ್ಲ. ಈ ಸಂಗತಿಯನ್ನು ಹಿಂದೊಮ್ಮೆ ಸಂದರ್ಶನದಲ್ಲಿ ಸ್ವತಃ ಹೃತಿಕ್ ಹೇಳಿಕೊಂಡಿದ್ದಾರೆ. ನಾನು ತುಂಬಾ ತೊದಲುತ್ತಿದ್ದೆ ಮತ್ತು ನನಗೆ ಏನೂ ಮಾತನಾಡಲು ಬರುತ್ತಿರಲಿಲ್ಲ. ಹೀಗಾಗಿ ನನಗೆ ಯಾವುದೇ ಸ್ನೇಹಿತರು ಅಥವಾ ಗೆಳತಿಯರು ಇರಲಿಲ್ಲ. ನಾನು ತುಂಬಾ ನಾಚಿಕೆಪಡುತ್ತಿದ್ದೆ ಮತ್ತು ಶಾಲೆಯಿಂದ ಹಿಂತಿರುಗಿದ ತಕ್ಷಣ ಅಳಲು ಪ್ರಾರಂಭಿಸುತ್ತಿದ್ದೆ ಎಂದು ತುಂಬಾ ಭಾವುಕರಾಗಿ ಹೇಳಿಕೊಂಡಿದ್ದರು.
ಹೃತಿಕ್ ರೋಷನ್ ಅವರಿಗೆ ಬೆನ್ನುಹುರಿಯ ಸಮಸ್ಯೆ ಇತ್ತು. ಅದರಿಂದ ನೀವು ಇನ್ನೆಂದೂ ನೃತ್ಯ ಮಾಡಲು ಸಾಧ್ಯವಿಲ್ಲ ಹೀಗಾಗಿ, ನಟನಾಗುವುದನ್ನು ಮರೆತುಬಿಡಿ ಎಂದು ವೈದ್ಯರು ಹೇಳಿದ್ದರು. ಬಾಲ್ಯದಿಂದಲೂ ನಟನೆಯಲ್ಲಿ ಆಸಕ್ತಿ ಹೊಂದಿದ್ದ ಹೃತಿಕ್ ರೋಷನ್ಗೆ ಇದು ಆಘಾತವನ್ನುಂಟುಮಾಡಿತು. ಇವುಗಳನ್ನು ಮೀರಿ, ಹೃತಿಕ್ ಅವರು ಚಿತ್ರರಂಗವನ್ನು ಪ್ರವೇಶಿಸಿದರು. ಇದರ ನಡುವೆ 2013 ರಲ್ಲಿ, ಹೃತಿಕ್ ರೋಷನ್ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾದಾಗ ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಿದರು. 2013, ಜುಲೈ 7ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಎಂಆರ್ಐ ಸ್ಕ್ಯಾನ್ನಲ್ಲಿ ಅವರ ಮೆದುಳಿನಲ್ಲಿ ಸಬ್ಡ್ಯೂರಲ್ ಹೆಮಟೋಮಾ, ಅಂದರೆ ರಕ್ತ ಹೆಪ್ಪುಗಟ್ಟುವಿಕೆ ಉಂಟಾಗಿರುವುದು ಕಂಡುಬಂದಿತು. 'ಬ್ಯಾಂಗ್ ಬ್ಯಾಂಗ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅವರ ತಲೆಗೆ ಆದ ಗಾಯದಿಂದಾಗಿ ಈ ಸಮಸ್ಯೆ ಉಂಟಾಯಿತು. ಇದರಿಂದಲೂ ಹೃತಿಕ್ ಗೆದ್ದು ಬಂದರು.
ತಮ್ಮ ದೈಹಿಕ ಕೊರತೆಯಿಂದ ನಟಿಸಲು ಕೂಡ ಅರ್ಹರಲ್ಲ ಎಂಬ ಟೀಕೆಗೆ ಗುರಿಯಾಗಿದ್ದ ಹೃತಿಕ್ ರೋಷನ್ ಇಂದು 3000 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮುಂಬೈನ ಜುಹು-ವರ್ಸೋವಾ ಲಿಂಕ್ ರಸ್ತೆಯಲ್ಲಿ ಹೃತಿಕ್ ಅವರು ಕೋಟ್ಯಂತರ ರೂಪಾಯಿಗಳ ಎರಡು ಐಷಾರಾಮಿ ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದಾರೆ. ಅವುಗಳ ಮೌಲ್ಯ ಸುಮಾರು 165 ಕೋಟಿ ರೂಪಾಯಿಗಳು. ಇದಲ್ಲದೆ, ಅವರು 32 ಕೋಟಿ ರೂಪಾಯಿಗಳ ಜುಹು ಅಪಾರ್ಟ್ಮೆಂಟ್, ಲೋನಾವಾಲದಲ್ಲಿ 7 ಎಕರೆ ಫಾರ್ಮ್ಹೌಸ್ ಮತ್ತು ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಹಲವಾರು ಪ್ರೀಮಿಯಂ ಆಸ್ತಿಗಳನ್ನು ಹೊಂದಿದ್ದಾರೆ. ಏನೇ ಇರಲಿ, ಅವರ ಒಟ್ಟು ಆಸ್ತಿ 3000 ಕೋಟಿ ರೂಪಾಯಿಗಳನ್ನು ಮೀರಿದೆ ಎಂದು ಹೇಳಲಾಗುತ್ತದೆ. (ಏಜೆನ್ಸೀಸ್)