ನವದೆಹಲಿ: ಫೆಬ್ರವರಿ 05ರಂದು ಮತದಾನ ನಡೆಯಲಿರುವ 70 ಸದಸ್ಯಬಲದ ದೆಹಲಿ ವಿಧಾನಸಭೆ ಚುನಾವಣಾ ಅಖಾಡ ರಂಗೇರಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಆಡಳಿತರೂಢ ಎಎಪಿ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಇನ್ನೂ ಚುನಾವಣೆ ಸಮಯದಲ್ಲಿ ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪ ಮಾಡುವುದು ಸಹಜ. ಅದೇ ರೀತಿ ಎಎಪಿ (AAP) ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ನಾಯಕರನ್ನು ಅಪ್ರಾಮಾಣಿಕ ಎಂದು ಕರೆಯುವ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿದೆ.
ಎಎಪಿ ಬಿಡುಗಡೆ ಮಾಡಿರುವ ಪೋಸ್ಟರ್ ನೋಡುವುದಾದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಯೋಗಿ ಆದಿತ್ಯನಾಥ್, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಕೆಲ ನಾಯಕರನ್ನು ಅಪ್ರಾಮಾಣಿಕ ಎಂದು ಬಣ್ಣಿಸಲಾಗಿದೆ. ಈ ವಿಚಾರ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದ್ದು, ಕಾಂಗ್ರೆಸ್ (Congress) ಎಎಪಿಗೆ ತಿರುಗೇಟು ನೀಡಿದೆ.
#WATCH | Delhi: Congress candidate from Kalkaji assembly constituency, Alka Lamba says, “…If Arvind Kejriwal has guts, he should announce that he is leaving the INDIA alliance. Congress party is standing strong with 100 MPs and Arvind Kejriwal is the one who gave all the 7… pic.twitter.com/LmPNrNvcNj
— ANI (@ANI) January 25, 2025
ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ (Congress) ನಾಯಕಿ ಅಲ್ಕಾ ಲಾಂಬಾ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಪಕ್ಷಕ್ಕೆ ದೆಹಲಿಯ ಏಳು ಲೋಕಸಭೆ ಕ್ಷೇತ್ರವನ್ನು ಬಿಟ್ಟು ಕೊಡಲಾಗಿತ್ತು. ಅರವಿಂದ್ ಕೇಜ್ರಿವಾಲ್ ಅವರಿಗೆ ಧೈರ್ಯವಿದ್ದರೆ, ಕೂಡಲೇ ಅವರು ಇಂಡಿಯಾ ಮೈತ್ರಿಕೂಟವನ್ನುತೊರೆಯುತ್ತಿರುವುದಾಗಿ ಘೋಷಿಸಬೇಕು. ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ 100 ಸಂಸದರಿದ್ದು, ದೆಹಲಿಯ ಏಳು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲು ಅರವಿಂದ್ ಕೇಜ್ರಿವಾಲ್ ಕಾರಣರಾದರು.
ಲೋಕಸಭೆ ಚುನಾವಣೆ ಸಮಯದಲ್ಲಿ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್ ನಾಯಕರಿಗೆ ದುಂಬಾಲು ಬಿದ್ದು, ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಿದ್ದೀರಾ. ನಿಮ್ಮ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.