

ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಮನೆಯ ಮೂವರು ಕೆಲಸದವರಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಅದಾದ ಬಳಿಕ ಕರಣ್ ಜೋಹರ್ ಮನೆ ಕೆಲಸದವರಿಗೂ ಸೋಂಕು ಅಂಟಿತ್ತು. ಅವರೆಲ್ಲರೂ ನೇರವಾಗಿ ಟ್ವಿಟರ್ ಮೂಲಕ ಆ ಸುದ್ದಿಯನ್ನು ಬಹಿರಂಗ ಪಡಿಸಿದ್ದರು. ಇದೀಗ ನಟ ಆಮೀರ್ ಖಾನ್ ಮನೆಯ ಕೆಲಸದವರಿಗೂ ಕರೊನಾ ಪಾಸಿಟಿವ್ ವರದಿಯಾಗಿದೆ. ಈ ವಿಚಾರವನ್ನು ಮುಂಬೈ ಪಾಲಿಕೆ ಗಮನಕ್ಕೆ ತಂದಿದ್ದಾರೆ ಆಮೀರ್.
ಹೌದು, ಮಂಗಳವಾರ ಟ್ವಿಟರ್ನಲ್ಲಿ ಈ ವಿಚಾರ ಹಂಚಿಕೊಂಡ ಅವರು, ‘ನಮ್ಮ ಮನೆಯ ಕೆಲಸದ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈಗಾಗಲೇ ಅವರನ್ನು ಕ್ವಾರಂಟೈನ್ ಮಾಡಲಾಗಿದೆ. ಪಾಲಿಕೆ ಸಹ ನಮ್ಮ ಜತೆ ಕೈ ಜೋಡಿಸಿದೆ. ಅದೇ ರೀತಿ ನಮ್ಮ ತಾಯಿಯನ್ನು ಕೋವಿಡ್ ಪರೀಕ್ಷೆಗೆ ಕರೆದೊಯ್ಯುತ್ತಿದ್ದೇನೆ. ನೆಗೆಟಿವ್ ಬರೆಲೆಂದು ಪ್ರಾರ್ಥಿಸುತ್ತಿದ್ದೇನೆ‘ ಎಂದು ಟ್ವಿಟ್ ಮಾಡಿದ್ದಾರೆ.
ಇನ್ನು ಬಾಲಿವುಡ್ನ ಹಲವು ಸಿನಿಮಾಮಂದಿಗೆ ಈವರೆಗೂ ಕರೊನಾ ತಗುಲಿದೆ. ಆ ಪೈಕಿ ಬಹುತೇಕರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಅದೇ ರೀತಿ ಒಂದಷ್ಟು ಜನ ಈಗಲೂ ಕ್ವಾರಂಟೈನ್ನಲ್ಲಿದ್ದಾರೆ. (ಏಜೆನ್ಸೀಸ್)