ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ

gani
Published on

ಬೆಂಗಳೂರು: ಈಗಾಗಲೇ ‘ಚಮಕ್’​ ಸಿನಿಮಾ ಮೂಲಕ ಮೊದಲ ಬಾರಿ ಒಂದಾಗಿದ್ದ ಗಣೇಶ್​ ಮತ್ತು ಸುನಿ ಕಾಂಬಿನೇಷನ್​ನಲ್ಲಿ ‘ಸಖತ್‘ ಸಿನಿಮಾ ಸಹ ಮೂಡಿಬರುತ್ತಿದೆ. ಇದೀಗ ಇದೇ ಜೋಡಿ ಎರಡನೇ ಸಿನಿಮಾಕ್ಕೂ ಮುನ್ನ ಮತ್ತೊಂದು ಪ್ರಾಜೆಕ್ಟ್​ಗೆ ಕೈ ಜೋಡಿಸಿದೆ. ಅಷ್ಟೇ ಅಲ್ಲ​ ಆ ಚಿತ್ರದ ಮೊದಲ ಲುಕ್​ ಸಹ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಸುನಿ.

ಅಂದಹಾಗೆ, ಆ ಸಿನಿಮಾ ಹೆರು ‘ದಿ ಸ್ಟೋರಿ ಆಫ್​ ರಾಯಗಢ’ 1980ರ ಕಾಲಘಟ್ಟದಲ್ಲಿ ನಡೆಯುವ ಕಥಾನಕವನ್ನು ಸಿನಿಮಾ ಮಾಡಲು ಹೊರಟಿರುವ ಸುನಿ, ಈ ಚಿತ್ರಕ್ಕೆ ಗಣೇಶ್​ ಅವರನ್ನು ಆಯ್ದುಕೊಂಡಿದ್ದು, ಅವರ ಜನ್ಮದಿನಕ್ಕೆ ಪೂರ್ವಭಾವಿಯಾಗಿ ಪೋಸ್ಟರ್ ರಿಲೀಸ್​ ಮಾಡಿ ಶುಭಕೋರಿದ್ದಾರೆ.

ಈಗಾಗಲೇ ತಾಂತ್ರಿಕ ವರ್ಗದಲ್ಲಿ ಎಂದಿನಂತೆ ಛಾಯಾಗ್ರಾಹಕರಾಗಿ ಸಂತೋಷ್​ ರೈ ಪಾತಾಜೆ, ಸಂಗೀತ ನಿರ್ದೇಶಕರಾಗಿ, ಜೂಡಾ ಸ್ಯಾಂಡಿ ಮುಂದುವರಿಯಲಿದ್ದಾರೆ. ಹಾಗಾದರೆ ಸಿನಿಮಾ ಯಾವಾಗ ಶುರು? ಈ ಸಿನಿಮಾ ಈಗಲೇ ಶುರುವಾಗಲಿದೆ ಎಂದು ಹೇಳಲು ಬರುವುದಿಲ್ಲ. ಸದ್ಯ ನಟ ಮತ್ತು ನಿರ್ದೇಶಕರ ಬತ್ತಳಿಕೆಯಲ್ಲಿ ಹಲವು ಸಿನಿಮಾಗಳು ಇರುವುದರಿಂದ 2022ಕ್ಕೆ ಈ ಸಿನಿಮಾ ಸೆಟ್ಟೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net