More

    ನೀವಂದುಕೊಂಡಂತೆ ಏನೂ ಇಲ್ಲ … ಯಶ್ ಫೋಟೋಗೆ ರಾಧಿಕಾ ಪಂಡಿತ್ ಕಮೆಂಟ್

    ಯಶ್ ಕಳೆದ ಮೂರು ತಿಂಗಳಿಂದ ಲಾಕ್‌ಡೌನ್‌ನಲ್ಲಿದ್ದಾರೆ. ಸಿನಿಮಾ ಶೂಟಿಂಗ್ ಬದಿಗಿಟ್ಟು, ಮಡದಿ ಮತ್ತು ಮುದ್ದಾದ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಅಪ್‌ಲೋಡ್ ಮಾಡುತ್ತ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ.

    ಹೀಗಿರುವಾಗಲೇ ಭಾನುವಾರ ಅವರು ಹಾಕಿದ ಪೋಸ್ಟ್‌ವೊಂದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಅಷ್ಟಕ್ಕೂ ಏನದು? ಅದೆಲ್ಲದಕ್ಕೂ ಇದೀಗ ಉತ್ತರ ಸಿಕ್ಕಿದೆ.

    ಇದನ್ನೂ ಓದಿ: ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ

    ಸಾಮಾನ್ಯವಾಗಿ ಯಶ್ ದಿನವಿಡೀ ಶೂಟಿಂಗ್ ಮುಗಿಸಿ, ರಾತ್ರಿ ಎಂಟರೊಳಗೆ ಮನೆ ಸೇರಿಕೊಳ್ಳುತ್ತಾರೆ. ಇನ್ನು ಭಾನುವಾರ ಸಂಪೂರ್ಣವಾಗಿ ತಮ್ಮ ಫ್ಯಾಮಿಲಿಯೊಂದಿಗೆ ಕಳೆಯುತ್ತಾರೆ. ಇದು ರಾಧಿಕಾ ಮಾಡಿದ ನಿಯಮವೋ ಅಥವಾ ಮನೆಯವರಿಗೆ ಸಮಯ ಮೀಸಲಿಡಬೇಕು ಎಂದು ತಾವೇ ರೂಪಿಸಿಕೊಂಡು ಬಂದ ನಿಯಮವೋ ಗೊತ್ತಿಲ್ಲ. ಒಟ್ಟಿನಲ್ಲಿ ಯಶ್, ಕೆಲವು ವರ್ಷಗಳಿಂದ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಈಗ ರಾಜ್ಯ ಸರ್ಕಾರ ಸಹ ರಾತ್ರಿ 8ರ ಒಳಗೆ ಎಲ್ಲರೂ ಮನೆ ಸೇರಿಕೊಳ್ಳಬೇಕು ಮತ್ತು ಭಾನುವಾರ ಎಲ್ಲೂ ಹೊರಹೋಗುವಂತಿಲ್ಲ ಎಂದು ಆದೇಶಿಸಿದೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಯಶ್ ಒಂದು ಪೋಸ್ಟ್ ಹಾಕಿದ್ದರು.

    ರಾಧಿಕಾ ಜತೆ ಕುಳಿತುಕೊಂಡು, ಹಣೆ ಮೇಲೆ ಮೂರು ಬೆರಳುಗಳನ್ನಿಟ್ಟುಕೊಂಡ ಭಂಗಿಯಲ್ಲಿರುವ ಫೋಟೋವನ್ನು ಯಶ್ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದರು. ಅದರ ಜತೆಗೆ, ‘ರಾಜ್ಯ ಸರ್ಕಾರವು ಲಾಕ್‌ಡೌನ್ ಕುರಿತಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ತರಹದ ಹೆಂಡ್ತಿಯರ ಫ್ರೆಂಡ್ಲಿ ನಿಯಮಗಳಿಂದ ನಾವು ಸುರಕ್ಷಿತವಾಗಿರುವುದಕ್ಕೆ ಸಾಧ್ಯವಾಗುತ್ತದೆ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಗಾಯಕಿ ಎಸ್​. ಜಾನಕಿ ಸಾವಿನ ವದಂತಿ!; ಕುಟುಂಬದ ಮೂಲಗಳು ಹೇಳುವುದೇನು?

    ಈ ಫೋಟೋದಲ್ಲಿ, ಯಶ್ ಹಣೆಯ ಮೇಲೆ ಮೂರು ಬೆರಳುಗಳನ್ನಿಟ್ಟುಕೊಂಡಿದ್ದನ್ನು ನೋಡಿದ ಅಭಿಮಾನಿಗಳು, ಯಶ್ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ಎಂಬ ಅರ್ಥದಲ್ಲಿ ಕಮೆಂಟ್‌ಗಳನ್ನು ಬರೆದಿದ್ದರು. ಹೀಗೆ ಬಗೆಬಗೆ ಕಮೆಂಟ್‌ಗಳು ಬಂದಿದ್ದೇ ತಡ, ಸ್ವತಃ ರಾಧಿಕಾ ಆ ಸುದ್ದಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ.

    ‘ಒಂದಷ್ಟು ಜನರು ಈ ಫೋಟೋದಲ್ಲಿನ ಸಿಗ್ನಲ್ ನೋಡಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹಾಗೇನು ತಿಳಿದುಕೊಳ್ಳಬೇಡಿ. ನಾನು ಗರ್ಭಿಣಿ ಆಗಿಲ್ಲ’ ಎಂದು ಏನೇನೋ ತಿಳಿದುಕೊಂಡವರ ಬಾಯಿ ಮುಚ್ಚಿಸಿದ್ದಾರೆ.

    ಹಾಟ್​ಸ್ಟಾರ್​ನಲ್ಲಿ ಬಾಂಬ್​ ಸಿಡಿಸಲು ಲಕ್ಷ್ಮೀ ರೆಡಿ; ಓಟಿಟಿಗೆ ಬಂದೇ ಬಿಟ್ರು ಬಾಲಿವುಡ್​ ಕಿಲಾಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts