More

    ಹಾಟ್​ಸ್ಟಾರ್​ನಲ್ಲಿ ಬಾಂಬ್​ ಸಿಡಿಸಲು ಲಕ್ಷ್ಮೀ ರೆಡಿ; ಓಟಿಟಿಗೆ ಬಂದೇ ಬಿಟ್ರು ಬಾಲಿವುಡ್​ ಕಿಲಾಡಿ …

    ಅಕ್ಷಯ್​ ಕುಮಾರ್​ ಮುಖ್ಯಭೂಮಿಕೆ ನಿಭಾಯಿಸಿರುವ ‘ಲಕ್ಷ್ಮೀ ಬಾಂಬ್​‘ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಹಾಗಂತ ಚಿತ್ರಮಂದಿರಗಳಲ್ಲಿ ಅಲ್ಲ. ಬದಲಿಗೆ ಓಟಿಟಿ ವೇದಿಕೆಯಲ್ಲಿ. ಹೌದು, ಕಳೆದ ಮೂರು ತಿಂಗಳಿಂದ ಲಾಕ್​ಡೌನ್ ಘೋಷಣೆ ಆಗಿದ್ದರಿಂದ ಸಿನಿಮಾ ಕೆಲಸಗಳು ಸ್ಥಗಿತಗೊಂಡು, ಸಿನಿಮಾ ಕ್ಷೇತ್ರಕ್ಕೆ ಬಾರೀ ನಷ್ಟವಾಗಿತ್ತು. ಬಳಿಕ ಒಂದಷ್ಟು ಮಂದಿ ನೇರವಾಗಿ ಓಟಿಟಿ ಮೂಲಕ ಸಿನಿಮಾ ಬಿಡುಗಡೆ ಮಾಡಿ ಗೆದ್ದರು. ಇದೀಗ ಅದೇ ಹಾದಿಯಲ್ಲಿ ಅಕ್ಷಯ್​ ಕುಮಾರ್ ಸಹ ಆಗಮಿಸುತ್ತಿದ್ದಾರೆ.

    ಇದನ್ನೂ ಓದಿ: ಗಾಯಕಿ ಎಸ್​. ಜಾನಕಿ ಸಾವಿನ ವದಂತಿ!; ಕುಟುಂಬದ ಮೂಲಗಳು ಹೇಳುವುದೇನು?

    ಅಂದಹಾಗೆ, ಈ ಮೊದಲು ‘ಲಕ್ಷ್ಮೀ ಬಾಂಬ್​’ ಸಿನಿಮಾ ನೇರವಾಗಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಮಾತುಗಳನ್ನು ತಳ್ಳಿಹಾಕಿ ನೇರವಾಗಿ ಓಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ರಾಘವ್​ ಲಾರೆನ್ಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ತಮಿಳಿನ ಕಾಂಚನಾ ಚಿತ್ರದ ರಿಮೇಕ್​. ಮೂಲ ಸಿನಿಮಾದಲ್ಲಿ ರಾಘವ್ ನಿಭಾಯಿಸಿದ್ದ ಸಿನಿಮಾವನ್ನು ಹಿಂದಿಯಲ್ಲಿ ಅಕ್ಷಯ್​ ಕುಮಾರ್ ನಿರ್ವಹಿಸಿದ್ದಾರೆ. ಇನ್ನುಳಿದಂತೆ ಕಿಯಾರಅ ಅಡ್ವಾಣಿ ನಾಯಕಿಯಾಗಿದ್ದಾರೆ. ಡಿಸ್ನಿ ಪ್ಲಸ್​ ಹಾಟ್​ಸ್ಟಾರ್ ವೇದಿಕೆಯಲ್ಲಿ ಶೀಘ್ರದಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

    ಇದನ್ನೂ ಓದಿ: ಗಾಯಕಿ ಎಸ್​. ಜಾನಕಿ ಸಾವಿನ ವದಂತಿ!; ಕುಟುಂಬದ ಮೂಲಗಳು ಹೇಳುವುದೇನು?

    ಸದ್ಯ ಈ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಿಕೊಂಡಿಲ್ಲ. ಇನ್ನೇನು ಶೀಘ್ರದಲ್ಲಿ ಆ ಬಗ್ಗೆಯೂ ಮಾಹಿತಿ ಹೊರಹಾಕಲಿದೆ. ಇನ್ನುಳಿದಂತೆ ಸುಶಾಂತ್ ಸಿಂಗ್​ ರಜಪೂತ್​ ನಟನೆಯ ದಿಲ್​ ಬೇಚಾರ, ಅಜಯ್​ ದೇವಗನ್​ ನಾಯಕತ್ವದ ಭುಜ್​, ಅಭಿಷೇಕ್​ ಬಚ್ಚನ್​ ಅವರ ಬಿಗ್ ಬುಲ್, ಆಲಿಯಾ ಭಟ್​ ನಟನೆಯ ಸಡಕ್​ 2 ಸಿನಿಮಾಗಳೂ ಸಹ ಇದೇ ಜುಲೈನಲ್ಲಿ ಓಟಿಟಿಯಲ್ಲಿ ಬಿಡುಗಡೆ ಆಗಲಿವೆ. (ಏಜೆನ್ಸೀಸ್​)

    ರಾಯಗಢಕ್ಕೆ ಹೊರಟು ನಿಂತ ಗೋಲ್ಡನ್​ ಸ್ಟಾರ್; ಸುನಿ ಜತೆ ಮತ್ತೊಂದು ಹೊಸ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts