ಊಟ ಕೊಡದಿದ್ದರೆ ಅರೆಸ್ಟ್ ಮಾಡಿಬಿಡುತ್ತೇನೆ! ಬಯಲಾಯ್ತು ಖತರ್ನಾಕ್​ ಕಳ್ಳಿಯ ಅಸಲಿಯತ್ತು

food
Published on

ದಲ್ಲಾಸ್​: 'ಈಗ ನನಗೆ ಊಟ ಕೊಡು. ಅದರ ಜತೆ ಪೂರಕ ಆಹಾರವನ್ನೂ ಕೊಡಬೇಕು. ಒಂದು ವೇಳೆ ನೀನು ಊಟ ಕೊಡದಿದ್ದರೆ ನಿನ್ನನ್ನು, ನಿನ್ ಪೂರ್ತಿ ರೆಸ್ಟೋರೆಂಟ್​ ಸಿಬ್ಬಂದಿಯನ್ನು ಬಂಧಿಸಿಬಿಡುತ್ತೇನೆ' ಎಂದು ಬೆದರಿಸಿ ಉಚಿತ ಊಟ ಮಾಡುತ್ತಿದ್ದ ಖತರ್ನಾಕ್​ ಕಳ್ಳಿ ಇದೀಗ ಸಿಕ್ಕಿಬಿದ್ದಿದ್ದಾಳೆ.

ಅಮೆರಿಕದ ಟೆಕ್ಸಾಸ್​ನಲ್ಲಿರುವ ದಲ್ಲಾಸ್​ನಲ್ಲಿ ಈ ಕಳ್ಳಿ ಇದ್ದಳು. ಆಕೆ ತಾನೊಬ್ಬ ಎಫ್​ಬಿಐ ಅಧಿಕಾರಿಯೆಂದು ಎಲ್ಲರಿಗೂ ಪರಿಚಯ ಮಾಡಿಸಿಕೊಳ್ಳುತ್ತಿದ್ದಳು. ಅದೇ ರೀತಿಯ ನಾಟಕವನ್ನು ರೆಸ್ಟೋರೆಂಟ್​ ಒಂದರಲ್ಲಿಯೂ ಮಾಡಿದ್ದಾಳೆ. ಆದರೆ ಅನುಮಾನ ಬಂದ ರೆಸ್ಟೋರೆಂಟ್​ ಮಾಲೀಕರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಆಕೆಯನ್ನು ಬಂಧಿಸುವಾಗಲೂ ಆಕೆ ನಾಟಕವನ್ನು ಮುಂದುವರಿಸಿದ್ದಾಳೆ. ತನ್ನ ಟೀಶರ್ಟ್​ನಲ್ಲಿ ಮೈಕ್ರೋಫೋನ್​ ಇದ್ದು, ಬೇರೊಬ್ಬ ಅಧಿಕಾರಿಯೊಂದಿಗೆ ಮಾತನಾಡುತ್ತಿರುವ ರೀತಿಯಲ್ಲಿ ನಟನೆ ಮಾಡಿದ್ದಾಳೆ. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಆಕೆಯನ್ನು ಜೈಲಿಗೆ ಅಟ್ಟಿದ್ದಾರೆ.

ಯಾವೊಬ್ಬ ಅಧಿಕಾರಿಯೂ ನಿಮ್ಮಲ್ಲಿ ಉಚಿತ ಊಟ ಕೇಳುವುದಿಲ್ಲ. ನೀವಾಗೇ ನೀವು ಕೊಟ್ಟರೆ ಸಂತೋಷದಿಂದ ಸ್ವೀಕರಿಸುತ್ತೇವೆ ಎಂದು ಅಲ್ಲಿನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಕಳ್ಳಿಯ ಕೈಲಿ 3 ಸಾವಿರ ಡಾಲರ್​ನ ಬಾಂಡ್​ ಬರೆಸಿಕೊಂಡು ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net