

ತುಮಕೂರು: ಹಾಡಹಗಲೇ ದಲಿತ ಸಂಘರ್ಷ ಸಮಿತಿ ಮುಖಂಡನನ್ನು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಇಂತಹ ಭಯಾನಕ ಕೃತ್ಯ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಬಿ.ಎಸ್. ರಸ್ತೆಯಲ್ಲಿ ಬುಧವಾರ ಸಂಭವಿಸಿದೆ. ನರಸಿಂಹಮೂರ್ತಿ(ಕುರಿ ಮೂರ್ತಿ) ಕೊಲೆಯಾದವರು. ಗುಬ್ಬಿ ತಾಲೂಕು ಡಿಎಸ್ಎಸ್ ಸಂಘದ ಸಂಚಾಲಕನಾಗಿದ್ದ ಕುರಿ ಮೂರ್ತಿ ಅವರು ಗುಬ್ಬಿ ಪಟ್ಟಣದ ಟೀ ಅಂಗಡಿ ಮುಂದೆ ಕುಳಿತ್ತಿದ್ದರು. ಇಂದು ಮಧ್ಯಾಹ್ನ 1 ಗಂಟೆ ವೇಳೆ ಅಂಗಡಿ ಬಳಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂಗೆ ಮನಸೋಇಚ್ಛೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ಕುರಿ ಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗುಬ್ಬಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕೊಲೆಗಾರರ ಬಂಧನಕ್ಕೆ ಬಲೆ ಬೀಸಿದ್ದಾರೆ.