ಚಿತ್ರದುರ್ಗದ ಕಾಡೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ! ತುಂಬಾ ಇಷ್ಟಪಟ್ಟು ಮದ್ವೆಯಾದರ ಬಾಳಿಗೆ ಕೊಳ್ಳಿ ಇಟ್ಟಿದ್ದೇನು?

lovers death
Published on

ಚಿತ್ರದುರ್ಗ: ಹೊಸದುರ್ಗ ತಾಲೂಕಿನ ಉಳವಿನಗೊಂದಿ ಕಾವಲು ಅರಣ್ಯ ಪ್ರದೇಶದಲ್ಲಿ ನವ ದಂಪತಿಯ ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 6 ತಿಂಗಳ ಹಿಂದಷ್ಟೇ ಈ ಜೋಡಿ ಪ್ರೀತಿಸಿ ಮದ್ವೆಯಾಗಿತ್ತು.

ಮಾರುತಿ(25) ಮತ್ತು ಇವರ ಪತ್ನಿ ಶ್ವೇತಾ (22) ಮೃತ ದುರ್ದೈವಿಗಳು. ಬಲ್ಲಾಳಸಮುದ್ರ ಗ್ರಾಮ ಸಮೀಪ ಉಳವಿನಗೊಂದಿ ಕಾವಲು ಅರಣ್ಯ ಪ್ರದೇಶದ ಮರವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮಾರುತಿ ಶವ ಪತ್ತೆಯಾದರೆ, ಸಮೀಪದಲ್ಲೇ ಕೊಳೆತ ಸ್ಥಿತಿಯಲ್ಲಿ ಶ್ವೇತಾಳ ಮೃತದೇಹ ಕಂಡು ಬಂದಿದೆ.

ಮಂಗಳವಾರ ಬೆಳಗ್ಗೆ ಉಳವಿನಗೊಂದಿ ಕಾವಲು ಪ್ರದೇಶಕ್ಕೆ ದನ ಮೇಯಿಸಲು ರೈತರು ಹೋದಾಗ ದುರ್ವಾಸನೆ ಬಂದಿದೆ. ಅಲ್ಲಿಗೆ ಹೋಗಿ ನೋಡಲಾಗಿ ಮೊದಲು ಯುವತಿಯ ಶವ ಕಂಡು ಬಂದಿದೆ. ಅಲ್ಲಿಯೇ ಸಮೀಪದ ಮರವೊಂದರಲ್ಲಿ ಯುವಕನ ಶವವೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶಿಲಿಸಿದಾಗ ಮೃತರ ಗುರುತು ಪತ್ತೆಯಾಗಿದೆ.

ಮಾರುತಿ ಮತ್ತು ಶ್ವೇತಾ ಇಬ್ಬರೂ ಪರಸ್ಪರ ಪ್ರೀತಿಸಿ ನೂರಾರು ಕನಸಿನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಾರೆಹಳ್ಳಿ ಭೋವಿಹಟ್ಟಿ ಮೂಲದ ಈ ದಂಪತಿ ವಾರದ ಹಿಂದೆ ನಾಪತ್ತೆಯಾಗಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಯೋ/ ಕೊಲೆಯೋ ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ಕೌಟುಂಬಿಕ ಕಲಹ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶ್ರೀರಾಂಪುರ ಠಾಣೆ ಸಿಪಿಐ ಶ್ರೀಧರ್ ಶಾಸ್ತ್ರಿ ಸ್ಥಳಕ್ಕೇ ಭೇಡಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net